ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿ ಎಂದು ಬಿಕ್ಕಿದ ಪವಿತ್ರಾ ಜಯರಾಂ ಮಗಳು..!

ಪವಿತ್ರಾ ಜಯರಾಂ ಮತ್ತು ಅವರ ಸ್ನೇಹಿತ ಚಂದ್ರಕಾಂತ್ ನಿಧನದ ನಂತರ ಇಬ್ಬರ ಸಂಬಂಧದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು ಎಂದು ಹೇಳಿದರೆ ಇನ್ನೂ ಕೆಲವರು ಇಬ್ಬರು ಜೊತೆಯಲ್ಲಿಯೇ ವಾಸ ಮಾಡ್ತಿದ್ದರು ಎನ್ನುವ ಮಾತುಗಳನ್ನಾಡುತ್ತಿದ್ದಾರೆ.

ಇನ್ನೂ.. ಚಂದ್ರಕಾಂತ್ ಅವರ ಪತ್ನಿ ಶಿಲ್ಪಾ ಪ್ರೇಮಾ, ಪವಿತ್ರಾ ನಮ್ಮ ಬದುಕಿನಲ್ಲಿ ಬಂದ ನಂತರ ನಮ್ಮ ಜೀವನವೇ ಹಾಳಾಯ್ತು ಎಂದು ಕಣ್ಣೀರು ಹಾಕಿದ್ದಾರೆ. ಚಂದ್ರಕಾಂತ್ ಅವರ ತಾಯಿ ಕೂಡ ಪವಿತ್ರಾಳಿಂದಲೇ ಇದೆಲ್ಲಾ ನಡೆದಿದೆ.

Pavithra Jayram And Chandrakant Were Just Friends Says Pavithra s Daughter

ನನ್ನ ಮಗನ್ನು ನಮ್ಮ ಮನೆಗೆ ಬರದಂತೆ ಮಾಡಿದ್ದಾಳೆ. ಪವಿತ್ರಾ ಅವನಿಗೆ ಏನು ಮಾಡಿದ್ದಳೋ ಏನೋ ಗೊತ್ತಿಲ್ಲ, ನನ್ನ ಎಲ್ಲಾ ಸರ್ವಸ್ವ ಪವಿತ್ರಾ, ಅವಳೇ ನನ್ನ ಹೆಂಡತಿ ಎನ್ನುತ್ತಿದ್ದ ಎಂದು ಬಿಕ್ಕಿದ್ದಾರೆ. ಎದೆಯೆತ್ತರಕ್ಕೆ ಬೆಳೆದ ಮಗನನ್ನ ಕಳೆದುಕೊಂಡು ದು:ಖದಲ್ಲಿದ್ದಾರೆ.

ಇದರ ನಡುವೆ ಪವಿತ್ರಾ ಜಯರಾಂ ಅವರ ಮಗಳು ಪ್ರತೀಕ್ಷಾ ತಮ್ಮ ತಾಯಿ ಮತ್ತು ಚಂದ್ರಕಾಂತ್ ನಡುವೆ ಇದ್ದ ಸಂಬಂಧದ ಬಗ್ಗೆ ನಿಮ್ಮ ನಿಮ್ಮ ಇಷ್ಟಾನುಸಾರ ಕಥೆ ಹೆಣೆಯಬೇಡಿ ಎಂದಿದ್ಧಾರೆ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿ ಎಂದು ಮನವಿಯನ್ನೂ ಮಾಡಿದ್ದಾರೆ.

Pavithra Jayram And Chandrakant Were Just Friends Says Pavithra s Daughter

ಹೌದು, ಮಾಧ್ಯಮದವರ ಜೊತೆ ಮಾತನಾಡಿರುವ ಪವಿತ್ರಾ ಜಯರಾಂ ಅವರ ಪುತ್ರಿ ಪ್ರತೀಕ್ಷಾ ಚಂದ್ರಕಾಂತ್‌ ಅವರ ಸಾವಿನ‌ ಸುದ್ದಿ ನಮಗೆ ಗೊತ್ತಾಗಿದ್ದು ಮಾಧ್ಯಮಗಳಲ್ಲಿ ಬಂದ ನಂತರವಷ್ಟೇ ಎಂದು ಹೇಳಿದ್ದಾರೆ. ಇನ್ನೂ ಚಂದ್ರಕಾಂತ್‌ ಮತ್ತು ನಮ್ಮಮ್ಮ‌ ಉತ್ತಮ ಸ್ನೇಹಿತರಾಗಿದ್ದರು ಅಷ್ಟೇ ಎಂದಿರುವ ಪ್ರತೀಕ್ಷಾ ಇಬ್ಬರ ಸಂಬಂಧದ ಬಗ್ಗೆ ಟಿವಿಯಲ್ಲಿ ಏನೇನೋ ಮಾತಾಡ್ತಿದ್ದಾರೆ.

ಅಮ್ಮನ ಅಂತ್ಯಕ್ರಿಯೆ ಆಗೋವವರೆಗೂ ಚಂದ್ರಕಾಂತ್‌ ಇದ್ದು ಹೋಗಿದ್ದರು. ಚಂದ್ರಕಾಂತ್‌ ಅವರು ಹೈದರಾಬಾದ್‌ಗೆ ಹೋದ ನಂತರವೂ ನನಗೆ ಪೋನ್ ಮಾಡಿ ಮಾತನಾಡುತ್ತಿದ್ದರು ಎಂದಿದ್ದಾರೆ. ಆರೋಗ್ಯ ಚೆನ್ನಾಗಿ ನೋಡ್ಕೊ, ಪರೀಕ್ಷೆ ಇದೆ ತಯಾರಿ ಮಾಡ್ಕೋ ಎಂದೆಲ್ಲಾ ನನಗೆ ಧೈರ್ಯ ತುಂಬಿದ್ದರು ಎಂದಿದ್ದಾರೆ ಪ್ರತೀಕ್ಷಾ

Pavithra Jayram And Chandrakant Were Just Friends Says Pavithra s Daughter

ಮುಂದುವರೆದು ಮಾತನಾಡಿರುವ ಪವಿತ್ರಾ ಜಯರಾಂ ಅವರ ಮಗಳು ಪ್ರತೀಕ್ಷಾ, ಅಮ್ಮ ಹೈದರಾಬಾದ್‌ಗೆ ತೆರಳಿ ಆರು ವರ್ಷ ಆಯ್ತು.ಅಂದಿನಿಂದ ಚಂದ್ರಕಾಂತ್‌ ಅಮ್ಮನಿಗೆ ಪರಿಚಯ. ಒಂದೇ ಸಿರೀಯಲ್ ನಲ್ಲಿ ನಟನೆ ಮಾಡುವ ಸಹ ನಟರ ಜತೆಗಿನ ಸಂಬಂಧ ಹೇಗಿರೋತ್ತೊ ಅಮ್ಮ ಮತ್ತು ಚಂದ್ರಕಾಂತ್‌ ಅವರ ಸಂಬಂಧವೂ ಹಾಗೆ ಇತ್ತುಎಂದಿದ್ದಾರೆ. ನನ್ನ ಅಮ್ಮ ಮತ್ತು ಅಪ್ಪ ಅವರ ಸಂಬಂಧ ಕೂಡ ಚೆನ್ನಾಗಿಯೇ ಇತ್ತು.

ನಾನು ಮತ್ತು ಅಣ್ಣ ಇಬ್ಬರೂ ಕಳೆದ ಎರಡು ವರ್ಷಗಳಿಂದ ಅಮ್ಮನ ಜತೆಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದೆವು ಆದರೆ ಈಗ ನಾವು ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇವೆ ಎಂದಿರುವ ಪ್ರತೀಕ್ಷಾ ಅವರು ನಮ್ಮ ಕುಟುಂಬದ ದೊಡ್ಡ ಪಿಲ್ಲರ್‌. ನಾವಿನ್ನ ಚಿಕ್ಕವರು. ನಮಗೂ ಭವಿಷ್ಯವಿದೆ. ಯಾರೂ ಅಮ್ಮನ ಸಂಬಂಧ ಬಗೆಗೆ ತಪ್ಪಾಗಿ ಮಾತಾಡಬೇಡಿ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿ ಎಂದು ಬಿಕ್ಕಿದ್ದಾರೆ ಪ್ರತೀಕ್ಷಾ

More from Filmibeat

English summary
"After the tragic death of television actress Pavithra Jayram and her friend Chandrakanth, Pavitra's daughter reacted to the rumours and said, 'My mom and Chandrakant were just friends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X