"ಇಂತಹ ಅಮ್ಮನನ್ನು ಪಡೆಯುವುದಕ್ಕೆ ನಾನು ಅದೃಷ್ಟ ಮಾಡಿದ್ದೆ"; ಪವಿತ್ರಾ ಗೌಡ ಪುತ್ರಿ ಭಾವುಕ ಪೋಸ್ಟ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಬ್ಬರು ಪ್ರಮುಖ ವ್ಯಕ್ತಿಗಳು ಹೆಸರಿದೆ. ಅದರಲ್ಲಿ ಒಬ್ಬರು ದರ್ಶನ್, ಇನ್ನೊಬ್ಬರು ಪವಿತ್ರಾ ಗೌಡ. ದರ್ಶನ್ ಗೆಳೆತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಅನ್ನೋ ಕಾರಣಕ್ಕೆ ಆತನನ್ನು ಕರೆಸಿ ಕೊಲೆ ಆಡಲಾಗಿದೆ ಅನ್ನೋ ಆರೋಪ ಇವರಿಬ್ಬರ ಮೇಲೆ ಇದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ.ಹಾಗೇ ಎರಡನೇ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಸದ್ಯ ಈ ಪ್ರಕರಣ ತನಿಖಾ ಹಂತದಲ್ಲಿ ಇದ್ದು, ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸುವವರೆಗೂ ದರ್ಶನ್ ಹಾಗೂ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಬೇಕಾಗುತ್ತೆ.

Pavithra Gowda daughter Kushi Gowda emotional post about her mother

ಇತ್ತ ದರ್ಶನ್ ನೋಡುವುದಕ್ಕೆ ಚಿತ್ರರಂಗದ ಗಣ್ಯರು ಜೈಲಿಗೆ ಬಂದು ಹೋಗುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರಮುಖ ನಟರು, ಹಾಗೂ ಆಪ್ತರು ಪ್ರತಿ ದಿನ ಒಬ್ಬರಲ್ಲ ಒಬ್ಬರು ಜೈಲಿಗೆ ಬಂದು ಅವರ ಆರೋಗ್ಯ ವಿಚಾರಣೆ ಮಾಡುವುದಕ್ಕೆ ಹೋಗುತ್ತಿದ್ದಾರೆ. ಅದೇ ಪವಿತ್ರಾ ಗೌಡ ನೋಡುವುದಕ್ಕೆ ಅವರ ಸಂಬಂಧಿಗಳು ಬಿಟ್ಟರೆ ಬೇರೆ ಯಾರದ್ದೂ ಸುಳಿವು ಇಲ್ಲ. ಈ ಕಾರಣಕ್ಕೆ ಸಹಜವಾಗಿತೇ ಪವಿತ್ರಾ ಗೌಡ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಪವಿತ್ರಾ ಗೌಡ ಹಾಗೂ ದರ್ಶನ್ ಕಳೆದ ಒಂದು ದಶಕಗಳಿಗಿಂದ ಆತ್ಮೀಯರಾಗಿದ್ದಾರೆ. ಈ ಸಂಬಂಧ ಇಬ್ಬರೂ ಜೊತೆಗಿರುವ ಒಂದಿಷ್ಟು ಫೋಟೊಗಳನ್ನು ಒಟ್ಟಿಗೆ ಸೇರಿಸಿ, ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಅಲ್ಲಿಂದ ದರ್ಶನ್, ಪವಿತ್ರಾ ಗೌಡ ಹಾಗೂ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿಯೇ ಕಿತ್ತಾಟ ಶುರುವಾಗಿತ್ತು.

Pavithra Gowda daughter Kushi Gowda emotional post about her mother

ಪವಿತ್ರಾ ಗೌಡ ಜೊತೆ ದರ್ಶನ್ ಆತ್ಮೀಯರಾಗಿದ್ದರು. ಈ ವಿಷಯವನ್ನು ಫೋಟೋಗಳೇ ಹೇಳುತ್ತಿವೆ. ಇನ್ನು ಪವಿತ್ರಾ ಗೌಡಗೆ ಮೊದಲನೇ ಮದುವೆಯಿಂದ ಜನಿಸಿದ ಪುತ್ರಿ ಖುಷಿ ಗೌಡ ಇದ್ದಾರೆ. ಖುಷಿ ಗೌಡ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಅಮ್ಮನೊಂದಿಗೆ ಇರುವ ಫೋಟೊಗಳನ್ನು ಆಗಾಗ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಅವರನ್ನು ನೆನೆದು ಖುಷಿ ಗೌಡ ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಾಯಿಯೊಂದಿಗಿರುವ ಫೋಟೋವನ್ನು ಶೇರ್ ಮಾಡಿಕೊಂಡು ಬಿಲಿಯನ್ ವ್ಯಕ್ತಿಗಳಲ್ಲಿ ನೀನು ಒಬ್ಬರು ಎಂದು ಭಾವನಾತ್ಮಕವಾಗಿ ಬರೆದು ಪೋಸ್ಟ್ ಮಾಡಿದ್ದಾರೆ.

"ಅವರೇ ನನ್ನ ಪ್ರೇರಣೆ. ಅದೆಂತಹದ್ದೇ ಪರಿಸ್ಥಿತಿ ಇದ್ದರೂ ಹೇಗೆ ಸ್ಟ್ರಾಂಗ್ ಆಗಿರಬೇಕು ಅನ್ನೋದನ್ನು ಅವರು ಕಲಿಸಿಕೊಟ್ಟಿದ್ದಾರೆ. ಅವರು ಯಾವಾಗಲೂ ಓಪನ್ ಮತ್ತು ಬೆಂಬಲಕ್ಕೆ ನಿಲ್ಲುತ್ತಿದ್ದರು. ಅವರು ಬಿಲಿಯನ್ ವ್ಯಕ್ತಿಯಲ್ಲಿ ಒಬ್ಬರು. ನಾನು ಇಂತಹ ಮತ್ತೊಬ್ಬ ವ್ಯಕ್ತಿಯನ್ನು ನೋಡಿಲ್ಲ. ನಾನು ನಿಜವಾಗಲೂ ಇಂತಹ ಅಮ್ಮನನ್ನು ಪಡೆಯುವುದಕ್ಕೆ ಅದೃಷ್ಟ ಮಾಡಿದ್ದೆ. ನಾನು ನಿಮ್ಮನ್ನು ತುಂಬಾ ಇಷ್ಟ ಪಡೆತ್ತೇನೆ ಅಮ್ಮ." ಎಂದು ಖುಷಿ ಗೌಡ ಬರೆದುಕೊಂಡಿದ್ದಾರೆ.

More from Filmibeat

English summary
Kushi Gowda emotional post about her mother Pavithra Gowda:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X