ವೆಂಕಟೇಶ್ ಕುಟುಂಬಕ್ಕೆ ಪವರ್ ಸ್ಟಾರ್ ಧನ ಸಹಾಯ
ಮಹಬೂಬ್ ನಗರ ಜಿಲ್ಲೆಯ ಪಾಲೇಂ ಬಳಿ ನಡೆದ ವೋಲ್ವೋ ಬಸ್ ಅಪಘಾತದಲ್ಲಿ ಅಖಿಲ ಕರ್ನಾಟಕ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ವೆಂಕಟೇಶ್ ದುರಂತ ಸಾವಪ್ಪಿದ್ದು ಗೊತ್ತೇ ಇದೆ. ಅವರ ಕುಟುಂಬಕ್ಕೆ ಇತ್ತೀಚೆಗೆ ನಟ ಚಿರಂಜೀವಿ ಸಹಾಯ ಹಸ್ತ ಚಾಚಿದ ಬೆನ್ನಲ್ಲೇ ಈಗ ಅವರ ಸಹೋದರ ಪವನ್ ಕಲ್ಯಾಣ್ ಕೂಡ ಧನ ಸಹಾಯ ಮಾಡಿದ್ದಾರೆ.
ಚಿರಂಜೀವಿ ಅವರು ರು.5 ಲಕ್ಷದ ಚೆಕ್ ಕೊಟ್ಟಿದ್ದರು. ವೆಂಕಟೇಶ್ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ತಾವು ವಹಿಸಿಕೊಂಡಿರುವುದಾಗಿ ತಿಳಿಸಿದ್ದರು. ಬಳಿಕ ಚಿರಂಜೀವ ಅವರ ಅಣ್ಣ ನಾಗಬಾಬು ಅವರು ರು.5 ಲಕ್ಷ ಸಹಾಯ ಮಾಡಿದರು. [ಬಸ್ ದುರಂತದ ಚಿತ್ರಗಳು]

ಮದುವೆಯ ಆಹ್ವಾನ ಪತ್ರಿಕೆ ಹಂಚಲು ಹೈದರಾಬಾದ್‌ಗೆ ತೆರಳಿದ್ದ ನಟ ಚಿರಂಜೀವಿ ಅಭಿಮಾನಿ ಸಂಘದ ಅಧ್ಯಕ್ಷ ಎಸ್.ವೆಂಕಟೇಶ್ ಯಾದವ್ (ಕೋಟೆ) ಹಾಗೂ ಸಹೋದರಿ ಅನಿತಾ ಬಸ್ ದುರಂತದಲ್ಲಿ ಸಾವಪ್ಪಿದ್ದರು.
ಮಕ್ಕಳ ಜತೆ ಮಾತನಾಡಿ ಕಲಾಸಿಪಾಳ್ಯದಲ್ಲಿರುವ ಜಬ್ಬಾರ್ ಟ್ರಾವೆಲ್ಸ್‌ಗೆ ತೆರಳಿದ ವೆಂಕಟೇಶ್ ಮಂಗಳವಾರ (ಅ.29) ರಾತ್ರಿ 10 ಗಂಟೆ ಸುಮಾರಿಗೆ ಬಸ್ ಹತ್ತಿದ ಬಳಿಕ ಮಕ್ಕಳ ಮೊಬೈಲ್‌ಗೆ ಕರೆ ಮಾಡಿ, ಬಸ್ ಹತ್ತಿರುವ ವಿಷಯ ತಿಳಿಸಿ ಊಟ ಮಾಡಿ ಮಲಗುವಂತೆ ಹೇಳಿದ್ದರು. ಅದೇ ಅವರ ಕೊನೆಯ ಮಾತು. ಬೆಳಗಾಗುವುದರೊಳಗೆ ಮೊಬೈಲ್ ಸಮೇತ ಅವರು ಜೀವಂತ ಸುಟ್ಟು ಕರಕಲಾಗಿದ್ದರು. (ಏಜೆನ್ಸೀಸ್)


Click it and Unblock the Notifications











