Peddi to Jailer 2 ಕ್ಯಾನ್ಸರ್ ಗೆದ್ದ ಶಿವಣ್ಣ ಫುಲ್ ಬ್ಯುಸಿ.. ಮುಂದಿನ 6 ತಿಂಗಳು ಇವ್ರದ್ದೇ!
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಎನರ್ಜಿಗೆ ಮ್ಯಾಚ್ ಮಾಡೋಕೆ ಯಾರಿಗೆ ಸಾಧ್ಯ? ಈ ಪ್ರಶ್ನೆಗೆ ಮತ್ತೊಮ್ಮೆ ಉತ್ತರ ಸಿಕ್ಕಿದೆ. ಕನ್ನಡ ಸೂಪರ್‌ಸ್ಟಾರ್‌ಗಳು ವರ್ಷಕ್ಕೊಂದು, ಎರಡು ವರ್ಷಕ್ಕೊಂದು, ಮೂರು ವರ್ಷಕ್ಕೊಂದು ಅಂತ ಸಿನಿಮಾ ಮಾಡುವಾಗ ಶಿವಣ್ಣ ಮಾತ್ರ ನನಗೂ ಅದಕ್ಕೂ ಅಸಂಬಂಧವೇ ಇಲ್ಲ ಅನ್ನೋ ರೀತಿ ಕೆಲಸ ಮಾಡುತ್ತಿದ್ದಾರೆ.
ಶಿವಣ್ಣ ಎನರ್ಜಿ ಬಗ್ಗೆ ಇಡೀ ಇಂಡಸ್ಟ್ರೀಗೆ ಗೊತ್ತು. ಈ ಹಿಂದೆನೂ ಕೂಡ ವರ್ಷಕ್ಕೆ ಕಮ್ಮಿ ಅಂದರೂ ಎರಡರಿಂದ ಮೂರು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಆದರೆ, ಶಿವಣ್ಣ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಅವರ ಅಭಿಮಾನಿಗಳಿಗಿಂತ ಚಿತ್ರರಂಗಕ್ಕೆ ಆಘಾತ ಆಗಿತ್ತು. ಶಿವಣ್ಣ ಕ್ಯಾನ್ಸರ್‌ನಿಂದ ಗುಣಮುಖರಾಗಿ ಬರುತ್ತಾರೆಂಬ ನಂಬಿಕೆ ಇತ್ತು. ಹೀಗಾಗಿ ಅವರಿಗೆ ಆತಂಕ ಕಾಡಿದ್ದು, ಮುಂದು ಸಿನಿಮಾ ಮಾಡುವುದನ್ನು ಕಮ್ಮಿ ಮಾಡಿದರೆ ಏನು ಗತಿ? ಅನ್ನೋ ಪ್ರಶ್ನೆ ಅಂತೂ ಎದ್ದಿತ್ತು.

ಅದಕ್ಕೆ ಶಿವಣ್ಣ ಈ ವರ್ಷ ಉತ್ತರ ಕೊಟ್ಟಿದ್ದಾರೆ. 2026 ಸೆಕೆಂಡ್‌ವರೆಗೂ ಒಂದೇ ಒಂದು ಸಿನಿಮಾ ಕೂಡ ರಿಲೀಸ್ ಆಗಿಲ್ಲ. ಆದರೆ, ಸೆಕೆಂಡ್ ಹಾಫ್‌ನಲ್ಲಿ ಬರೋಬ್ಬರು ಐದು ಸಿನಿಮಾಗಳು ರಿಲೀಸ್‌ಗೆ ತುದಿಗಾಲಲ್ಲಿ ನಿಂತಿವೆ. ಜೂನ್ ತಿಂಗಳಿನಿಂದ ಡಿಸೆಂಬರ್‌ವರೆಗೂ ಬರೋಬ್ಬರಿ 5 ಸಿನಿಮಾಗಳು ರಿಲೀಸ್ ಆಗುತ್ತಿವೆ. 'ಪೆದ್ದಿ'ಯಿಂದ ಶುರುವಾದರೆ 'ಡ್ಯಾಡ್'ವರೆಗೂ ರಿಲೀಸ್ ಆಗಲಿವೆ. ಹಾಗಿದ್ದರೆ, ಆ ಐದು ಸಿನಿಮಾಗಳು ಯಾವುವು? ಯಾವ್ಯಾವಾಗ ರಿಲೀಸ್ ಆಗುತ್ತೆ? ತಿಳಿಯುವುದಕ್ಕೆ ಮುಂದೆ ಓದಿ.
ರಾಮ್ ಚರಣ್-'ಪೆದ್ದಿ'
ತೆಲುಗಿನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ 'ಪೆದ್ದಿ' ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಸಿನಿಮಾ ತಂಡ ಪ್ರಚಾರವನ್ನು ಆರಂಭಿಸಿದೆ. ಈ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಿವಣ್ಣ ಪಾತ್ರ, ಲುಕ್, ಗೆಟಪ್ ಎಲ್ಲವೂ ರಿವೀಲ್ ಆಗಿದ್ದು ಈ ಸಿನಿಮಾ ಜೂನ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿರೋದು ವಿಶೇಷ.
'ಜೈಲರ್ 2'
ಶಿವಣ್ಣನ ಕರಿಯರ್‌ಗೆ 'ಜೈಲರ್' ಹೊಸ ಇಮೇಜ್ ಕೊಟ್ಟಿತ್ತು. ಶಿವಣ್ಣ ಎಂಟ್ರಿ, ಲುಕ್, ಖದರ್ ನೋಡಿ ತಮಿಳಿಗರೇ ಶಿಳ್ಳೆ ಹೊಡೆದಿದ್ದರು. ಈ ಬೆನ್ನಲ್ಲೇ 'ಜೈಲರ್ 2' ರಿಲೀಸ್ ನಿರೀಕ್ಷೆಗಳನ್ನು ಹುಟ್ಟಾಕಿದೆ. ಮತ್ತೆ ಶಿವಣ್ಣನ ಖದರ್ ನೋಡುವುದಕ್ಕೆ ಕಾದು ಕೂತಿದ್ದಾರೆ. ಸದ್ಯ ಈ ಸಿನಿಮಾ ಪೋಸ್ಟ್‌ಪ್ರೊಡಕ್ಷನ್ ಹಂತದಲ್ಲಿದೆ. ಆಗಸ್ಟ್‌ಗೆ ರಿಲೀಸ್ ಆಗಬೇಕಿದ್ದ ಸಿನಿಮಾವನ್ನು ಸೆಪ್ಟೆಂಬರ್ 4 ರಂದು ರಿಲೀಸ್ ಮಾಡುವ ಸಾಧ್ಯತೆಯಿದೆ ಎಂದು 'ಸಿನಿ ಉಳಗಂ' ವರದಿ ಮಾಡಿದೆ.

'ಬೇಲ್'
ಶಿವರಾಜ್‌ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್‌ನ ಮೊದಲ ಸಿನಿಮಾ 'ಬೇಲ್' ಕೂಡ ಇದೇ ವರ್ಷ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲೂ ಶಿವಣ್ಣ ಲುಕ್ ಗಮನ ಸೆಳೆಯುತ್ತಿದೆ. ಪವನ್ ಒಡೆಯರ್ ನಿರ್ದೇಶನವಿರೋ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗಬಹುದೆಂಬ ನಿರೀಕ್ಷೆಯಿದೆ.
'666 ಆಪರೇಷನ್ ಡ್ರೀಮ್ ಥಿಯೇಟರ್'
ಹೇಮಂತ್ ಎಂ ರಾವ್ ನಿರ್ದೇಶನದ '666 ಆಪರೇಷನ್ ಡ್ರೀಮ್ ಥೀಯೇಟರ್' ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾ ಬಿಗ್ ರಿಲೀಸ್ ಆಗಲಿದೆ.
'ಡ್ಯಾಡ್'
ಈ ವರ್ಷ ರಿಲೀಸ್ ಆಗುತ್ತಿರುವ ಶಿವಣ್ಣನ ಮತ್ತೊಂದು ಸಿನಿಮಾ 'ಡ್ಯಾಡ್'. ಅನಿಲ್ ಕನ್ನೆಗಂಟಿ ನಿರ್ದೇಶನದ ಈ ಸಿನಿಮಾವನ್ನು ಮೈರಾ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದ್ದಾರೆ. ತಂದೆ-ಮಗಳ ಬಾಂಧವ್ಯದ ಈ ಸಿನಿಮಾ ಕೂಡ ಇದೇ ವರ್ಷ ರಿಲೀಸ್ ಆಗುತ್ತಿದೆ ಎಂದು ಸ್ಯಾಂಡಲ್‌ವುಡ್‌ನಲ್ಲಿ ಟಾಕ್ ಶುರುವಾಗಿದೆ.


Click it and Unblock the Notifications