OG Advance Booking: ಬೆಂಗಳೂರಿನಲ್ಲಿ 'ಓಜಿ' ಸಿನಿಮಾಗೆ ಭಾರೀ ಕ್ರೇಜ್; ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್ ಎಷ್ಟು?
ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಕೆಲವೇ ದಿನಗಳ ಹಿಂದಷ್ಟೇ 'ಹರಿಹರ ವೀರ ಮಲ್ಲು; ಪಾರ್ಟ್ 1' ರಿಲೀಸ್ ಆಗಿತ್ತು. ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಿಲೀಸ್ ಆಗಿದ್ದ ಮೊದಲ ಸಿನಿಮಾ ಆಗಿತ್ತು. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿ ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು.
'ಹರಿಹರ ವೀರ ಮಲ್ಲು'ದ ಮುಂದೆ ಕನ್ನಡದ ಹೊಸಬರ ಸಿನಿಮಾ 'ಸು ಫ್ರಮ್ ಸೋ' ಗೆದ್ದು ಬೀಗಿತ್ತು. ಯಾವಾಗ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲುಂಡಿತೋ ಆಗ ಪವನ್ ಕಲ್ಯಾಣ್ ಕ್ರೇಜ್ ಚಿತ್ರರಂಗದಲ್ಲಿ ಕಡಿಮೆ ಆಯ್ತಾ? ಎಂಬ ಅನುಮಾನ ಮಾಡಿತ್ತು. ಈಗ ಅವರ ಮತ್ತೊಂದು ಸಿನಿಮಾ 'ಓಜಿ' (OG) ರಿಲೀಸ್‌ಗೆ ರೆಡಿಯಾಗಿ ನಿಂತಿದ್ದು, ಈ ಲೆಕ್ಕಾಚಾರವನ್ನೆಲ್ಲಾ ತಲೆ ಕೆಳಗೆ ಮಾಡಿದೆ.

'ಓಜಿ' (OG) ಸಿನಿಮಾಗೆ ಅಂದುಕೊಂಡಿದ್ದಕ್ಕಿಂತ ಕ್ರೇಜ್ ದುಪ್ಪಟ್ಟಾಗಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿತ್ತು. ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಟಿಕೆಟ್‌ಗಳು ಬಿಸಿ ಬಿಸಿ ಕೇಕ್‌ನಂತೆ ಸೇಲ್ ಆಗುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಈಗಾಗಲೇ ಸಾವಿರಾರು ಲೆಕ್ಕದಲ್ಲಿ ಟಿಕೆಟ್ ಸೇಲ್ ಆಗಿದೆ. ಇನ್ನೂ ಬೆಂಗಳೂರಿನಲ್ಲಿ ಅತೀ ವೇಗವಾಗಿ 'ಓಜಿ' ಟಿಕೆಟ್ ಖರೀದಿಯಾಗುತ್ತಿದೆ ಎನ್ನಲಾಗಿದೆ. ಹಾಗಿದ್ದರೂ ಇದೂವರೆಗೂ ಎಷ್ಟು ಟಿಕೆಟ್‌ಗಳು ಖರೀದಿ ಆಗಿವೆ? ಎಷ್ಟು ಕೋಟಿ ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಓಜಿ' ಬೆಂಗಳೂರಿನಲ್ಲಿ ಭರ್ಜರಿ ರೆಸ್ಪಾನ್ಸ್
ಪವನ್ ಕಲ್ಯಾಣ್ ಸಿನಿಮಾಗೆ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಾರೆ. 'ಹರಿಹರ ವೀರಮಲ್ಲು' ಸಿನಿಮಾಗೂ ಮೊದಲ ದಿನ ರೆಸ್ಪಾನ್ಸ್ ಚೆನ್ನಾಗಿತ್ತು. ಸಿನಿಮಾ ಸೋತಿದ್ದರಿಂದ 'ಓಜಿ' ಮೇಲೆ ಪರಿಣಾಮ ಬೀರಬಹುದೆಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಅದೆಲ್ಲವೂ ತಲೆ ಕೆಳಗಾಗಿದೆ. ಕರ್ನಾಟಕ ಟಾಕೀಸ್ ಪ್ರಕಾರ, ಪವನ್ ಕಲ್ಯಾಣ್ 'ಓಜಿ' ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡುತ್ತಿದೆ.


Click it and Unblock the Notifications











