ಅಮೆರಿಕದಲ್ಲಿ ಜೂನ್ 30 ಕ್ಕೆ 'ಹ್ಯಾಪಿ ನ್ಯೂ ಇಯರ್' ತೆರೆಗೆ

By Suneel

ಚಂದನವನದ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಪುತ್ರ ಪನ್ನಗ ಭರಣ ರವರ ಚೊಚ್ಚಲ ನಿರ್ದೇಶನದ ಚಿತ್ರ 'ಹ್ಯಾಪಿ ನ್ಯೂ ಇಯರ್' ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಬಹುದೊಡ್ಡ ತಾರಾಬಳಗದ ಈ ಚಿತ್ರವೀಗ ಅಮೆರಿಕದಲ್ಲಿನ ಕನ್ನಡಿಗರಿಗೆ ಮನರಂಜನೆ ನೀಡಲು ಹೊರಟಿದೆ.[ವಿಮರ್ಶೆ: ಒಳ್ಳೆಯದಕ್ಕೆ, ಹೊಸತನಕ್ಕೆ, ಸಂತೋಷಕ್ಕಾಗಿ 'ನ್ಯೂ ಇಯರ್'ವರೆಗೂ ಕಾಯದಿರಿ]

ಮೇ 5 ರಂದು ತೆರೆಕಂಡಿದ್ದ ಐದು ವಿಭಿನ್ನ ಕಥೆಗಳಿಂದ ಕೂಡಿರುವ 'ಹ್ಯಾಪಿ ನ್ಯೂ ಇಯರ್' ಕನ್ನಡ ಸಿನಿ ಪ್ರಿಯರಿಗೆ ಉತ್ತಮ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿ ಇಂದಿಗೆ 54 ನೇ ದಿನ ಪೂರೈಸಲಿದೆ. ಈ ಚಿತ್ರವೀಗ ಅಮೆರಿಕದಾದ್ಯಂತ ಜೂನ್ 30 ರಂದು ತೆರೆಕಾಣಲು ಸಜ್ಜಾಗಿದೆ.

Pannaga Bharana directorial 'Happy New Year' film all set to release in America

ಅಂದಹಾಗೆ ಅಮೆರಿಕದಲ್ಲಿ ಚಿತ್ರ ಬಿಡುಗಡೆ ಆಗುವ ಬಗ್ಗೆ ನಟಿ ಶ್ರುತಿ ಹರಿಹರನ್ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಅವರ ಅಭಿನಯದ 'ಬ್ಯೂಟಿಫೂಲ್ ಮನಸ್ಸುಗಳು' ಚಿತ್ರವು ಸಹ ಅಮೆರಿಕ, ಕೆನಡಾ ಮತ್ತು ಇತರೆ ದೇಶಗಳಲ್ಲಿ ತೆರೆಕಂಡಿತ್ತು.

ಐದು ವಿಭಿನ್ನ ಕಥೆಗಳ ಮೂಲಕ ಜೀವನದಲ್ಲಿ ಪ್ರತಿ ಕ್ಷಣವೂ ನಮ್ಮ ಜೀವನದ ಗತಿಯನ್ನು ನಿರ್ಧರಿಸುತ್ತದೆ. ಆದರೆ ಸದಾ ಖುಷಿಯಾಗಿರಲು ಪ್ರಯತ್ನಿಸಬೇಕು ಎಂಬ ನಿಟ್ಟಿನಲ್ಲಿ ಪನ್ನಗ ಭರಣ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಹಾಸ್ಯ ಸನ್ನಿವೇಶಗಳ ಮೂಲಕ ಸಂಪೂರ್ಣ ಮನರಂಜನೆ ನೀಡುವ ಈ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ, ದೂದ್ ಪೇಡಾ ದಿಗಂತ್, ಧನಂಜಯ್, ಬಿ.ಸಿ ಪಾಟೀಲ್, ಸಾಯಿಕುಮಾರ್, ಶ್ರುತಿ ಹರಿಹರನ್, ಸೋನು ಗೌಡ, ಸುಧಾರಾಣಿ, ಸೃಷ್ಟಿ ಪಾಟೀಲ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ ಪೊನ್ನಪ್ಪ, ಮಾರ್ಗರೀಟ ಮುಂತಾದವರ ಅಭಿನಯಿಸಿದ್ದರು. ಈ ಚಿತ್ರವನ್ನು ವನಜಾ ಪಾಟೀಲ್ ನಿರ್ಮಾಣ ಮಾಡಿದ್ದರು.

More from Filmibeat

English summary
Pannaga Bharana directorial 'Happy New Year' film all set to release in America on June 30th. Kannada Actor-Producer BC Patil, Actress Shrusti Patil, Kannada Actor Dhananjay, Kannada Actress Sruthi Hariharan, Actor Diganth in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X