Pavithra Gowda: ಜೈಲಿನಲ್ಲಿ ಆತ್ಮಕಥೆ ಬರೆಯಲು ಮುಂದಾದ್ರಾ ಪವಿತ್ರಾ ಗೌಡ? ದರ್ಶನ್ ಕಥೆಯೇನು?

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಜೈಲಿನಲ್ಲಿ ಇದ್ದಾರೆ. ಹಲವು ಬಾರಿ ಜಾಮೀನಿಗೆ ಪ್ರಯತ್ನ ಪಟ್ಟಿದ್ದರೂ, ಪವಿತ್ರಾ ಗೌಡಗೆ ಜಾಮೀನು ನೀಡುವುದಕ್ಕೆ ಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಇತ್ತೀಚೆಗೆ ಮತ್ತೆ ಜಾಮೀನಿಗೆ ಪಯತ್ನ ಪಟ್ಟಿಲ್ಲ. ದರ್ಶನ್ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾ ಆದ ಬಳಿಕ ಪವಿತ್ರಾ ಮತ್ತೆ ಇಂತಹ ಪ್ರಯತ್ನಕ್ಕೆ ಮುಂದಾಗಿಲ್ಲ.

ಇತ್ತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಬಗ್ಗೆ ದಿನಕ್ಕೊಂದು ಸುದ್ದಿ ಹೊರ ಬರುತ್ತಿದೆ. ಕಳೆದ ಕೆಲವು ದಿನಗಳಿಂದ ದರ್ಶನ್ ಸೈಲೆಂಟ್ ಆಗಿ ಇದ್ದರೆ, ಇನ್ನೊಂದು ಕಡೆ ಪವಿತ್ರಾ ಗೌಡ ಕೂಡ ಅದೇ ರೀತಿ ಮೌನ ವಹಿಸಿದ್ದರು. ಈ ಮಧ್ಯೆ ಇಬ್ಬರ ವರ್ತನೆಯಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ವರದಿಗಳಾಗಿವೆ.

Pavithra Gowda writing autobiography while Darshan remins silent in Bengaluru Jail

ಜಾಮೀನು ಪಡೆಯುವ ವಿಚಾರವಾಗಿ ಪವಿತ್ರಾ ಗೌಡ ಸುದ್ದಿಯಾಗುತ್ತಿದ್ದರು. ಆದ್ರೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಚರಿತ್ರೆಯನ್ನು ಬರೆಯುವುದಕ್ಕೆ ಮುಂದಾಗಿದ್ದಾರಂತೆ. ಪವಿತ್ರಾ ಗೌಡ ಆತ್ಮಚರಿತ್ರೆ ಕುರಿತು ಟಿವಿ 9 ಕನ್ನಡ ಮಾಡಿದ ಈ ವರದಿ ಈಗ ಅಚ್ಚರಿಗೆ ಕಾರಣವಾಗಿದೆ. ಒಂದ್ಮೇಲೆ ಆತ್ಮಚರಿತ್ರೆ ಬರೆದರೆ ದರ್ಶನ್ ಕಥೆಯೇನು? ಇದಕ್ಕೆ ದರ್ಶನ್ ಕುಟುಂಬದ ಸಮ್ಮಿತಿ ಇದೆಯೇ? ತಿಳಿಯುವುದಕ್ಕೆ ಮುಂದೆ ಓದಿ.

ಪವಿತ್ರಾ ಗೌಡ ವಿಭಿನ್ನ ನಡೆ

ಇತ್ತೀಚೆಗೆ ದರ್ಶನ್ ಜಾಮೀನು ಪಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಜಾಮೀನು ಸಿಗಬಹುದೆಂದು ದರ್ಶನ್ ನಿರೀಕ್ಷೆ ಮಾಡಿದ್ದರು. ಇದೇ ಬೆನ್ನಲ್ಲೇ ಪವಿತ್ರಾ ಗೌಡ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ತಿರಸ್ಕೃತವಾದ ಬೆನ್ನಲ್ಲೇ ಪವಿತ್ರಾ ಗೌಡ ಕೂಡ ಸೈಲೆಂಟ್ ಆಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇದರ ಹಿಂದೆ ತಮ್ಮ ಆತ್ಮಚರಿತ್ರೆ ಬರೆಯುವುದಕ್ಕೆ ಪವಿತ್ರಾ ಗೌಡ ಮುಂದಾಗಿದ್ದಾರೆ ಅಂತ ಟಿವಿ 9 ಕನ್ನಡ ವರದಿ ಮಾಡಿದೆ.

ಆತ್ಮಕಥೆ ಬರೆಯಲು ಪವಿತ್ರಾ ಗೌಡ ಸಿದ್ಧತೆ?

ರೇಣುಕಾಸ್ವಾಮಿ ಪ್ರಕರಣದ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಜೈಲಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಬದುಕಿನ ಇದೂವರೆಗಿನ ಏಳು-ಬೀಳುಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆತ್ಮಕಥೆಯನ್ನು ಬರೆಯುವುದಕ್ಕೆ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಪವಿತ್ರಾ ಗೌಡ ಈ ನಡೆ ದರ್ಶನ್‌ಗೆ ಮತ್ತೊಂದು ತಲೆನೋವಾಗಿ ಪರಿಣಮಿಸಬಹುದು ಎಂದು ಅಂದಾಜಿಸಲಾಗುತ್ತಿದೆ.

Pavithra Gowda writing autobiography while Darshan remins silent in Bengaluru Jail

ಆತ್ಮಕಥೆಯಲ್ಲಿ ಏನಿರುತ್ತೆ?

ಪವಿತ್ರಾ ಗೌಡ ಆತ್ಮಕಥೆಯಲ್ಲಿ ಅವರ ಬದುಕಿನ ಬಗ್ಗೆ ಏನೇ ಹೇಳಿದರೂ, ಕೆಲವು ಚಾಪ್ಟರ್‌ಗಳಲ್ಲಿ ದರ್ಶನ್ ಜೊತೆಗಿನ ಒಡನಾಟ, ಸ್ನೇಹ, ಅತ್ಮೀಯತೆ ಬಗ್ಗೆ ಉಲ್ಲೇಖ ಮಾಡುತ್ತಾರಾ? ರೇಣುಕಾಸ್ವಾಮಿ ಪ್ರಕರಣದ ಹಿನ್ನೆಲೆಯನ್ನು ಹೇಳಬಹುದಾ? ತಮ್ಮ ಮೇಲಿನ ಆರೋಪಗಳಿಗೆ ಈ ಆತ್ಮಕಥೆಯಲ್ಲಿ ಕ್ಲಾರಿಟಿ ಕೊಡಬಹುದಾ? ಅನ್ನೂ ಪ್ರಶ್ನೆಗಳು ಹುಟ್ಟಿಕೊಂಡಿವೆ. ಒಂದು ವೇಳೆ ಪುಸ್ತಕ ರೂಪದಲ್ಲಿ ಇದೆಲ್ಲ ಅಂಶಗಳು ಹೊರ ಬಂದರೆ ಏನಾಗಬಹುದು? ಅನ್ನೋ ಆತಂಕ ಕೂಡ ಕೆಲವರಲ್ಲಿ ಶುರುವಾಗಿದೆ ಎನ್ನಲಾಗಿದೆ.

ದರ್ಶನ್ ವಿರೋಧಿಸಬಹುದೇ?

ರೇಣುಕಾಸ್ವಾಮಿ ಪ್ರಕರಣದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಗೆಳೆತನದಲ್ಲಿ ಬಿರುಕು ಮೂಡಿದೆ ಅಂತ ಈ ಹಿಂದೆ ವರದಿಗಳಾಗಿದ್ದವು. ಹೀಗಾಗಿ ಪವಿತ್ರಾ ಗೌಡ ಈ ನಡೆ ದರ್ಶನ್ ಮುನಿಸಿಗೆ ಕಾರಣವಾಗುವ ಸಾಧ್ಯತೆಯಿದೆ. ಪತ್ನಿ ವಿಜಯಲಕ್ಷ್ಮಿ ದರ್ಶನ್ ಈ ಆತ್ಮಕಥೆಯ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ. ಆದರೆ, ಪವಿತ್ರಾ ಗೌಡ ಆತ್ಮಕಥೆ ಬರೆಯುವ ಬಗ್ಗೆ ಅಧಿಕೃತ ಮಾಹಿತಿ ಇನ್ನಲೇ ಹೋದರೂ, ಒಂದು ವೇಳೆ ಬರೆದರೆ ಏನಾಗಬಹುದು ಅನ್ನೋ ಕುತೂಹಲ ಈಗ ಎಲ್ಲರಲ್ಲೂ ಮನೆ ಮಾಡಿದೆ.

English summary
Pavithra Gowda writing autobiography while Darshan remins silent in Bengaluru Jail. Media report on Pavithra Gowda autobiography creating buzz.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X