130+ ಸಿನಿಮಾಗಳಲ್ಲಿ ಶಿವಣ್ಣ ಇಷ್ಟ ಪಟ್ಟ ನಾಲ್ಕು ಪಾತ್ರಗಳು ಯಾವುದು ಗೊತ್ತೇ?
ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಇರುವಷ್ಟು ಬ್ಯುಸಿ ಮತ್ಯಾವ ನಟನೂ ಇಲ್ಲ. ಸದ್ಯ ಚಾಲ್ತಿಯಲ್ಲಿರುವ ಕನ್ನಡದ ಸೂಪರ್‌ಸ್ಟಾರ್‌ಗಳ ಪೈಕಿ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರೋದು ಇವರೇನೆ. ಇಲ್ಲಿವರೆಗೂ ಸುಮಾರು 130ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಶಿವಣ್ಣ ಇನ್ನೂ ಹೊಸ ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ.
ಸೆಂಚುರಿ ಸ್ಟಾರ್ ತಮ್ಮ ಸ್ವಂತ ಬ್ಯಾನರ್‌ನಿಂದ ನಿರ್ಮಾಣ ಮಾಡಿರುವ 'ಬೈರತಿ ರಣಗಲ್' ಸಿನಿಮಾ ಇನ್ನೇನು ಬಿಡುಗಡೆಯಾಗುತ್ತಿದೆ. ಮುಂದಿನ ತಿಂಗಳು ನವೆಂಬರ್ 14ರಂದು ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ರಿಲೀಸ್ ಆಗುತ್ತಿರುವ 'ಬಘೀರ' ಸಿನಿಮಾ ತಂಡದ ಜೊತೆ ಪ್ರಮೋಷನ್ ಮಾಡುತ್ತಿದ್ದಾರೆ. ಈ ವೇಳೆ 'ಭೈರತಿ ರಣಗಲ್' ಸಿನಿಮಾ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

'ಬಘೀರ' ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್‌ಗೆ ನೀಡಿದ ಸಂದರ್ಶನವಿದು. 'ಬೈರತಿ ರಣಗಲ್' ಕಡೆಯಿಂದ ಶಿವಣ್ಣ, ನಿರ್ದೇಶಕ ನರ್ತನ್ ಇದ್ದರೆ, ಇನ್ನೊಂದು ಕಡೆ 'ಬಘೀರ'ದಿಂದ ಶ್ರೀಮುರಳಿ ಹಾಗೂ ನಿರ್ದೇಶಕ ಡಾ.ಸೂರಿ ಇದ್ದರು. ಇವರ ಕಾಂಬಿನೇಷನ್ ಈಗಾಗಲೇ ಕ್ರೇಜ್ ಅನ್ನಂತೂ ಹುಟ್ಟಾಗಿದೆ. ಇದೇ ಸಂದರ್ಭದಲ್ಲಿ ಶಿವಣ್ಣ ತನ್ನ ಅಚ್ಚು ಮೆಚ್ಚಿನ ನಾಲ್ಕು ಪಾತ್ರಗಳು ಯಾವುವು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಶಿವಣ್ಣ 'ಬೈರತಿ ರಣಗಲ್' ಸಿನಿಮಾವನ್ನು ತಮ್ಮದೇ ಪ್ರೊಡಕ್ಷನ್ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದಾರೆ. 'ಮಫ್ತಿ' ಮಾಡುವಾಗ ಶ್ರೀ ಮುರಳಿ ಒತ್ತಾಯಕ್ಕೆ ಈ ಸಿನಿಮಾ ಮಾಡಿದ್ದರು. ಸಿನಿಮಾ ಬಿಡುಗಡೆಯಾದ ಬಳಿಕ ಅದೇ ಪಾತ್ರ ಫೇಮಸ್ ಆಗಿ ಹೋಯ್ತು. 'ಮಫ್ತಿ'ಯ ಬೈರತಿ ರಣಗಲ್ ಸ್ಟೈಲ್‌ಗೆ ಸಿನಿಪ್ರಿಯರ ತಲೆ ಕೆಡಿಸಿಕೊಂಡಿದ್ದರು. ಅಷ್ಟಕ್ಕೂ ಈ ಪಾತ್ರವನ್ನು ಶ್ರೀಮುರಳಿ ಒತ್ತಾಯಕ್ಕೆ ಮಾಡಿದ್ದರಂತೆ.

"ಮಫ್ತಿಯಲ್ಲಿ ಮುರಳಿ ಈ ಸಿನಿಮಾವನ್ನು ಮಾಡಲೇಬೇಕು ಅಂತ ಹೇಳಿದ್ದರು. ವಿದ್ಯಾ ಅವರೇ ಆ ಸಿನಿಮಾದಲ್ಲಿ ಡ್ರೆಸ್ ಕೋಡ್ ಅನ್ನು ಡಿಸೈನ್ ಮಾಡಿದ್ದರು. ಆ ಡ್ರೆಸ್ ಎಷ್ಟು ಪಾಪುಲರ್ ಆಯ್ತು ಅಂದರೆ, ನನ್ನ ಕರಿಯರ್‌ನಲ್ಲಿ ಇದೊಂದು ಮೈಲಿಗಲ್ಲು ಆಯ್ತು." ಎಂದು ಶ್ರೀಮುರಳಿ ಎದುರು ಶಿವಣ್ಣ ಹೇಳಿಕೊಂಡಿದ್ದಾರೆ.
ಈ ಸಂದರ್ಶನದಲ್ಲಿ ಶಿವಣ್ಣ ಇದೂವರೆಗೂ ನಟಿಸಿದ 130 ಸಿನಿಮಾಗಳಲ್ಲಿ ತಾನು ಇಷ್ಟ ಪಡುವ ನಾಲ್ಕು ಪಾತ್ರಗಳ ಹೆಸರನ್ನೂ ಸೂಚಿಸಿದ್ದಾರೆ."ಒಂದು ಐಕಾನಿಕ್ ಕ್ಯಾರೆಕ್ಟ್ ಕ್ರಿಯೇಟ್ ಆಯ್ತು. ಅಮೆರಿಕದಿಂದ ಒಬ್ಬರು ಮೆಸೇಜ್ ಮಾಡಿದ್ದರು. ಎಲ್ಲಿವರೆಗೂ ಕನ್ನಡ ಚಿತ್ರರಂಗ ಇರುತ್ತೋ ಅಲ್ಲಿವರೆಗೂ ನಾಲ್ಕೈದು ಪಾತ್ರಗಳು ಎಲ್ಲೂ ಹೋಗುವುದಿಲ್ಲ. ಓಂ ಸತ್ಯ ಇರಬಹುದು, ಇನ್ನೊಂದು ಜೋಗಿ ಮಾದೇಶ ಇರಬಹುದು, ಬೈರತಿ ರಣಗಲ್ ಕ್ಯಾರೆಕ್ಟರ್ ಇರಬಹುದು, ಟಗರು ಶಿವ ಈ ನಾಲ್ಕು ಪಾತ್ರಗಳು ನನ್ನ ಫೇವರಿಟ್." ಎಂದಿದ್ದಾರೆ.
ಹಾಗೇ "ನಾನು ಹೀಗೆ ಕಾಣಬೇಕು ಅಂತ ಅಂದುಕೊಳ್ಳುವುದಕ್ಕೆ ಆಗುವುದಿಲ್ಲ. ನೀವು ಡೈರೆಕ್ಟರ್‌ಗಳು ಇದ್ದೀರಲ್ಲ. ನಾನು ಒಬ್ಬ ಶಿವಣ್ಣನಾಗಿ ಎಲ್ಲರಿಗೂ ಕಾಣುತ್ತೇನೆ ಅಷ್ಟೇ. ರೆಗ್ಯೂಲರ್ ಲೈಫ್‌ನಲ್ಲಿ ಶಿವಣ್ಣ ಮಾರ್ನಿಂಗ್ ವಾಕ್ ಹೋಗುತ್ತಾರೆ. ತಿಂಡಿ, ಊಟ ಎಲ್ಲ ಮಾಡುತ್ತಾರೆ. ಕೆಲವೊಮ್ಮೆ ಪಾರ್ಟಿ ಮಾಡುತ್ತೇವೆ. ಅದನ್ನು ಬಿಟ್ಟು ಸಿನಿಮಾದಲ್ಲಿ ಯಾಕೆ ಹೀಗೆ ಕಾಣುತ್ತೇವೆ ಅಂದರೆ, ಅವರು ನಮ್ಮನ್ನು ಕ್ರಿಯೇಟ್ ಮಾಡುತ್ತಾರೆ." ಎಂದು ನಿರ್ದೇಶಕರನ್ನು ಶಿವಣ್ಣ ಹೊಗಳಿದ್ದಾರೆ.


Click it and Unblock the Notifications











