"ಅಪವಿತ್ರ ಅನ್ನೋಕೆ ಮಾಧ್ಯಮಕ್ಕೆ ಯಾವ ಹಕ್ಕು ಇದೆ?"; ಬೆಂಬಲಕ್ಕೆ ನಿಂತ ಹಿರಿಯ ವಿಮರ್ಶಕಿಗೆ ಏನಂದ್ರು ಪವಿತ್ರಾ ಗೌಡ?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಂ 1 ಆರೋಪಿಯಾಗಿರುವ ಪವಿತ್ರಾ ಗೌಡ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣ ಇನ್ನೂ ನಡೆಯುತ್ತಿದೆ. ಕೆಲವು ತಿಂಗಳು ಜೈಲಿನಲ್ಲಿದ್ದು ಹೊರ ಬಂದಿರುವ ಪ್ರವಿತ್ರಾ ಗೌಡ ಈ ಸಹಜ ಬದುಕಿನತ್ತ ಸಾಗಿದ್ದಾರೆ. ಆದರೆ, ಹತ್ಯೆ ಕೇಸ್ ಹೊರ ಬಂದ ಸಮಯದಲ್ಲಿ ಪವಿತ್ರಾ ಗೌಡರನ್ನು ಎಲ್ಲರೂ ಕಟು ಟೀಕೆಗಳನ್ನು ಮಾಡಿದ್ದರು. ಅದ್ಯಾವುದಕ್ಕೂ ತಲೆ ಕೆಡಸಿಕೊಳ್ಳದೆ ತನ್ನ ಕೆಲಸದಲ್ಲಿ ಮುಂದುವರೆದಿದ್ದಾರೆ.

ರೇಣುಕಾಸ್ವಾಮಿ ಹತ್ಯೆಯ ಬಳಿಕ ಪವಿತ್ರಾ ಗೌಡ ಹಾಗೂ ದರ್ಶನ್ ಇಬ್ಬರೂ ಕಟು ಟೀಕೆಗಳಿಗೆ ಒಳಗಾಗಿದ್ದರು. ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಇಬ್ಬರೂ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ವೇಳೆ ಮಾಧ್ಯಮಗಳು ಬಳಸಿದ ಪದಗಳನ್ನು ಹಿರಿಯ ವಿಮರ್ಶಕಿ ಹಾಗೂ ಲೇಖಕಿ ಡಾ.ಎಂ.ಎಸ್. ಆಶಾದೇವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪವಿತ್ರಾ ಗೌಡ ಬೆಂಬಲಿಸಿ ಕೊಟ್ಟಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Pavithra Gowda says thanks to author Dr M S Asha Devi criticized media over using Apavithra word

ಈ ವಿಡಿಯೋವನ್ನು ಪವಿತ್ರಾ ಗೌಡ ಕೂಡ ಶೇರ್ ಮಾಡಿಕೊಂಡಿದ್ದು, ಹಿರಿಯ ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತನ್ನೊಳಗಿರುವ ನೋವನ್ನು ಹೊರ ಹಾಕಿದ್ದಾರೆ. ತನ್ನನ್ನು ವಿನಾಕಾರಣ ದೂಷಿಸಿದ ಸಮಾಜದಲ್ಲಿ ನಿಮ್ಮಂಥವರು ಇರುವುದು ನನ್ನಲ್ಲಿ ಸಣ್ಣ ಭರವಸೆ ಮೂಡಿಸಿದೆ ಎಂದು ಪವಿತ್ರಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಹಿರಿಯ ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಹೇಳಿಕೆ ಏನು? ಪವಿತ್ರಾ ಗೌಡ ಹೇಳಿದ್ದೇನು? ತಿಳಿಯುವುದಕ್ಕೆ ಮುಂದೆ ಓದಿ.

ಪವಿತ್ರಾ ಗೌಡ ಅರೆಸ್ಟ್‌ ಆದಾಗ ಸೋಶಿಯಲ್ ಮೀಡಿಯಾದ ಹಾಗೂ ಕೆಲವು ಮಾಧ್ಯಮಗಳಲ್ಲಿ ಕೆಲ ಪದಗಳನ್ನು ಬಳಸಲಾಗಿತ್ತು. ಅದರಲ್ಲಿ 'ಅಪವಿತ್ರ' ಎನ್ನುವ ಪದವನ್ನು ಬಳಕೆ ಮಾಡಿದ್ದಕ್ಕೆ ಡಾ.ಎಂ.ಎಸ್. ಆಶಾದೇವಿ ಬೇಸರ ಹೊರ ಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಏನು ಹೇಳಿದ್ದಾರೆಂದು ನೋಡುವುದಾರೇ,

"ಮಾಧ್ಯಮ ಸಲಹೆಗಾರರು ಇದ್ದಾರೆ. ನಾನು ಒಂದು ಮಾತನ್ನು ಹೇಳಬೇಕು. ಯಾವುದೇ ವಿಷಯ ಆಗಿರಲಿ. ಆಕೆ ಒಬ್ಬ ನಟಿಯಾಗಿರಲಿ. ಆಕೆ ಇನ್ಯಾರನ್ನೋ ಮದುವೆ ಮಾಡ್ಕೊಳ್ತಾಳೆ. ಅದರಲ್ಲಿ ನಿಮಗೆ ಏನು ಸಮಸ್ಯೆ? ಅದು ನಮ್ಮ ಸಮಸ್ಯೆ ಅಲ್ಲ ಅಲ್ವಾ? ಒಬ್ಬ ಪವಿತ್ರ ಎನ್ನುವ ಹೆಣ್ಣುಮಗಳ ವಿಷಯದಲ್ಲಿ ಅಪವಿತ್ರ ಅಪವಿತ್ರ ಅಂತ ಬಳಸೋದು ಇದ್ಯಲ್ಲ? ಮಹಿಳೆ ಬಗ್ಗೆ ಈ ಭಾಷೆಯನ್ನು ಬಳಸಬಹುದಾ? ಆಕೆ ಅಪವಿತ್ರ ಅನ್ನೋಕೆ ಮಾಧ್ಯಮಕ್ಕೆ ಯಾವ ಹಕ್ಕು ಇರುತ್ತೆ?" ಎಂದು ಹಿರಿಯ ವಿಮರ್ಶಕರಾಗಿರುವ ಡಾ.ಎಂ.ಎಸ್. ಆಶಾದೇವಿ ಪ್ರಶ್ನೆ ಮಾಡಿದ್ದಾರೆ.

ಡಾ.ಎಂ.ಎಸ್. ಆಶಾದೇವಿಯವರು ಪವಿತ್ರಾ ಗೌಡ ಪರ ನಿಂತಿದ್ದಕ್ಕೆ ಭಾವುಕರಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಅವರ ವಿಡಿಯೋವನ್ನು ಶೇರ್ ಮಾಡಿ, ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. "ಡಾ.ಎಂ.ಎಸ್. ಆಶಾದೇವಿ ಮೇಡಂ...ನನ್ನ ಜೀವನದ ಸತ್ಯಕಥೆ ಗೊತ್ತಿಲ್ಲದ ಬಹಳ ಜನ ನನ್ನನು ವಿನಾಕಾರಣ ದೂಷಿಸಿದರು ಇಂತಹ ಸಮಾಜದಲ್ಲಿ ನಿಮ್ಮ ಈ ಮಾತುಗಳು ನನ್ನಲ್ಲಿ ಒಂದು ಸಣ್ಣ ಬರವಸೆ ಚಿಗುರಿಸಿದೆ. ನನ್ನ ಕಡೆಯಿಂದ ಅನಂತ ಧನ್ಯವಾದಗಳು. ನನ್ನ ಜೀವನದ ಸತ್ಯಾಸತ್ಯತೆಗಳನ್ನು ಅರೆತುಕೊಳ್ಳದೆ ನನ್ನ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡುವ ಇಂತಹ ಸಮಾಜದಲ್ಲಿ ನಿಮ್ಮಂಥವರು ಇರುವುದು ಬಹಳ ವಿಶೇಷ. ಥ್ಯಾಂಕ್ಯೂ." ಎಂದು ಪವಿತ್ರಾ ಗೌಡ ಹೇಳಿದ್ದಾರೆ.

"ಪ್ರತಿಯೊಬ್ಬ ಮಹಿಳೆ ಕಷ್ಟದಲ್ಲಿರುವ ಸಮಯದಲ್ಲಿ ಸಮಾಜ ಹಾಗೂ ಮಾಧ್ಯಮ ಗೌರವ ನೀಡಲಿ ಎಂದು ಹಾರೈಸುತ್ತೇನೆ. ಕೇವಲ ನಾನು ಹಾಗೂ ನನ್ನ ಆತ್ಮೀಯರಿಗಷ್ಟೇ ನನ್ನ ಜೀವನದ ರಿಯಾಲಿಟಿ ಏನು ಅಂತ ಗೊತ್ತು. ನಾನು ಯಾವಾಗಲೂ ನಿಮಗೆ ಧನ್ಯಳಾಗಿರುತ್ತೇನೆ." ಎಂದು ಪವಿತ್ರಾ ಗೌಡ ಬರೆದುಕೊಂಡಿದ್ದಾರೆ.

More from Filmibeat

English summary
Pavithra Gowda says thanks to author Dr.M.S.Asha Devi criticized media over using Apavithra word;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X