ಅನಂತ್ ನಾಗ್‌ಗೆ ಪದ್ಮ ಭೂಷಣ; ಮೂರು ತಲೆಮಾರುಗಳ ಫೇವರಿಟ್ ನಟನಿಗೆ ಎನಂದ್ರು ನೆಟ್ಟಿಗರು?
ಸ್ಯಾಂಡಲ್‌ವುಡ್‌ನ ಲೆಜೆಂಡರಿ ಆಕ್ಟರ್ ಅನಂತ್‌ನಾಗ್‌ಗೆ ಪದ್ಮ ಪ್ರಶಸ್ತಿ ಲಭಿಸಿದೆ. ಇದು ಕೆಲವು ವರ್ಷಗಳಿಂದ ಕನ್ನಡಿಗರು ಆಸೆ ಆಗಿತ್ತು. ಅನಂತ್‌ನಾಗ್ ಅಂತಹ ಮೇರು ನಟನಿಗೆ ತಡವಾಗಿಯಾದರೂ ಪದ್ಮ ಭೂಷಣ ಪ್ರಶಸ್ತಿ ಸಿಕ್ಕಿದೆ. ಭಾರತದ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಭೂಷಣ ಸಿಕ್ಕಿರುವ ಅವರ ಅಭಿಮಾನಿಗಳಿಗೆ, ಕನ್ನಡಿಗರಿಗೆ ಹೆಮ್ಮೆ ಎನಿಸಿದೆ.
ಪದ್ಮ ಭೂಷಣ ಪ್ರಶಸ್ತಿ ಅನೌನ್ಸ್ ಆದ ಬಳಿಕ ಅನಂತ್ ನಾಗ್ ಮಾಧ್ಯಮಗಳಿಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ತಮಗೆ ಬಂದಿರುವ ಪ್ರಶಸ್ತಿಯನ್ನು ಕನ್ನಡಿಗರಿಗೆ ಅರ್ಪಿಸಿದ್ದಾರೆ. ಅವರಿಂದಲೇ ಈ ಪ್ರಶಸ್ತಿ ಬಂದಿದ್ದು ಖುಷಿಯಾಗಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಬರಬೇಕೆಂದು ಅಭಿಯಾನ ಶುರು ಮಾಡಿದ್ದರು.

ಈ ಪ್ರಶಸ್ತಿಯನ್ನು ಕನ್ನಡಿಗರೇ ಕೊಡಿಸಿದ್ದರಿಂದ ಅವರಿಗೆ ಈ ಪ್ರಶಸ್ತಿಯನ್ನು ಅರ್ಪಿಸಿದ್ದೇನೆ ಎಂದಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದ್ದಾರೆ. ನೆಟ್ಟಿಗರು ಖುಷಿಯಿಂದ ಅಭಿನಂದನೆಗಳನ್ನು ಅರ್ಪಿಸುತ್ತಿದ್ದಾರೆ. ಹಾಗಿದ್ದರೆ, ಹಿರಿಯ ನಟನಿಗೆ ನೆಟ್ಟಿಗರು ಹೇಗೆಲ್ಲ ಅಭಿನಂದನೆಗಳನ್ನು ಹೇಳುತ್ತಿದ್ದಾರೆ ಅನ್ನೋದನ್ನು ನೋಡೋಣ ಬನ್ನಿ.
ಅನಂತ್ ನಾಗ್‌ಗೆ ಸಿಕ್ಕಿರುವ ಗೌರವ
"ಕನ್ನಡ ಸಿನಿಮಾದ ಲೆಜೆಂಡರಿ ಆಕ್ಟರ್ ಅನಂತ್ ನಾಗ್/ ಅನಂತ್ ನಾಗರಕಟ್ಟೆ ಪದ್ಮ ಭೂಷಣ ಗೌರವಕ್ಕೆ ಪಾತ್ರರಾಗಿರುವುದು ಹೆಮ್ಮೆ. ಅವರ ಇಷ್ಟು ವರ್ಷದ ಸುದೀರ್ಘದ ಜರ್ನಿಗೆ ಸಿಕ್ಕಿದ ಸರಿಯಾದ ಗೌರವ. ಕನ್ನಡ ಸಿನಿಮಾವನ್ನು ಸುವರ್ಣಯುಗವನ್ನಾಗಿಸಿದ ಅನಂತ್ ನಾಗ್ ಅವರ ಜರ್ನಿ ಇಲ್ಲಿದೆ." ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ತೆರೆಮೇಲೆ ಮ್ಯಾಜಿಕ್
"ಬಾಲ್ಯದಿಂದಲೂ ಅನಂತ್ ನಾಗ್ ಸರ್ ಅವರು ಮಾಡಿದ ಮ್ಯಾಜಿಕ್ ಅನ್ನು ತೆರೆಮೇಲೆ ನೋಡುತ್ತಾ ಬರುತ್ತಿರುವುದಕ್ಕೆ ಹೆಮ್ಮೆ ಎನಿಸಿದೆ. 'ಗಣೇಶನ ಮದುವೆ' ಯಿಂದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾವರೆಗೂ ಮಿಲಿಯನ್ ಎಮೋಷನ್ಸ್ ಅನ್ನು ಅನುಭವಿಸಿದ್ದೇವೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡುತ್ತಿದ್ದಾರೆ.
ಮೂರು ತಲೆಮಾರುಗಳ ಫೇವರಿಟ್
"ಲೆಜೆಂಡರಿ ಆಕ್ಟರ್ ಪದ್ಮ ಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕೆ ಅರ್ಹರು. ನಮ್ಮ ಕುಟುಂಬದ ಮೂರು ತಲೆಮಾರುಗಳ ಫೇವರಿಟ್ ನಟರಾಗುವುದಕ್ಕೆ ಅವರ ಡೈಲಾಗ್, ಅವರ ಪಾತ್ರಗಳು & ಹಿಂಸೆ ರಹಿತ ಸಿನಿಮಾಗಳೇ ಕಾರಣ. ಇವರು ಭಾರತೀಯ ಸಿನಿಮಾದ ನಿಜವಾದ ಲೆಜೆಂಡ್." ಎಂದು ಇನ್ನೊಬ್ಬರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅನಂತ + ಪದ್ಮ ಭೂಷಣ= ಅನಂತ ಪದ್ಮಭೂಷಣ
"ಅನಂತ + ಪದ್ಮ ಭೂಷಣ= ಅನಂತ ಪದ್ಮಭೂಷಣ.. ಅಭಿನಂದನೆಗಳು ಅನಂತ್ ನಾಗ್ ಸರ್. ನಿಮ್ಮ ಕೈಗೆ ಬರ್ಲಿಕ್ಕೆ ಪದ್ಮಕ್ಕೆ ಈಗ ಯೋಗ್ಯತೆ ಬಂತು" ಎಂದು ಮತ್ತೊಬ್ಬರ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಅನಂತನಾಗ್ ಸರ್ ಅವರಿಗೆ ಅಭಿನಂದನೆಗಳು
"ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಅನಂತನಾಗ್ ಸರ್ ಅವರಿಗೆ ಅಭಿನಂದನೆಗಳು. ಚಲನಚಿತ್ರ ಕ್ಷೇತ್ರಕ್ಕೆ ನೀವು ನೀಡಿದ ಕೊಡುಗೆ ಅಪಾರ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ." ಎಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಂದು ಟ್ವೀಟ್ ಮಾಡಿದ್ದಾರೆ.
ಆ ಪ್ರಶಸ್ತಿಗೆ ಒಂದು ಗೌರವ ಬಂದಿದೆ
"ಸೆಲೆಬ್ರಿಟಿಯೊಬ್ಬರು ಪ್ರಶಸ್ತಿಯನ್ನು ಪಡೆಯುತ್ತಿರುವುದನ್ನು ನೋಡಿ ನಾನು ಯಾವಾಗ ಖುಷಿಯಾಗಿದ್ದೆ ಅನ್ನೋದು ನೆನಪಿಗೆ ಬರುತ್ತಿಲ್ಲ. ಅನಂತ್ ನಾಗ್ ಸರ್ ಅವರಿಗೆ ಪದ್ಮಭೂಷಣ ಸಿನಿಮಾ ಸಿಕ್ಕಿರುವುದು ಆ ಪ್ರಶಸ್ತಿಗೆ ಒಂದು ಗೌರವ ಬಂದಿದೆ. ಒಬ್ಬ ಅಭಿಮಾನಿಯಾಗಿ ಈ ಭಾವನೆ ನಿಜಕ್ಕೂ ವಾಸ್ತವಕ್ಕೆ ಹತ್ತಿಲ್ಲ ಅಲ್ಲ ಎಂದೆನಿಸುತ್ತಿದೆ. ಅವರ ಕಿರೀಟಕ್ಕೆ ಇನ್ನೂ ಅನೇಕ ಮುತ್ತುಗಳು ಇವೆ." ಎಂದು ಹೇಳಿದ್ದಾರೆ.


Click it and Unblock the Notifications











