ಅಮ್ಮ ಮತ್ತು ಚಂದು ಒಡನಾಟ ಏನು ಅಂತ ನಮಗೆ ಗೊತ್ತು ಎಂದ ಮಗ ಪ್ರಜ್ವಲ್​

'ತ್ರಿನಯನಿ' ಧಾರಾವಾಹಿ ನಟಿ ಪವಿತ್ರಾ ಜಯರಾಂ ಮತ್ತು ಅವರ ಸ್ನೇಹಿತ ಚಂದ್ರಕಾಂತ್ ನಿಧನದ ನಂತರ ಇಬ್ಬರ ಸಂಬಂಧದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು ಎಂದು ಹೇಳಿದರೆ ಇನ್ನೂ ಕೆಲವರು ಇಬ್ಬರು ಜೊತೆಯಲ್ಲಿಯೇ ವಾಸ ಮಾಡ್ತಿದ್ದರು ಎನ್ನುವ ಮಾತುಗಳನ್ನಾಡುತ್ತಿದ್ದಾರೆ.

ಈ ಕಾರಣಕ್ಕೆ ಸ್ಪಷ್ಟೀಕರಣವನ್ನ ನೀಡಲು ಮುಂದಾಗಿರುವ ಪವಿತ್ರಾ ಜಯರಾಂ ಅವರ ಮಕ್ಕಳು ನಮ್ಮಷ್ಟಕ್ಕೆ ನಮ್ಮನ್ನ ಬದುಕಲು ಬಿಡಿ ಎಂಬ ಮನವಿಯನ್ನೂ ಮಾಡುತ್ತಿದ್ದಾರೆ. ತಮ್ಮ ತಾಯಿ ಮತ್ತು ಚಂದ್ರಕಾಂತ್ ನಡುವೆ ಸ್ನೇಹ ಇತ್ತಷ್ಟೇ ಎಂದು ಹೇಳಿದ್ದಾರೆ.

pavithra-jayram-and-chandrakant-were-just-friends-says-pavithras-son-prajwal

ಹೌದು, ನಿನ್ನೆ.. ತಮ್ಮ ತಾಯಿ ಮತ್ತು ಚಂದ್ರಕಾಂತ್ ಬಗ್ಗೆ ಹಬ್ಬಿರುವ ವದಂತಿಗಳಿಗೆ ಪುತ್ರಿ ಪ್ರತೀಕ್ಷಾ ಮಾತನಾಡಿದ್ದರು. ಇಂದು ಅವರ ಮಗ ಪ್ರಜ್ವಲ್ ಮಾತನಾಡಿದ್ದಾರೆ. ಅಮ್ಮ ಮತ್ತು ಚಂದ್ರಶೇಖರ್ ಅವರು ಎಷ್ಟು ಒಳ್ಳೆಯ ಸ್ನೇಹಿತರು ಎಂಬುದು ನಮಗೆ ಮತ್ತು ಇಂಡಸ್ಟ್ರಿಯವರಿಗೆ ಗೊತ್ತು ಎಂದಿರುವ ಪ್ರಜ್ವಲ್, ಅವರ ಒಡನಾಟ ಹೇಗಿತ್ತು ಅಂತ ನಾವು ನೋಡಿದ್ದೇವೆ. ಮದುವೆ ಆಗುವ ಪ್ಲ್ಯಾನ್ ಇತ್ತು ಎಂಬುದನ್ನೆಲ್ಲ ನಾನು ಸಂದರ್ಶನದಲ್ಲಿ ನೋಡಿದೆ. ಆದರೆ ಅಷ್ಟೊಂದು ಮಾತುಕತೆ ಆಗಿರಲಿಲ್ಲ. ಅಷ್ಟೊಂದು ನಮಗೂ ಗೊತ್ತಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.

ಇನ್ನೂ ಚಂದ್ರಕಾಂತ್ ನೇಣಿಗೆ ಶರಣಾಧ ನಂತರ ಚಂದ್ರಕಾಂತ್ ಅವರ ಪತ್ನಿ ಶಿಲ್ಪಾ ಪ್ರೇಮಾ, ಪವಿತ್ರಾ ಜಯರಾಂ ಅವರ ಮೇಲೆ ಆರೋಪ ಮಾಡಿದ್ದರು. ಪವಿತ್ರಾ ನಮ್ಮ ಬದುಕಿನಲ್ಲಿ ಬಂದ ನಂತರ ನಮ್ಮ ಜೀವನವೇ ಹಾಳಾಯ್ತು ಎಂದು ಕಣ್ಣೀರು ಹಾಕಿದ್ದರು. ಚಂದ್ರಕಾಂತ್ ಅವರ ತಾಯಿ ಕೂಡ ಪವಿತ್ರಾಳಿಂದಲೇ ಇದೆಲ್ಲಾ ನಡೆದಿದೆ.ಪವಿತ್ರಾ ಅವನಿಗೆ ಏನು ಮಾಡಿದ್ದಳೋ ಏನೋ ಗೊತ್ತಿಲ್ಲ, ನನ್ನ ಎಲ್ಲಾ ಸರ್ವಸ್ವ ಪವಿತ್ರಾ, ಅವಳೇ ನನ್ನ ಹೆಂಡತಿ ಎನ್ನುತ್ತಿದ್ದ ಎಂದು ತಮ್ಮ ನೋವನ್ನ ತೋಡಿಕೊಂಡಿದ್ದರು.

pavithra-jayram-and-chandrakant-were-just-friends-says-pavithras-son-prajwal

ಚಂದ್ರಕಾಂತ್ ಅವರ ಕುಟುಂಬದ ಈ ಆರೋಪಗಳಿಗೂ ಉತ್ತರ ನೀಡಿರುವ ಪ್ರಜ್ವಲ್, ನಾವೂ ಮಾತನಾಡುವುದಕ್ಕೆ ಶುರು ಮಾಡಿದರೆ, ಮನಸ್ತಾಪಗಳು ಜಾಸ್ತಿ ಆಗ್ತಾವೆ ಎಂದಿದ್ದಾರೆ. ಚಂದು ಕುಟುಂಬದವರು ಮಾತನಾಡಿರುವುದನ್ನು ನಾನು ನೋಡಿದ್ದೇನೆ. ಅದಕ್ಕೆ ಏನ್ ಸಾಕ್ಷಿ ಬೇಕು, ಅದು ನನ್ನ ಬಳಿ ಇದೆ ಎಂದಿರುವ ಪ್ರಜ್ವಲ್, ಈಗ ನನ್ನ ಮತ್ತು ನನ್ನ ತಂಗಿ ಭವಿಷ್ಯ ಮುಖ್ಯ. ಅವರಲ್ಲೂ ದುಃಖ ಇದೆ. ಆದರೆ ಸತ್ಯ ಏನಿದೆ, ಅದನ್ನು ಮಾತನಾಡಲಿ ಎಂದು ಹೇಳಿದ್ದಾರೆ

ಮುಂದುವರೆದು ಮಾತನಾಡಿರುವ ಪ್ರಜ್ವಲ್, ಅವರಿಬ್ಬರು ಉತ್ತಮ ಸ್ನೇಹಿತರು. ನಮ್ಮ ತಾಯಿಯ ಕಾರ್ಯಗಳಲ್ಲಿ ನಾವು ಬ್ಯುಸಿ ಇದ್ದೆವು. ಇದೇ ವೇಳೆ ಚಂದ್ರಕಾಂತ್ ಸಾವಿನ ವಿಚಾರ ಗೊತ್ತಾಗಿ, ಇನ್ನೂ ಬೇಜಾರಾಯಿತು ಎಂದಿದ್ದಾರೆ. ಹೈದರಾಬಾದ್‌ನಲ್ಲಿ ನಮಗೆ ತುಂಬ ಹತ್ತಿರದಲ್ಲಿ ಇದ್ದವರು ಎಂದರೆ ಅದು ಚಂದ್ರಕಾಂತ್. ಅವರು ಈ ರೀತಿ ಮಾಡಿಕೊಂಡಿದ್ದು, ನಮಗೂ ತುಂಬಾ ಬೇಜಾರಾಯಿತು. ನಾವು ಹೋಗಬೇಕಿತ್ತು. ಆದರೆ ಇಲ್ಲಿ ಕಾರ್ಯಗಳು ಇದ್ದಿದ್ದರಿಂದ ನಾವು ಹೋಗುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ ಪವಿತ್ರಾ ಜಯರಾಂ ಅವರ ಮಗ ಪ್ರಜ್ವಲ್

More from Filmibeat

English summary
"After the tragic death of television actress Pavithra Jayram and her friend Chandrakanth, Pavitra's Son Prajwal reacted to the rumours and said, 'My mom and Chandrakant were just friends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X