ಮತ್ತೆ ಮೂರು ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡ ಕನ್ನಡದ 'ರುದ್ರಿ' ಸಿನಿಮಾ
ಬಡಿಗೇರ್ ದೇವೇಂದ್ರ ಚೊಚ್ಚಲ ನಿರ್ದೇಶನದಲ್ಲಿ ಪಾವನಾ ಮುಖ್ಯ ಪಾತ್ರದಲ್ಲಿ ನಟಿಸಿರುವ 'ರುದ್ರಿ' ಚಿತ್ರ ಮತ್ತೊಂದು ಪ್ರಶಸ್ತಿ ಪಡೆದುಕೊಂಡಿದೆ. ಇಟಲಿಯ ಓನಿರೋಸ್ ಚಿತ್ರೋತ್ಸವದಲ್ಲಿ 'ರುದ್ರಿ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಾವನಾ ಗೌಡ ಅವರಿಗೆ ಒಲಿದಿತ್ತು. ಈಗ ಟ್ಯಾಗೋರ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಚಿತ್ರ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
Recommended Video
ಇಟಲಿನ ಓನಿರೋಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯ ಜತೆಗೆ ಅತ್ಯುತ್ತಮ ಪೋಸ್ಟರ್ ವಿಭಾಗದಲ್ಲಿಯೂ 'ರುದ್ರಿ' ಪ್ರಶಸ್ತಿ ಪಡೆದುಕೊಂಡಿತ್ತು. ಟ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟಿ ಪಾವನಾ ಅತ್ಯುತ್ತಮ ನಟಿ ಪ್ರಶಸ್ತಿ ಗೌರವ ಪಡೆದುಕೊಂಡಿದ್ದರೆ, ಬಡಿಗೇರ್ ದೇವೇಂದ್ರ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶನ ಹಾಗೂ ಅತ್ಯುತ್ತಮ ನರೇಟಿವ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿಗಳು ಬಂದಿವೆ.
ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯ ನೆಲದ ಕೆಲಸಕ್ಕಾಗಿ ಸತ್ಯಜಿತ್ ರೇ ಅವರ ಭೂಮಿ, ದೇಶಕ್ಕೆ ಮಹಾನ್ ವ್ಯಕ್ತಿಗಳನ್ನು ನೀಡಿದ ಭೂಮಿಯಿಂದ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಸಣ್ಣ ಮಟ್ಟದ ಸಾಧನೆ ಮಾಡಿದ ಖುಷಿಯ ಅನುಭವವಾಗುತ್ತಿದೆ ಎಂದು ಪಾವನಾ ಹೇಳಿಕೊಂಡಿದ್ದಾರೆ.

ಈ ಮೂಲಕ 'ರುದ್ರಿ'ಯ ಕಿರೀಟಕ್ಕೆ ಇನ್ನೂ ಮೂರು ಪುಕ್ಕಗಳು ಸಿಕ್ಕಿವೆ. 400ಕ್ಕೂ ಅಧಿಕ ಜಾಗತಿಕ ಸಿನಿಮಾಗಳ ನಡುವೆ ಕಠಿಣ ಸ್ಪರ್ಧೆಯಲ್ಲಿ ನಮಗೆ ಈ ಪ್ರಶಸ್ತಿಗಳು ದೊರಕಿರುವುದು ವಿಶೇಷ ಅನುಭವ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಈ ಚಿತ್ರ ಈಗಾಗಲೇ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇನ್ನೂ ಚಿತ್ರಮಂದಿರಗಳಲ್ಲಿ ತೆರೆ ಕಾಣುವ ಭಾಗ್ಯ ಸಿಕ್ಕಿಲ್ಲ. ಏಪ್ರಿಲ್‌ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಉದ್ದೇಶವಿತ್ತು. ಆದರೆ ಲಾಕ್ ಡೌನ್ ಕಾರಣದಿಂದ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ.


Click it and Unblock the Notifications











