ಪವನ್ ಕಲ್ಯಾಣ್ 'ಓಜಿ' ಪ್ರೀಮಿಯರ್‌ಗೆ ಸಖತ್ ರೆಸ್ಪಾನ್ಸ್; ಕರ್ನಾಟಕದಲ್ಲಿ ಒಂದು ಶೋನಿಂದಾದ ಕಲೆಕ್ಷನ್ ಎಷ್ಟು?
ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ 'ಓಜಿ'(OG) ಸಿನಿಮಾ ನಾಳೆ (ಸೆಪ್ಟೆಂಬರ್ 25) ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಕೆಲವು ಕಡೆ ಅಭಿಮಾನಿಗಳಿಗಾಗಿ ಪ್ರೀಮಿಯರ್ ಶೋ ಅನ್ನು ಏರ್ಪಡಿಸಲಾಗಿದೆ. ಈ ಶೋಗೆ ಎಲ್ಲಾ ಕಡೆಯಿಂದಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪವನ್ ಕಲ್ಯಾಣ್ ಮತ್ತೆ ಮಾಸ್ ಅವತಾರದಲ್ಲಿ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. 'ಸಾಹೋ' ಸಿನಿಮಾ ನಿರ್ದೇಶಿಸಿದ ಸುಜಿತ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಪವನ್ ಕಲ್ಯಾಣ್ 'ಓಜಿ'(OG)ಗೆ ಕರ್ನಾಟಕದಲ್ಲೂ ಕ್ರೇಜ್ ಜೋರಾಗಿತ್ತು. ಅಡ್ವಾನ್ಸ್ ಬುಕಿಂಗ್‌ಗೆ ಕೂಡ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕೆಲವ ಬೆಂಗಳೂರಿನಲ್ಲಿಯೇ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆ ಎಂದು ಈಗಾಗಲೇ ವರದಿಯಾಗಿವೆ. ಇನ್ನು ಇಂದು (ಸೆಪ್ಟೆಂಬರ್ 24) ಕರ್ನಾಟಕದ ಹಲವು ಏರಿಯಾಗಳಲ್ಲಿ ಪ್ರೀಮಿಯರ್ ಶೋ ಇಡಲಾಗಿತ್ತು. ತೆಲುಗು ಮಂದಿ ಇರುವ ಏರಿಯಾಗಳಲ್ಲಿ ಈ ಶೋಗೆ ಸಿಕ್ಕಾಪಟ್ಟೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ಬೆಂಗಳೂರಿನಲ್ಲಿ ಪ್ರೀಮಿಯರ್ ಶೋಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದ ವಿತರಕರ ವಲಯದ ಮೂಲಗಳ ಪ್ರಕಾರ, ಇಲ್ಲಿ ಸುಮಾರು 344 ಪ್ರೀಮಿಯರ್ ಶೋಗಳು ನಡೆದಿವೆ. ಅದರಲ್ಲಿ ಶೇ.98ರಷ್ಟು ಶೋಗಳು ಹೌಸ್‌ಫುಲ್ ಪ್ರದರ್ಶನಗಳು ಕಂಡಿವೆ. ಹೀಗಾಗಿ ಕೇವಲ ಪ್ರೀಮಿಯರ್ ಶೋನಿಂದ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹಾಗಿದ್ದರೆ, ಪ್ರೀಮಿಯರ್ ಶೋ ಕಲೆಕ್ಷನ್ ಲೆಕ್ಕಚಾರವೇನು? ಯಾವ್ಯಾವ ಥಿಯೇಟರ್‌ನಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಓಜಿ' ಪ್ರೀಮಿಯರ್‌ಗೆ ಮಸ್ತ್ ರೆಸ್ಪಾನ್ಸ್
ಪವನ್ ಕಲ್ಯಾಣ್ ಸಿನಿಮಾಗಳು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಉತ್ತಮ ಪ್ರದರ್ಶನ ಕಾಣುತ್ತವೆ. ತೆಲುಗು ಮಂದಿ ಇರುವ ಏರಿಯಾಗಳಲ್ಲಿ ಪವನ್ ಕಲ್ಯಾಣ್ ಸಿನಿಮಾಗಳಿಗೆ ಹಿಂದಿನಿಂದಲೂ ಕ್ರೇಜ್ ಇದ್ದೇ ಇದೆ. ಆದರೆ, ಪಾಲಿಟಿಕ್ಸ್‌ಗೆ ಹೋದ ಮೇಲೆ ಕ್ರೇಜ್ ಕಮ್ಮಿ ಆಗಿರಬಹುದೆಂದು ಊಹಿಸಲಾಗಿತ್ತು. ಅಲ್ಲದೆ ಹರಿಹರ ವೀರಮಲ್ಲು ಸಿನಿಮಾ ಕೂಡ ಮಕಾಡೆ ಮಲಗಿತ್ತು. ಹೀಗಾಗಿ 'ಓಜಿ'(OG) ಮೇಲೂ ಆರಂಭದಲ್ಲಿ ಹೋಪ ಇರಲಿಲ್ಲ. ಅಡ್ವಾನ್ಸ್ ಬುಕಿಂಗ್ ಓಪನ್ ಆಗುತ್ತಿದ್ದಂತೆ ಕ್ರೇಜ್ ಕಂಪ್ಲೀಟ್ ಆಗಿ ಬದಲಾಗಿತ್ತು.
ಪ್ರೀಮಿಯರ್ ಕರ್ನಾಟಕ ಕಲೆಕ್ಷನ್
'ಓಜಿ' ಪ್ರೀಮಿಯರ್‌ಗೆ ಕರ್ನಾಟಕದ ಶೇ.98ರಷ್ಟು ಸ್ಕ್ರೀನ್‌ಗಳು ತುಂಬಿದ್ದವು ಅನ್ನೋದು ಸದ್ಯದ ಸುದ್ದಿ. 344 ಶೋಗಳ ಪೈಕಿ 320 ಶೋಗಳು ಫುಲ್ ಆಗಿದ್ದವು ಅನ್ನೋದು ಚರ್ಚೆಯಾಗುತ್ತಿದೆ. ಹಾಗೇ ಕೇವಲ ಪ್ರೀಮಿಯರ್ ಶೋಗಳಿಂದಲೇ 'ಓಜಿ' ಸಿನಿಮಾ ಕರ್ನಾಟಕದಲ್ಲಿ ಸುಮಾರು ₹3 ಕೋಟಿವರೆಗೂ ಕಲೆಕ್ಷನ್ ಆಗಬಹುದೆಂದು ಅಂದಾಜು ಹಾಕಲಾಗಿದೆ. ಚಿತ್ರತಂಡ ಇನ್ನೂ ಅಧಿಕೃತವಾಗಿ ಇನ್ನೂ ಅಂಕಿ-ಅಂಶಗಳನ್ನು ಹೊರಬಿಡಬೇಕಾಗಿದೆ.
ಬೆಂಗಳೂರು ಥಿಯೇಟರ್‌ಗಳ ಕಲೆಕ್ಷನ್
ಬೆಂಗಳೂರಿನಲ್ಲಿ ತೆಲುಗು ಮಂದಿ ಹಬ್ಬ ಆಚರಣೆ ಮಾಡಿದ್ದಾರೆ. ಪವನ್ ಕಲ್ಯಾಣ್ ಅನ್ನು ಮಾಸ್ ಅವತಾರದಲ್ಲಿ ಕಣ್ತುಂಬಿಕೊಂಡು ಥ್ರಿಲ್ ಆಗಿದ್ದಾರೆ. ಟಿಕೆಟ್ ಬೆಲೆ ಗಣನೀಯವಾಗಿ ಏರಿಕೆ ಮಾಡಿದರೂ, ತೆಲುಗು ಮಂದಿ ಕ್ಯಾರೇ ಅನ್ನದೇ ಚಿತ್ರಮಂದಿರಕ್ಕೆ ನುಗ್ಗಿ ಸಿನಿಮಾವನ್ನು ನೋಡಿದ್ದಾರೆ. ಹೀಗಾಗಿ ಬೆಂಗಳೂರಿನ ಕೆಲವು ತೆಲುಗು ಸೆಂಟರ್‌ಗಳು ಪೇಯ್ಡ್ ಪ್ರೀಮಿಯರ್‌ನಿಂದಲೇ ಲಕ್ಷಗಳ ಲೆಕ್ಷದಲ್ಲಿ ಕಲೆಕ್ಷನ್ ಮಾಡಿವೆ.
ಬೆಂಗಳೂರು ಥಿಯೇಟರ್‌ಗಳ ಕಲೆಕ್ಷನ್
ಊರ್ವಶಿ ₹6.34 ಲಕ್ಷ
ಮುಕುಂದ ₹5.10 ಲಕ್ಷ
ಮಾನಸ ₹3.90 ಲಕ್ಷ
ಸಂಧ್ಯಾ ₹5.40 ಲಕ್ಷ
ವಿನಾಯಕ ₹5.00 ಲಕ್ಷ
ವೆಂಕಟೇಶ್ವರ ₹3.60 ಲಕ್ಷ
ಬೃಂದಾ ₹5.65 ಲಕ್ಷ
ಬಾಲಾಜಿ ₹4.40 ಲಕ್ಷ


Click it and Unblock the Notifications











