ಇದ್ದಿದ್ದು 12 ವರ್ಷ ಲಿವಿಂಗ್ ಟುಗೆದರ್..ಸುಚೇಂದ್ರ ಪ್ರಸಾದ್ ಜೊತೆ ಪವಿತ್ರಾ ಲೋಕೇಶ್ ಡಿವೋರ್ಸ್ ಏಕೆ? ಕಾನೂನು ಇದೆಯೇ?
ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಕಳೆದ ಕೆಲವು ವರ್ಷಗಳಿಂದ ಸುದ್ದಿಯಲ್ಲಿದ್ದಾರೆ. ತೆಲುಗು ನಟ ನರೇಶ್ ಜೊತೆ ಲಿವಿಂಗ್ ಟುಗೆದರ್‌ನಲ್ಲಿ ಇರುವ ವಿಷಯ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. 46 ವರ್ಷದ ನಟಿ ತೆಲುಗಿನ ಶ್ರೀಮಂತ ನಟನೊಂದಿಗೆ ಸಹ ಜೀವನ ನಡೆಸುತ್ತಿರುವುದು ಬೀದಿ ರಂಪಾಟ ಆಗಿದ್ದು ಕೂಡ ಇದೆ. ಆ ಬಳಿಕ ಇಬ್ಬರೂ ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ಬಂದಿದ್ದರು. ತಮ್ಮಿಬ್ಬರ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದರು.
ಅದಾಗಲೇ ಕನ್ನಡದ ಜನಪ್ರಿಯ ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ 12 ರಿಂದ 13 ವರ್ಷಗಳ ಕಾಲ ಲಿವಿಂಗ್ ಟುಗೆದರ್‌ನಲ್ಲಿ ಇದ್ದರು. ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರಿಗೂ ಮಕ್ಕಳು ಕೂಡ ಇದ್ದಾರೆ. ಆದರೆ, ಸುಚೇಂದ್ರ ಪ್ರಸಾದ್ ಅವರನ್ನು ತೊರೆದು ಪವಿತ್ರಾ ಲೋಕೇಶ್ ತೆಲುಗು ನಟ ನರೇಶ್ ಅವರ ಪ್ರೀತಿಯಲ್ಲಿ ಬಿದ್ದಿದ್ದರು. ಈ ಬಗ್ಗೆ ತಾಯಿ ಪಾರ್ವತಿ ಲೋಕೇಶ್ ಅವರು ಇತ್ತೀಚೆಗೆ ನೀಡಿದ ಚಿತ್ರಲೋಕ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಗಳ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ನಡುವೆ ಹೊಂದಾಣೆ ಆಗುತ್ತಿರಲಿಲ್ಲ. ಮಗಳು ಇದರಿಂದ ಬೇಸತ್ತು ಹೋಗಿದ್ದರು. ಏನೇ ಮಾಡಿದರೂ ಇಷ್ಟ ಆಗುತ್ತಿರಲಿಲ್ಲ. ಶೂಟಿಂಗ್ ಅಂತ ಧಣಿದು ಮನೆಗೆ ಬಂದಾಗಲೂ ಮನೆಯಲ್ಲಿ ನೆಮ್ಮದಿ ಇರುತ್ತಿರಲಿಲ್ಲ ಎಂದು ಸುಚೇಂದ್ರ ಪ್ರಸಾದ್ ಅವರ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಈ ಸಂದರ್ಶನದಲ್ಲಿ ಪವಿತ್ರಾ ಲೋಕೇಶ್ ತಾಯಿ ಪಾರ್ವತಿ ಲೋಕೇಶ್ ಮಾಡಿದ ಆರೋಪಗಳ ಪಟ್ಟಿ ಹೀಗಿದೆ.
ದುಡಿದ ಹಣವನ್ನೆಲ್ಲ ಸುಚೇಂದ್ರ ಪ್ರಸಾದ್ ಪಾಲಾಯ್ತು: ಸುಚೇಂದ್ರ ಪ್ರಸಾದ್ ಹಾಗೂ ಮಗಳ ನಡುವಿನ ಸಂಬಂಧದ ಬಗ್ಗೆ ತಾಯಿ ಪಾರ್ವತಿ ಲೋಕೇಶ್ ಓಪನ್ ಆಗಿ ಮಾತಾಡಿದ್ದಾರೆ. "ಸುಚೇಂದ್ರ ಪ್ರಸಾದ್ ಕೂಡ ಸರಿಯಿರಲಿಲ್ಲ. ಇವಳ ಖರ್ಚಿನಲ್ಲೇ ಮ್ಯಾನೇಜ್ ಮಾಡುತ್ತಿದ್ದರು. ಬ್ಯಾಂಕ್ ಲೋನ್ ತೆಗೆದುಕೊಂಡು ಮನೆ ಮಾಡುವುದು. ಬ್ಯಾಂಕ್ ಸಾಲ ತೀರಿಸುವುದಕ್ಕೆ ಕೆಲಸ ಮಾಡಬೇಕಲ್ಲ. ಇಲ್ಲಿಂದ ನಾನು ಎಲ್ಲಾ ತೆಗೆದುಕೊಂಡು ಹೋಗುತ್ತಿದ್ದೆ. ಯಾಕಂದ್ರೆ, ಅವಳು ಶೂಟಿಂಗ್‌ಗೆ ಹೋದಾಗ ನಾನು ಅಲ್ಲಿ ಮಕ್ಕಳನ್ನು ನೋಡಿಕೊಂಡು ಇರಬೇಕಿತ್ತು. ಸಂಪಾದನೆ ಮಾಡಿದ್ದೆಲ್ಲವನ್ನೂ ಅವರು (ಸುಚೇಂದ್ರ ಪ್ರಸಾದ್) ಎತ್ತಿಕೊಂಡರು. ಹೆಣ್ಣು ಮಕ್ಕಳು ಏನು ಮಾಡುತ್ತಾರೆ ಹೇಳಿ" ಎನ್ನುತ್ತಾರೆ ಪವಿತ್ರಾ ಲೋಕೇಶ್ ಅಮ್ಮ ಪಾರ್ವತಿ ಲೋಕೇಶ್.
ಇನ್ನೊಬ್ಬರನ್ನು ಅಲ್ಲಗೆಳೆಯುವುದೇ ಕೆಲಸ: ಸುಚೇಂದ್ರ ಪ್ರಸಾದ್ ಕೆಲಸ ಮಾಡುತ್ತಿರಲಿಲ್ಲ. ಇನ್ನೊಬ್ಬರನ್ನು ಅಲ್ಲಗೆಳೆಯುವುದೇ ಕೆಲಸ ಆಗಿತ್ತೆಂದು ಆರೋಪಿಸಿದ್ದಾರೆ. "ನನ್ನ ಮಗಳು ಹಗಲು ಇರುಳು ದುಡಿಯುತ್ತಾಳೆ. ಚಿಕ್ಕದೊಂದು ಜಾಹೀರಾತು ಸಿಕ್ಕಿದರೂ ದುಡ್ಡು ಬರುತ್ತಲ್ಲ ಅಂತ ದುಡಿಯುತ್ತಾಳೆ. ರಾಜರಾಜೇಶ್ವರಿ ನಗರದಲ್ಲಿ ಮನೆ ಮಾಡಿದ್ದಾಳೆ. ಅದಕ್ಕಾಗಿ ಬ್ಯಾಂಕ್ ಲೋನ್ ಮಾಡಿದ್ದಾಳೆ. ಸುಚೇಂದ್ರ ಪ್ರಸಾದ್ ಏನು ಮಾಡುತ್ತಿದ್ದರು? ಸುಮ್ಮನೆ ಕೂತು ಇನ್ನೊಬ್ಬರನ್ನು ಅಲ್ಲೆಗೆಳೆಯುವುದೇ ಕೆಲಸ. ಎಷ್ಟು ದಿನ ಸಹಿಸಿಕೊಳ್ಳುವುದಕ್ಕೆ ಆಗುತ್ತೆ. ಅವಳು ಬುದ್ದಿವಂತೆ. ಅವಳಿಗೆ ಸರಿ ತಪ್ಪು ಎಲ್ಲಾ ಗೊತ್ತಾಗುತ್ತೆ." ಎಂದು ಮಗಳ ಬೆಂಬಲಕ್ಕೆ ಅಮ್ಮ ನಿಂತಿದ್ದಾರೆ.

ನಾನು ಏನು ಹರಿಕಥೆ ಮಾಡೋದು ಏನಿಲ್ಲ: "12-13 ವರ್ಷ ಲಿವಿಂಗ್ ಟುಗೆದರ್‌ನಲ್ಲಿ ಇದ್ಮೇಲೆ ಡಿವೋರ್ಸ್ ಅಂತ ಆಗಲೇಬೇಕು. ಆ ರೀತಿ ಕಾನೂನು ಇದೆ. ಮೈಸೂರಿನಲ್ಲಿಯೇ ಡಿವೋರ್ಸ್ ಮಾಡಿಕೊಂಡಿದ್ದಾಳೆ. ಅದನ್ನು ಬೇರೆಯವರು ಹೇಳಿದರು. ನಾನು ಇವನ್ನೆಲ್ಲ ಮಕ್ಕಳ ಹತ್ತಿರ ಮಾತಾಡುವುದಿಲ್ಲ. ಈಗ ಎಲ್ಲರೂ ದೊಡ್ಡವರಾಗಿದ್ದಾರೆ. ಮಗಳು 43-44 ಆಗಿದೆ. ಅವಳಿಗೂ 45-46 ಆಗಿದೆ. ಈಗ ಕೂತುಕೊಂಡು ನಾನು ಏನು ಹರಿಕಥೆ ಮಾಡೋದು." ಎಂದು ಚಿತ್ರಲೋಕ ಯೂಟ್ಯೂಬ್ ಚಾನೆಲ್‌ಗೆ ತಿಳಿಸಿದ್ದಾರೆ.
ನರೇಶ್ ಜೊತೆ ಮದುವೆ ಆಗಿರಬಹುದು: "ನರೇಶ್ ಜೊತೆ ಮದುವೆ ಆಗಿದೆ ಅಂತ ಹೇಳಿದಳು. ಆ ಯಪ್ಪನೂ ಕೂಡ ಹೇಳಿದರು. ನಾನು ಅಲ್ಲಿಗೆಲ್ಲ ಹೋಗಿದ್ದೆ. ಅಮ್ಮ ನನಗೆ ನೆಮ್ಮದಿ ಬೇಕು. ಬರೀ ದುಡಿದು ದುಡಿದು ಕೊಟ್ಟಿದ್ದಷ್ಟೇ ಆಗಿತ್ತು. ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವರು ಬೇಕು ಅಂತ ಹೇಳಿದಳು. ನರೇಶ್ ಜೊತೆ ಮದುವೆ ಆಗಿರಬಹುದು ನನಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವುದಕ್ಕೆ ಹೋಗಿಲ್ಲ. ಅದನ್ನು ಕೇಳುವುದಕ್ಕೂ ಆಗುವುದಿಲ್ಲ. ಯಾಕಂದ್ರೆ ನಿನಗೆ ಯಾಕೆ ಬೇಕಮ್ಮ ಅಂತ ಅಂದರೆ? ನಾನು ಏನು ಮಾಡಲಿ." ಎಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.


Click it and Unblock the Notifications











