»   » ವಿಮರ್ಶೆ: ಒಳ್ಳೆಯದಕ್ಕೆ, ಹೊಸತನಕ್ಕೆ, ಸಂತೋಷಕ್ಕಾಗಿ 'ನ್ಯೂ ಇಯರ್'ವರೆಗೂ ಕಾಯದಿರಿ

ವಿಮರ್ಶೆ: ಒಳ್ಳೆಯದಕ್ಕೆ, ಹೊಸತನಕ್ಕೆ, ಸಂತೋಷಕ್ಕಾಗಿ 'ನ್ಯೂ ಇಯರ್'ವರೆಗೂ ಕಾಯದಿರಿ

Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸಾಮಾನ್ಯವಾಗಿ ಬಹುಸಂಖ್ಯಾತರು ಯಾವುದೇ ಹೊಸ ಕೆಲಸ ಶುರುಮಾಡಲು, ಕುಟುಂಬದ ಜೊತೆ ಪ್ರವಾಸ ಹೋಗಲು, ತಮ್ಮಲ್ಲಿಯೇ ಹೊಸತನ ಕಂಡುಕೊಳ್ಳಲು ಹೊಸ ವರ್ಷದ ವರೆಗೆ ಕಾಯುತ್ತಾರೆ. ಆದರೆ ಇದಕ್ಕೆಲ್ಲಾ ಹೊಸ ವರ್ಷದವರೆಗೂ ಕಾಯಬೇಕಿಲ್ಲ. ನೀವು ಏನನ್ನು ಅಂದುಕೊಳ್ಳುತ್ತೀರೋ ಅದನ್ನು ಅಂದೇ ಮಾಡಿಮುಗಿಸಿ, ಹ್ಯಾಪಿ ಮೂಮೆಂಟ್ ಗಾಗಿ ಹೊಸ ವರ್ಷವನ್ನೇ ಕಾಯಬೇಕಿಲ್ಲ ಎಂದು ಚೊಚ್ಚಲ ನಿರ್ದೇಶಕ ಪನ್ನಗ ಭರಣ ತಮ್ಮ 'ಹ್ಯಾಪಿ ನ್ಯೂ ಇಯರ್' ಸಿನಿಮಾ ಮೂಲಕ ಹೇಳಿದ್ದಾರೆ.

  ನಿರ್ದೇಶಕ ಪನ್ನಗ ಭರಣ ತಮ್ಮ ಮೊದಲ ಚಿತ್ರದಲ್ಲೇ ಪ್ರೀತಿಯ ಹಲವು ಆಯಾಮಗಳನ್ನು ಹೇಳಿ, ಅದಕ್ಕೆ ನ್ಯಾಯ ಒದಗಿಸಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 'ಹ್ಯಾಪಿ ನ್ಯೂ ಇಯರ್' ಚಿತ್ರದ ಪೂರ್ಣ ವಿಮರ್ಶೆ ಇಲ್ಲಿದೆ ಓದಿರಿ..

  Rating:
  3.5/5
  Star Cast: ಬಿ.ಸಿ.ಪಾಟೀಲ್, ಸಾಯಿಕುಮಾರ್, ವಿಜಯ ರಾಘವೇಂದ್ರ, ದಿಗಂತ್
  Director: ಪನ್ನಗ ಭರಣ

  ಹೊಸ ವರುಷದ ಮುನ್ನೂಟದಲ್ಲಿ ಚಿತ್ರ ಶುರು

  ಚಿತ್ರದ ಟೈಟಲ್ ಹೇಳುವಂತೆಯೇ ರೇಡಿಯೋ ಜಾಕಿ ಡ್ಯಾನಿ(ಧನಂಜಯ್), ಹಲವರನ್ನು ಹೊಸ ವರ್ಷಕ್ಕೆ ನಿಮ್ಮ ಪ್ಲಾನ್ ಏನು, ಸಂಕಲ್ಪಗಳು ಏನು?, ನಮ್ಮ ಜೊತೆ ಹಂಚಿಕೊಳ್ಳಿ ಎಂದು ಹೇಳುವುದರ ಮೂಲಕ ಚಿತ್ರ ಶುರುವಾಗುತ್ತೆ.

  ಪ್ರೀತಿಯ ವಿವಿಧ ಛಾಯೆಗಳು

  ಐದು ಕಥೆಗಳನ್ನು ಹೊಂದಿರುವ ಚಿತ್ರದಲ್ಲಿ ರೇಡಿಯೋ ಜಾಕಿ ಡ್ಯಾನಿ(ಧನಂಜಯ್), ಹರ್ಷ(ದಿಂಗತ್), ಪೊಲೀಸ್ ಕಾಸ್ಟೆಬಲ್( ವಿಜಯ್ ರಾಘವೇಂದ್ರ), ಅಂಡರ್ ವರ್ಲ್ಡ್ ಡಾನ್ ಕೌರವ (ಬಿ.ಸಿ.ಪಾಟೀಲ್), ಬ್ಯುಸಿನೆಸ್ ಮ್ಯಾನ್ ವೆಂಕಟರಮಣ(ಸಾಯಿಕುಮಾರ್) ಇವರೆಲ್ಲರದ್ದು ಒಂದೊಂದು ಛಾಯೆಯ ಬ್ಯೂಟಿಫುಲ್ ಪ್ರೀತಿ ಇದೆ. ಎಲ್ಲರ ಕಥೆಯಲ್ಲೂ ಸಂತೋ‍ಷಕ್ಕಾಗಿ ಸಣ್ಣ ಸಣ್ಣ ಸಮಸ್ಯೆ. ಆ ಕ್ಷಣದ ಸಂತೋಷವನ್ನು ಮುಂದೂಡುವ ಚಾಳಿ. ಇಂತಹ ಸನ್ನಿವೇಶದಲ್ಲಿ ಚಿತ್ರದ ಮಧ್ಯಾಂತರದ ವೇಳೆಗೆ ಪ್ರತಿಯೊಬ್ಬರ ಕಥೆಗೂ ವಿಭಿನ್ನ ರೀತಿಯ ಟ್ವಿಸ್ಟ್. ಪೂರ್ಣ ಕಥೆ ಹೇಳಲ್ಲ. ಅದೇನು ಅನ್ನೋದನ್ನ ಚಿತ್ರಮಂದಿರಕ್ಕೆ ಹೋಗಿ ನೋಡಿ.

  ಐದು ಕಥೆಗಳಲ್ಲಿ ಐದು ವಯೋಮಾನದವರು

  ಒಂದೇ ಚಿತ್ರದಲ್ಲಿ ಐದು ಕಥೆಗಳನ್ನು ಹೇಳಿರುವ ನಿರ್ದೇಶಕರು ಪ್ರತಿಯೊಂದು ಕಥೆಯನ್ನು ವಿಭಿನ್ನ ವಯೋಮಾನದವರಿಂದ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ರೊಮ್ಯಾನ್ಸ್, ಲವ್, ದಾಂಪತ್ಯ ಜೀವನ, ಯಂಗ್ ಏಜ್ ಎಲ್ಲ ಮಜಲಿನ ಪ್ರೀತಿಯನ್ನು ಈ ಚಿತ್ರದಲ್ಲಿ ನೋಡಬಹುದು. ಪ್ರೀತಿ, ಎಮೋಷನ್, ಮನರಂಜನೆಯನ್ನು ಒಂದೇ ಸಮಯದಲ್ಲಿ ಐದು ಕಥೆಗಳ ಮೂಲಕ ಹೇಳುತ್ತಾ ಹೋಗುವ ನಿರ್ದೇಶಕರು ಪ್ರೇಕ್ಷಕರ ಕುತೂಹಲವನ್ನು ಕೊನೆವರೆಗೂ ಉಳಿಸಿಕೊಳ್ಳುತ್ತಾರೆ.

  ಹಲವು ವರ್ಷಗಳ ನಂತರ ಬಿ.ಸಿ.ಪಾಟೀಲ್ ಅಭಿನಯ ಹೇಗಿದೆ?

  'ಕೌರವ' ಖ್ಯಾತಿಯ ಬಿ.ಸಿ.ಪಾಟೀಲ್ ಹಲವು ವರ್ಷಗಳ ನಂತರ ಕಮ್ ಬ್ಯಾಕ್ ಆಗಿದ್ದರೂ ಹಿಂದಿನಂತೆಯೇ ಅವರ ನಟನೆಯಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಚಿತ್ರದಲ್ಲಿ ಅಂಡರ್ ವರ್ಲ್ಡ್ ಡಾನ್ 'ಕೌರವ' ಪಾತ್ರದಲ್ಲಿ ಅಭಿನಯಿಸಿದ್ದು ತಮ್ಮ ಸಂಭಾಷಣೆ, ಫೈಟಿಂಗ್ ನಿಂದ ಚಪ್ಪಾಳೆ ಗಿಟ್ಟಿಸುತ್ತಾರೆ.

  ಪೇಕ್ಷಕರಿಗೆ ಕಚಗುಳಿ ಇಡುವ ಸಾಯಿಕುಮಾರ್

  ಚಿತ್ರದಲ್ಲಿ ಮನರಂಜನೆಗಾಗಿಯೇ ಎಕ್ಟ್ರಾ ಕಾಮಿಡಿಯನ್ ಇಲ್ಲ. ಆದರೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಾಯಿಕುಮಾರ್ ತಮ್ಮ ಈ ಹಿಂದಿನ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಹಾಗೆ ಹೊಸ ರೀತಿಯಲ್ಲಿ ಅಭಿನಯಿಸಿದ್ದು, ತಮ್ಮ ನಟನೆ, ಡೈಲಾಗ್ ಗಳಿಂದ ಕಾಮಿಡಿ ನಟರಿಗಿಂಗ ಹೆಚ್ಚು ರಂಜಿಸುತ್ತಾರೆ. ಇವರಿಗೆ ಹೆಂಡತಿಯಾಗಿ ಸುಧಾರಾಣಿ ಅಭಿನಯ ಪೂರಕವಾಗಿದೆ. ಸಾಯಿ ಕುಮಾರ್ ಕಥೆಯೊಳಗೆ ಬರುವ ರಾಜಶ್ರೀ ಪೊನ್ನಪ್ಪ ಪಾತ್ರ 'ಹ್ಯಾಪಿ ನ್ಯೂ ಇಯರ್' ಚಿತ್ರದ ಪ್ಲಸ್ ಪಾಯಿಂಟ್. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ರಾಜಶ್ರೀ ಪೊನ್ನಪ್ಪ ಅಷ್ಟೇ ಆಶ್ಚರ್ಯಕರ ಟ್ವಿಸ್ಟ್ ಅನ್ನು ಚಿತ್ರದಲ್ಲಿ ನೀಡುತ್ತಾರೆ.

  ಧನಂಜಯ್ ಮತ್ತು ಶೃತಿ ಹರಿಹರನ್

  ಶ್ವಾಸಕೋಶ ತೊಂದರೆಯಿಂದ ಬಳಲುತ್ತಿರುವ ರೋಗಿ ಚಾರ್ವಿ (ಶ್ರುತಿ ಹರಿಹರನ್) ಉಳಿಸಿಕೊಳ್ಳಲು ಹೋರಾಡುವ ಪ್ರೇಮಿ ರೇಡಿಯೋ ಜಾಕಿ ಡ್ಯಾನಿ(ಸ್ಪೆಷಲ್ ಸ್ಟಾರ್ ಧನಂಜಯ್) ಪ್ರೇಮ ಕಥೆ ಪ್ರೇಕ್ಷಕರ ಕಣ್ಣಲ್ಲಿ ನೀರು ತರುವಷ್ಟು ಎಮೋಷನಲ್ ಆಗಿಯೂ ಅಷ್ಟೇ ರೊಮ್ಯಾಂಟಿಕ್ ಆಗಿಯೂ ಇದೆ. ರೋಗಿಯಾಗಿ ಶ್ರುತಿ ಹರಿಹರನ್ ಅಕ್ಷರಶಃ ನ್ಯಾಚುರಲ್ ಆಗಿ ನಟಿಸಿದ್ದಾರೆ. ಧನಂಜಯ್ ಅಭಿನಯ ಸ್ಪೆಷಲ್ ಆಗಿದೆ.

  ಪೊಲೀಸ್ ಕಾನ್‌ಸ್ಟೆಬಲ್ ಆಗಿ ಚಿನ್ನಾರಿ ಮುತ್ತ

  ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪೊಲೀಸ್ ಕಾನ್ಸ್ ಸ್ಟೆಬಲ್ ಪಾತ್ರದಲ್ಲಿ ನೋಡುಗರ ಮನಸ್ಸಿನಲ್ಲಿ ಉಳಿಯುತ್ತಾರೆ. ಇವರಿಗೆ ಹೆಂಡತಿಯಾಗಿ ಸಾಥ್ ನೀಡಿರುವ ಸೋನು ಗೌಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇವರ ಕಥೆಯಲ್ಲಿ ಕಾನ್‌ಸ್ಟೆಬಲ್ ಒಬ್ಬರ ನಿಜ ಜೀವನ ಹೇಗಿರುತ್ತದೆ ಎಂಬುದು ಚಿತ್ರಣವಾಗಿದೆ.

  ಯಂಗ್ ಏಜ್ ನಲ್ಲಿ ದಿಗಂತ್ ಮತ್ತು ಸೃಷ್ಟಿ ಪಾಟೀಲ್

  ಕಂಪನಿಯೊಂದರ ಉದ್ಯೋಗಿ ಹಾಗೂ ಬ್ಯಾಚುಲರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೂದ್ ಪೇಡಾ ದಿಗಂತ್ ಮತ್ತು ಸೃಷ್ಟಿ ಪಾಟೀಲ್ ಕಾಂಬಿನೇಷನ್ ನಲ್ಲಿ ಯಂಗ್ ಏಜ್ ಹುಡುಗ-ಹುಡುಗಿಯರ ಲೈಫ್ ಸ್ಟೈಲ್ ಮೂಡಿಬಂದಿದೆ. ಇವರ ಕಥೆಗೆ ಗಟ್ಟಿತನ ವಿದ್ದರೂ ಪಾತ್ರಗಳು ಹೆಚ್ಚು ಮನಸ್ಸಿಗೆ ಅಚ್ಚಾಗುವುದಿಲ್ಲ. ಅದಕ್ಕೆ ನಿರ್ದೇಶಕರು ಕಾರಣವಿರಬಹುದು.

  ಉಳಿದವರು

  ಚಿತ್ರದಲ್ಲಿ ತಬಲ ನಾಣಿ, ಪವನ್, ಕಡ್ಡಿ ಪುಡಿ ಚಂದ್ರು ಇತರರು ಅಭಿನಯಿಸಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ಆದರೇ ತಮ್ಮ ಪಾತ್ರಗಳಿಗೆ ಎಲ್ಲರೂ ನ್ಯಾಯ ಒದಗಿಸಿದ್ದಾರೆ.

  ನಿರ್ದೇಶನ ಹೇಗಿದೆ?

  ನಿರ್ದೇಶಕ ಪನ್ನಗ ಭರಣ ಚೊಚ್ಚಲ ಚಿತ್ರದಲ್ಲೇ ಆಂಥಾಲಜಿ(ಹಲವು ಕಥೆಗಳಿರುವ ಒಂದೇ ಸಿನಿಮಾ) ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ತಮ್ಮ ಸೃಜನಶೀಲತೆ ಮೆರೆದಿದ್ದಾರೆ. ಪ್ರತಿಯೊಂದು ಕಥೆಗೂ ಒಂದೇ ಸಮಯಕ್ಕೆ ತೆರೆ ಮೇಲೆ ಜಸ್ಟಿಫಿಕೇಶನ್ ನೀಡಿ ತಾಂತ್ರಿಕವಾಗಿಯೂ ಮನಮೋಹಕವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಮಧ್ಯಾಂತರದಲ್ಲಿಯ ಟ್ವಿಸ್ಟ್ ಬಗ್ಗೆ ಇನ್ನಷ್ಟು ಗಮನಹರಿಸಬೇಕಿತ್ತು ಮತ್ತು ಎಲ್ಲಾ ಕಥೆಗಳನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದರೆ ಇನ್ನೂ ಸೊಗಸಾಗಿ ಚಿತ್ರ ಮೂಡಿಬರುತ್ತಿತ್ತು.

  ರಘು ದೀಕ್ಷಿತ್ ಸಂಗೀತ

  ಚಿತ್ರದ ಸನ್ನಿವೇಶಗಳಿಗೆ ತಕ್ಕಂತೆ ರಘು ದೀಕ್ಷಿತ್ ಸಂಗೀತ ಪೇಕ್ಷಕರ ಮನಸ್ಸನ್ನು ತಣಿಸುತ್ತದೆ. ವಿಶೇಷವಾಗಿ ಐದು ಕಥೆಗಳಲ್ಲಿನ ಸಂದರ್ಭಕ್ಕೂ ಎಮೋಷನಲ್ ಮತ್ತು ಫೀಲಿಂಗ್ ಟಚ್ ನೀಡುವ ಒಂದೇ ಹಾಡು 'ಏನೋ.. ಇದು ಆಯಾಗಿದೆ. ನೂರು ಕನಸಿಗೆ ರಂಗೇರಿದೆ' ಪ್ರೇಕ್ಷಕರ ಕಿವಿಯಲ್ಲಿ ಚಿತ್ರಮಂದಿರದಿಂದ ಹೊರಗೆ ಬಂದರೂ ಗುನುಗುತ್ತದೆ.

  ತಾಂತ್ರಿಕವಾಗಿ ಚಿತ್ರ

  ಟೆಕ್ನಿಕಲಿ ಚಿತ್ರದಲ್ಲಿ ಯಾವುದೇ ಕೊರತೆ ಇಲ್ಲ. ಆದರೆ ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ ರವರು ಕ್ಯಾಮೆರಾ ವರ್ಕ್‌ ನಲ್ಲಿ ಇನ್ನೂ ಹೆಚ್ಚಿನ ನೈಜತೆ ತೋರಿಸಬಹುದಿತ್ತು.

  ಎಲ್ಲರೂ ಕುಳಿತು ನೋಡುವ ಸಿನಿಮಾ

  'ಹ್ಯಾಪಿ ನ್ಯೂ ಇಯರ್' ಕುಟುಂಬ ಸಮೇತ ಎಲ್ಲರೂ ಕುಳಿತು ನೋಡಬಹುದಾದ ಪಕ್ಕಾ ಮನರಂಜನಾತ್ಮಕ ಸಿನಿಮಾ. ಮುಜುಗರವಾಗುವ ಡಬಲ್ ಮೀನಿಂಗ್ ಡೈಲಾಗ್ ಗಳು, ಬೇಸರ ತರಿಸುವ ಮಾಸ್ ಡೈಲಾಗ್ ಗಳು ಮತ್ತು ಕಾರಣವಿಲ್ಲದೇ ಬರುವ ಯಾವುದೇ ಸಾಂಗ್ ಗಳು ಇಲ್ಲ. ಹ್ಯಾಪಿ ನ್ಯೂ ಇಯರ್ ರೊಮ್ಯಾನ್ಸ್, ಪ್ರೀತಿ, ಜೀವನದ ಸಣ್ಣ ಸಣ್ಣ ಸಮಸ್ಯೆಗಳಿಂದ ಜೀವನದ ಸಂತೋಷವನ್ನು ಮುಂದೂಡುವ ಎಲ್ಲಾ ಅಂಶಗಳ ಜೊತೆಗೆ ಮನೋರಂಜನೆ ನೀಡಿ ಉತ್ತಮ ಸಂದೇಶವನ್ನು ರವಾನಿಸುತ್ತದೆ.

  English summary
  Pannaga Bharana directorial, Sruthi Hariharan, Dhananjay, B C Patil, Sudharani, Diganth, Vijay Raghavendra Starrer 'Happy New Year' Film has hit the screens today(May 5th). Here is the review of 'Happy New Year' Movie

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more