For Quick Alerts
  ALLOW NOTIFICATIONS  
  For Daily Alerts

  17 ಮಂದಿಯ ಆಸ್ಕರ್ ಜ್ಯೂರಿಯಲ್ಲಿ ಪವನ್ ಒಡೆಯರ್: 'ಡೊಳ್ಳು' ಕಾರಣವೆಂದ ನಿರ್ದೇಶಕ!

  |

  2023ರಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸುವ ಸಿನಿಮಾವನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಭಾರತದಿಂದ ಆಸ್ಕರ್ ಅಂಗಳಕ್ಕೆ ಲಗ್ಗೆ ಇಡುತ್ತಿರೋದು ಗುಜರಾತಿ ಸಿನಿಮಾ 'ಛಲ್ಲೋ ಶೋ'. ಸದ್ಯ ಈ ಸಿನಿಮಾ ಬಗ್ಗೆ ಭಾರತದಾದ್ಯಂತ ಚರ್ಚೆಯಾಗುತ್ತಿದೆ.

  ಭಾರತದ ಸಿನಿಮಾ ಆಸ್ಕರ್ ಆಯ್ಕೆಯಾದ ಬಗ್ಗೆ ಚರ್ಚೆಯಾಗುತ್ತಿದ್ದರೆ. ಇನ್ನೊಂದು ಕಡೆ ಆಯ್ಕೆ ಮಾಡಿದ ತಂಡದಲ್ಲಿ ಕನ್ನಡ ನಿರ್ದೇಶಕರೊಬ್ಬರು ಇದ್ದರು ಅನ್ನೋದು ಈಗ ಬೆಳಕಿಗೆ ಬಂದಿದೆ. ಅವರು ಮತ್ಯಾರೂ ಅಲ್ಲ 'ಗೂಗ್ಲಿ' ಸಿನಿಮಾದ ನಿರ್ದೇಶಕ ಪವನ್ ಒಡೆಯರ್.

  ಬಾಲಿವುಡ್ ಸಿನಿಮಾ ನಿರ್ಮಾಣಕ್ಕೆ ಮುಂದಾದ ಪವನ್ ಒಡೆಯರ್: ನಿರ್ದೇಶಕರೂ ಅವರೇ!ಬಾಲಿವುಡ್ ಸಿನಿಮಾ ನಿರ್ಮಾಣಕ್ಕೆ ಮುಂದಾದ ಪವನ್ ಒಡೆಯರ್: ನಿರ್ದೇಶಕರೂ ಅವರೇ!

  ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಪ್ರತಿ ವರ್ಷ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತೆ. ಅದಕ್ಕೆ ಅಂತ ಒಂದು ಕಮಿಟಿಯನ್ನು ಮಾಡುತ್ತಾರೆ. ಬೇರೆ ಭಾಷೆಯ ನಿರ್ದೇಶಕರು ಸೇರಿದಂತೆ ಚಿತ್ರರಂಗದ ಗಣ್ಯರು ಆ ತಂಡದಲ್ಲಿರುತ್ತಾರೆ. ಇದೇ ತಂಡದಲ್ಲಿ ಪವನ್ ಒಡೆಯರ್ ಕೂಡ ಒಬ್ಬರಾಗಿದ್ದರು. ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಹಲವು ವಿಭಾಗಗಳಿಗೆ ಹಲವು ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.

  ಭಾರತದ ಆಸ್ಕರ್ ಅವಾರ್ಡ್ ಜ್ಯೂರಿ ಸದಸ್ಯರಾಗಿ ಕನ್ನಡದ ನಿರ್ದೇಶಕರು ಪಾಲ್ಗೊಂಡಿರೋದ್ದನ್ನು ಪವನ್ ಒಡೆಯರ್ ರಿವೀಲ್ ಮಾಡಿದ್ದಾರೆ. ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಒಡೆಯರ್ ಆಸ್ಕರ್ ಅವಾರ್ಡ್ ಸೆಲೆಕ್ಷನ್ ಕಮಿಟಿಯ ಸದಸ್ಯರಾಗಿ ಭಾಗಿಯಾಗಿದ್ದನ್ನು ಸ್ವತ: ಪವನ್ ಒಡೆಯರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ಡೊಳ್ಳು' ಚಿತ್ರದ ಮೊದಲ ಹಾಡು ರಿಲೀಸ್: 'ಮಾಯಾನಗರಿ'ಯಲ್ಲಿ ಕಳೆದು ಹೋದ ಡಾಲಿ!'ಡೊಳ್ಳು' ಚಿತ್ರದ ಮೊದಲ ಹಾಡು ರಿಲೀಸ್: 'ಮಾಯಾನಗರಿ'ಯಲ್ಲಿ ಕಳೆದು ಹೋದ ಡಾಲಿ!

  ಈ ಬಗ್ಗೆ ಮಾಧ್ಯಮಗಳಿಗೆ ಪವನ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದು, "ಆಸ್ಕರ್ ಕಮಿಟಿಯಿಂದ ನನಗೆ ಕರೆ ಬರುತ್ತೆ ಎಂದು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆರಂಭದಲ್ಲಿ ನನಗೆ ನಂಬಲೂ ಸಾಧ್ಯವಾಗಿರಲಿಲ್ಲ. ನನ್ನ ಸಿನಿಮಾ ಕೆಲಸಗಳನ್ನು ಗುರುತಿಸಿ ಜ್ಯೂರಿ ತಂಡದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದು ಬಹಳ ಖುಷಿ ನೀಡಿದೆ. ನನ್ನ ನಿರ್ಮಾಣದ 'ಡೊಳ್ಳು' ಸಿನಿಮಾ ಇಂತಹದ್ದೊಂದು ಪ್ರತಿಷ್ಠಿತ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದು ಭಾವಿಸಿದ್ದೇನೆ. ಇದು ನನಗೆ ಬಹಳ ದೊಡ್ಡ ಗೌರವ ಎಂದೇ ಭಾವಿಸಿದ್ದೇನೆ. 17 ಜನರ ತಂಡದಲ್ಲಿ ಕನ್ನಡ ಚಿತ್ರರಂಗದಿಂದ ನಾನೂ ಒಬ್ಬ ಜ್ಯೂರಿಯಾಗಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ." ಎಂದಿದ್ದಾರೆ.

  "ಆಸ್ಕರ್ ಸೆಲೆಕ್ಷನ್‌ಗೆ ಹಿಂದಿ, ಬೆಂಗಾಲಿ, ತೆಲುಗು, ತಮಿಳು, ಗುಜರಾತಿ, ಮಲಯಾಳಂ ಭಾಷೆಗಳಿಂದ ಸಿನಿಮಾಗಳು ಬಂದಿದ್ದವು. ಆದರೆ ನಮ್ಮ ಭಾಷೆಯಿಂದ ಒಂದೇ ಒಂದು ಸಿನಿಮಾ ಆಯ್ಕೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಸಿನಿಮಾಗಳು ಆಸ್ಕರ್‌ಗೆ ಬರುತ್ತವೆ" ಎಂದು ಭರವಸೆ ಪವನ್ ಒಡೆಯರ್ ಭರವಸೆ ನೀಡಿದ್ದಾರೆ.

  Pawan Wadeyar Is One Of The Jury Member For Oscar Selection In Indian Movies.

  ಫ್ಯಾನ್ಸ್‌ಗಾಗಿ 'ನಟಸಾರ್ವಭೌಮ' ಚಿತ್ರದ ಅಸಲಿ ಟೈಟಲ್ ಟ್ರ್ಯಾಕ್: ಸಾಂಗ್‌ನಲ್ಲಿ ಅಪ್ಪುವಿನ 42 ಸಿನಿಮಾ ಶೀರ್ಷಿಕೆಫ್ಯಾನ್ಸ್‌ಗಾಗಿ 'ನಟಸಾರ್ವಭೌಮ' ಚಿತ್ರದ ಅಸಲಿ ಟೈಟಲ್ ಟ್ರ್ಯಾಕ್: ಸಾಂಗ್‌ನಲ್ಲಿ ಅಪ್ಪುವಿನ 42 ಸಿನಿಮಾ ಶೀರ್ಷಿಕೆ

  ಪವನ್ ಒಡೆಯರ್ ನಿರ್ಮಿಸಿದ್ದ 'ಡೊಳ್ಳು' ಸಿನಿಮಾ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡು ಜನರ ಮೆಚ್ಚುಗೆ ಗಳಿಸಿತ್ತು. ಇನ್ನು ಪವನ್ ಒಡೆಯರ್ ಈಗಾಗಲೇ 'ರೆಮೋ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಆ ಸಿನಿಮಾ ಬಿಡುಗಡೆಯಾಗಬೇಕಿದೆ. ಇದರೊಂದಿಗೆ ಬಾಲಿವುಡ್‌ ಸಿನಿಮಾವೊಂದನ್ನು ನಿರ್ದೇಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಆ ಸಿನಿಮಾ ಕೂಡ ಶೀಘ್ರದಲ್ಲಿಯೇ ಸೆಟ್ಟೇರಲಿದೆ.

  English summary
  Pawan Wadeyar Is One Of The Jury Member For Oscar Selection In Indian Movies, Know More.
  Monday, September 26, 2022, 20:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X