'ಟಾಕ್ಸಿಕ್' ಬಿಟ್ಟು 2026ರಲ್ಲಿ ರಿಲೀಸ್ ಆಗ್ತಿರೋ ಕನ್ನಡ ಸಿನಿಮಾಗಳಿವು; ಕ್ಯೂನಲ್ಲಿ ಶಿವಣ್ಣ, ಗಣೇಶ್, ಡಾಲಿ

2026 ಕನ್ನಡ ಚಿತ್ರರಂಗದ ಮಟ್ಟಿಗೆ ಅದೃಷ್ಟದ ವರ್ಷ ಅನ್ನೋದು ಇನ್ನೂ ಸಾಬೀತಾಗಿಲ್ಲ. ಈ ಐದು ತಿಂಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಹೇಳಿಕೊಳ್ಳುವಂತಹ ಸಿನಿಮಾಗಳು ಬಂದಿಲ್ಲ. ಆಗಾಗ ಒಂದೆರಡು ಸಿನಿಮಾಗಳು ಆವರೇಜ್ ಹಿಟ್ ಕಂಡಿವೆ. ಅದು ಬಿಟ್ಟರೆ, ದೇಶವೇ ತಿರುಗಿ ನೋಡುವಂತಹ ಒಂದೇ ಒಂದು ಸಿನಿಮಾ ಕೂಡ ಬಂದಿಲ್ಲ. ಅದಕ್ಕಾಗಿ ಕನ್ನಡ ಸಿನಿಮಾ ಪ್ರಿಯರು ಎದುರು ನೋಡುತ್ತಿದ್ದಾರೆ.

ಈ ವರ್ಷದ ಮೊದಲಾರ್ಧದಲ್ಲಿಯೇ ಯಶ್ ನಟಿಸಿರುವ ಬಹು ನಿರೀಕ್ಷೆಯ ಸಿನಿಮಾ 'ಟಾಕ್ಸಿಕ್' ರಿಲೀಸ್ ಆಗಬೇಕಿತ್ತು. ಆದರೆ, ಅದು ಪೋಸ್‌ಪೋನ್ ಆಗಿದ್ದರಿಂದ ಇದ್ದ ಒಂದು ಹೋಪ್ ಕೂಡ ಮುಂದೂಡಲ್ಪಟ್ಟಿದೆ. 'ಕೆಡಿ ದಿ ಡೆವಿಲ್' ಮೇಲೆ ನಂಬಿಕೆ ಇಟ್ಟಿದ್ದರು. ಆದರೆ, ಆ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಸದ್ದು ಮಾಡಿಲ್ಲ. ಹೀಗಾಗಿ ಇದ್ದ ಒಂದೇ ಒಂದು ಸಿನಿಮಾ ಕೂಡ ಕೈ ಕೊಟ್ಟಿದೆ.

Other than Yash Toxic these Kannada movies going release in the year 2026

ಆದರೆ, 2026ರ ಸೆಕೆಂಡ್‌ ಹಾಫ್‌ನಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಬೇಕಿದೆ. ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಾಲಿ ಧನಂಜಯ್, ವಿನಯ್ ರಾಜ್‌ಕುಮಾರ್ ಅವರ ಸಿನಿಮಾಗಳು ಸೇರಿಕೊಂಡಿವೆ. ಹಾಗಿದ್ದರೆ, 2026ರಲ್ಲಿ ಯಾವ್ಯಾವ ನಟರ ಎಷ್ಟೆಷ್ಟು ಸಿನಿಮಾಗಳು ಬಿಡುಗಡಗೆ ಸಜ್ಜಾಗಿವೆ ಅನ್ನೋದು ತಿಳಿಯುವುದಕ್ಕೆ ಮುಂದೆ ಓದಿ.

ಯಶ್ 'ಟಾಕ್ಸಿಕ್' ಮೇಲೆ ಕಣ್ಣು

2026ರಲ್ಲಿ ರಿಲೀಸ್ ಆಗಲಿರುವ ಕನ್ನಡ ಸಿನಿಮಾಗಳ ಪೈಕಿ ಯಶ್ ನಟನೆಯ 'ಟಾಕ್ಸಿಕ್' ಟಾಪ್‌ನಲ್ಲಿದೆ. ಎಲ್ಲರ ಕಣ್ಣು ಈ ಸಿನಿಮಾ ಮೇಲಿದೆ. ಕನ್ನಡ ಚಿತ್ರರಂಗವನ್ನು ಈ ವರ್ಷ ಉಳಿಸಬಲ್ಲ ಸಿನಿಮಾ ಇದೊಂದೇನಾ? ಅದ್ಯಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಬಹುದಾದ ಸಿನಿಮಾ ಅಂದರೆ, 'ಟಾಕ್ಸಿಕ್' ಒಂದೇನೆ. ಇದು ಬಿಟ್ಟರೆ,ಮತ್ತೊಂದು ಸಿನಿಮಾ ಕಾಣಿತ್ತಿಲ್ಲ.

Also Read
ತುಮಕೂರಿನಲ್ಲಿ
ತುಮಕೂರಿನಲ್ಲಿ "ರಾಧಾ ರಾಧಾ" ಎಂದ 'ಬೃಂದಾವಿಹಾರಿ' ತಂಡ; ಸಿನಿಮಾ ಫ್ಯಾನ್ಸ್‌ಗೆ ಅರ್ಪಿಸಿದ ಗೋಲ್ಡನ್‌ ಸ್ಟಾರ್

ಕ್ಯೂನಲ್ಲಿ ಗಣೇಶ್, ಶಿವಣ್ಣ

ಯಶ್ 'ಟಾಕ್ಸಿಕ್' ಬಿಟ್ಟರೆ, 2026ರಲ್ಲಿ ಗಣೇಶ್ ಹಾಗೂ ಶಿವಣ್ಣ ನಟನೆಯ ಸಿನಿಮಾಗಳು ರಿಲೀಸ್‌ಗೆ ಕ್ಯೂನಲ್ಲಿ ಇವೆ. ಗಣೇಶ್ ಸಿನಿಮ 'ಬೃಂದಾವಿಹಾರಿ' ಈಗಾಗಲೇ ಪ್ರಚಾರವನ್ನು ಆರಂಭಿಸಿದೆ. ಅಂದುಕೊಂಡಂತೆ ಆದರೆ, ಆಗಸ್ಟ್ ತಿಂಗಳಿಗೂ ಮುನ್ನವೇ ಈ ಸಿನಿಮಾ ರಿಲೀಸ್ ಆದರೂ ಅಚ್ಚರಿ ಪಡಬೇಕಿಲ್ಲ. ಅಲ್ಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ಈ ವರ್ಷ ಮುಗಿಯುವುದರೊಳಗೆ ಇನ್ನೊಂದು ರಿಲೀಸ್ ಆಗಬಹುದೆಂಬ ನಿರೀಕ್ಷೆಯಿದೆ.

ಇನ್ನು ಜೂನ್‌ನಿಂದ ಶಿವಣ್ಣ ನಟಿಸಿದ ಸಿನಿಮಾಗಳು ಒಂದರ ಹಿಂದೊಂದು ರಿಲೀಸ್ ಆಗಲಿವೆ. ಜೂನ್ 4ರಂದು ರಾಮ್ ಚರಣ್ ಜೊತೆ ನಟಿಸಿದ 'ಪೆದ್ದಿ' ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಇದರೊಂದಿಗೆ ರಜನಿಕಾಂತ್ ಜೊತೆ ನಟಿಸಿರುವ 'ಜೈಲರ್ 2' ಬಿಡುಗಡೆಯಾಗಿದೆ. ಹಾಗೇ ಅಪ್ಪಟ ಕನ್ನಡ ಸಿನಿಮಾ 'ಡ್ಯಾಡಿ' ಇದೇ ವರ್ಷ ರಿಲೀಸ್ ಆಗಲಿದೆ. ಹಾಗೇ ಹೇಮಂತ್ ಎಂ ರಾವ್ ನಿರ್ದೇಶನ ಮಾಡುತ್ತಿರುವ '999 ಆಪರೇಷನ್ ಡ್ರೀಮ್ ಥಿಯೇಟರ್' ರಿಲೀಸ್ ಆದೂ ಅಚ್ಚರಿ ಪಡಬೇಕಿಲ್ಲ.

Other than Yash Toxic these Kannada movies going release in the year 2026

ಡಾಲಿ, ವಿಜಯ್, ವಿನಯ್ ರಾಜ್‌ಕುಮಾರ್

ಇನ್ನೂ ಡಾಲಿ ಧನಂಜಯ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಶಿವಣ್ಣ ಜೊತೆ ನಟಿಸುತ್ತಿರುವ '999 ಆಪರೇಷನ್ ಡ್ರೀಮ್ ಥಿಯೇಟರ್' ಕೊನೆಯ ಹಂತದ ಶೂಟಿಂಗ್‌ ನಡೆಯುತ್ತಿದೆ. ಹಾಗೇ 'ಅಣ್ಣ ಫ್ರಮ್ ಮೆಕ್ಸಿಕೋ'ದ ಪ್ರಚಾರ ಆರಂಭ ಆಗಿದೆ. ಇನ್ನೊಂದು ಅವರೇ ನಿರ್ಮಾಣ ಮಾಡುತ್ತಿರುವ 'ಮದರ್ ಪ್ರಾಮಿಸ್' ಸಿನಿಮಾ ಕೂಡ ರೆಡಿಯಾಗುತ್ತಿದೆ. ಈ ಸಿನಿಮಾ ಎರಡೂ ಸಿನಿಮಾ ಇದೇ ವರ್ಷ ರಿಲೀಸ್ ಆದರೂ ಆಗಬಹುದು.

ಇನ್ನು ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರೋ 'ಸಿಟಿ ಲೈಟ್ಸ್' ಮೇಲೆ ಎಲ್ಲರ ಕಣ್ಣು ಇದೆ. ಇದು ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ವಿಜಯ್ ಕುಮಾರ್‌ಗೆ ಚೊಚ್ಚಲ ಸಿನಿಮಾ. ಇದರಲ್ಲಿ ವಿನಯ್ ರಾಜ್‌ಕುಮಾರ್ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇವರದ್ದು ಈ ವರ್ಷ ಒಂದೂ ಸಿನಿಮಾವಿಲ್ಲ

ಈ ವರ್ಷ ಕನ್ನಡ ಚಿತ್ರರಂಗ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ರಿಲೀಸ್ ಆಗಿದ್ದೇ ಕಡಿಮೆ. ಇನ್ನು ಉಳಿದ ಆರು ತಿಂಗಳಲ್ಲೂ ಇವರ ಸಿನಿಮಗಳು ರಿಲೀಸ್ ಆಗುವುದಿಲ್ಲ. ಕಿಚ್ಚ ಸುದೀಪ್ ಅವರದ್ದು ಒಂದೇ ಒಂದು ಸಿನಿಮಾ ರಿಲೀಸ್ ಇಲ್ಲ. ದರ್ಶನ್ ಜೈಲಿನಲ್ಲಿದ್ದು, ಬಿಡುಗಡೆವರೆಗೂ ಸಿನಿಮಾ ಟೇಕಾಫ್ ಆಗಲ್ಲ. ಶ್ರೀಮುರಳಿ ಸಿನಿಮಾನೂ ಯಾವುದೂ ರಿಲೀಸ್ ಆಗಲ್ಲ. ಶರಣ್ ಸಿನಿಮಾಗಳಂತೂ ಸುದ್ದಿಗೇ ಇಲ್ಲ. ಇನ್ನು ಯುವರಾಜ್‌ಕುಮಾರ್ ಸಿನಿಮಾ ಯಾವಾಗ ಸೆಟ್ಟೇರುತ್ತೋ ಗೊತ್ತಿಲ್ಲ. ರಿಷಬ್ ಶೆಟ್ಟಿ ತೆಲುಗು ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಈ ವರ್ಷ ಕೂಡ ಸ್ಯಾಂಡಲ್‌ವುಡ್‌ಗೆ ನಷ್ಟ ಆಗೋದು ಗ್ಯಾರಂಟಿ.

English summary
Other than Yash Toxic these Kannada movies going release in the year 2026.
Read more about: sudeep ganesh kannada movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X