ರಚಿತಾ ಮದುವೆ ಆಗ್ತಾರಾ? "ಇಮೋಷನ್‌ಗೆ ಮತ್ತು ರಿಲೇಷನ್‌ಶಿಪ್‌ಗೆ ಯಾರೂ ಮರ್ಯಾದೆ ಕೊಡ್ತಿಲ್ಲ" ಎಂದಿದ್ದೇಕೆ?

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ಚೀನ್ ರಚಿತಾ ರಾಮ್ ಸಿನಿಮಾ, ರಿಯಾಲಿಟಿ ಶೋ ಅಂತ ಬ್ಯುಸಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ದಶಕಗಳಿಗೂ ಹೆಚ್ಚು ಕಾಲ ನಾಯಕಿಯಾಗಿ ಮರೆದ ನಟಿಯರ ಪೈಕಿ ರಚಿತಾ ರಾಮ್ ಕೂಡ ಸೇರಿಕೊಳ್ಳುತ್ತಾರೆ. ಇವರಿಗೂ ಮುನ್ನ ರಕ್ಷಿತಾ, ರಮ್ಯಾ ಕನ್ನಡ ಚಿತ್ರರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲ ನಾಯಕಿಯಾಗಿ ಮೆರೆದಿದರು.

ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸುವುದಕ್ಕೆ ಶುರು ಮಾಡಿ ರಚಿತಾ ರಾಮ್‌ಗೆ 14 ವರ್ಷಗಳಾಗಿವೆ. ಈ ಮಧ್ಯೆ ಕನ್ನಡ, ತಮಿಳು, ತೆಲುಗು ಭಾಷೆಯ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು ಬಂದಿದ್ದಾರೆ. ಹೆಚ್ಚು ಕಡಿಮೆ ಈ ಒಂದೂವರೆ ವರ್ಷಗಳ ಇವರ ಸಿನಿ ಜರ್ನಿಯಲ್ಲಿ ರಚಿತಾ ರಾಮ್ ಸಾಕಷ್ಟು ಏಳೂ-ಬೀಳುಗಳನ್ನು ಕಂಡಿದ್ದಾರೆ. ಸೋಲು-ಗೆಲುವುಗಳ ರುಚಿಯನ್ನು ನೋಡಿದ್ದಾರೆ.

Rachita Ram About her Marriage

ಈ ಸಂದರ್ಭದಲ್ಲಿ ʼಕನ್ನಡಪ್ರಭʼ ಪತ್ರಿಕೆಯ ಪುರವಣಿಯ ಸಂಪಾದಕ ಜೋಗಿಯವರ ಸಂದರ್ಶನದಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ರಚಿತಾ ರಾಮ್‌ ಇನ್ನೂ ಯಾಕೆ ಮದುವೆ ಆಗಿಲ್ಲ? ಯಾವಾಗ ಆಗುತ್ತಾರೆ? ಮದುವೆ ಬಗ್ಗೆ ಅವರಿಗೆ ಇರುವ ಅಭಿಪ್ರಾಯವೇನು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಏನು ಹೇಳಿದ್ದಾರೆಂದು ನೋಡುವುದಾರೇ..

Also Read
ಅಬ್ಬಬ್ಬಾ ಜಾಕ್‌ಪಾಟ್; ಟಾಲಿವುಡ್‌ಗೆ ಡಿಂಪಲ್ ಕ್ವೀನ್ ರಚಿತಾರಾಮ್ ಮೆಗಾ ರೀ-ಎಂಟ್ರಿ
ಅಬ್ಬಬ್ಬಾ ಜಾಕ್‌ಪಾಟ್; ಟಾಲಿವುಡ್‌ಗೆ ಡಿಂಪಲ್ ಕ್ವೀನ್ ರಚಿತಾರಾಮ್ ಮೆಗಾ ರೀ-ಎಂಟ್ರಿ

ರಚಿತಾ ರಾಮ್ ಜರ್ನಿಗೆ 14 ವರ್ಷ

ರಚಿತಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 14 ವರ್ಷಗಳಾಗಿವೆ. ಸಾಕಷ್ಟು ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ ಸೂಪರ್‌ಸ್ಟಾರ್‌ಗಳೊಂದಿಗೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈ ಗ್ಯಾಪ್‌ನಲ್ಲಿ ಹಲವು ಭಾಷೆಗಳಿಗೆ ಆಫರ್ ಬಂದರೂ ಹೋಗಲಿಲ್ಲ. ಕನ್ನಡದ ಹುಡುಗಿ ಅದರಲ್ಲೂ ಬೆಂಗಳೂರು ಹುಡುಗಿಯಾಗಿ 10 ವರ್ಷ ಕನ್ನಡ ಚಿತ್ರರಂಗದಲ್ಲಿಯೇ ಇರಬೇಕು ಎಂದು ಪಣ ತೊಟ್ಟಿದ್ದರಂತೆ. ಆ ಮೇಲೆ ನಿಧಾನವಾಗಿ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದರು.

Rachita Ram About her Marriage

ಕನ್ನಡ ಚಿತ್ರರಂಗದಲ್ಲಿ ವೃತ್ತಿಪರತೆ ಇಲ್ಲ

ಇದೇ ಸಂದರ್ಶನದಲ್ಲಿ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿರುವ ವೃತ್ತಿಪರತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸ್ಯಾಂಡಲ್‌ವುಡ್ ಫಿಲ್ಮ್ ಮೇಕರ್ಸ್‌ನಲ್ಲಿ ಒಂದು ರೀತಿ ಈಗೋ ಇದೆ. ವರ್ಕ್ ಶಾಪ್ ಮಾಡಿದರೆ, ಅವರನ್ನು ಯಾಕೆ ಕರೀಯಬೇಕು ಅಂತ ಈಗೋ ಹೊರ ಹಾಕುತ್ತಾರೆ. ಇಲ್ಲಿ ಅಂತಹ ಅಭ್ಯಾಸವೇ ಇರುವುದಿಲ್ಲ. ಸುಮ್ಮನೆ ಸೂಟ್ ಆಗೋದಿಲ್ಲ ಅಂತ ಹೇಳಿ ಬಿಡ್ತಾರೆ. ಆದರೆ, ತಮಿಳಿನಲ್ಲಿ ವೆಟ್ರಿಮಾರನ್ ಸಿನಿಮಾ ಮಾಡೋ ಮೊದಲು ವರ್ಕ್‌ಶಾಪ್ ಮಾಡುತ್ತಾರೆ. ಹೀಗೆ ಮಾಡಿದರೇ ತಾನೇ ನಮ್ಮ ಪ್ರತಿಭೆ ಏನು ಅನ್ನೋದು ಗೊತ್ತಾಗೋದು ಎಂದು ರಚಿತಾ ರಾಮ್ ಹೇಳಿದ್ದಾರೆ.

ರಚಿತಾ ರಾಮ್ ಮದುವೆ ಯಾವಾಗ?

ಇದೇ ಸಂದರ್ಶನದಲ್ಲಿ ರಚಿತಾ ರಾಮ್ ಮದುವೆ ಬಗ್ಗೆನೂ ಪ್ರಶ್ನೆ ಮಾಡಲಾಗಿತ್ತು. ಕಳೆದ ವರ್ಷ ರಚಿತಾ ರಾಮ್ ಮದುವೆ ಬಗ್ಗೆ ಸುಳಿವನ್ನು ನೀಡಿದ್ದರು. ಆದರೆ, ಈ ವರ್ಷ ಇದ್ದಕ್ಕಿದ್ದ ಹಾಗೇ ಸೈಲೆಂಟ್ ಆಗಿದ್ದಾರೆ. ಈ ಸಂದರ್ಶನದಲ್ಲಿ ಮದುವೆ ಬಗ್ಗೆ ನಿರಾಸಕ್ತಿಯನ್ನು ಹೊರ ಹಾಕಿದ್ದಾರೆ. 2025ರ ತನಕ ಮದುವೆ ಬಗ್ಗೆ ಬಹಳ ಆಸೆಯಿತ್ತಂತೆ. ಅಮ್ಮ-ಅಪ್ಪನಿಗೂ ಮುಂದಿನ ವರ್ಷ ಮದುವೆ ಮಾಡಬೇಕು ಅಂತ ಹೇಳುತ್ತಿದ್ದರಂತೆ. ಆದರೆ, ಯಾಕೋ ಇತ್ತೀಚೆಗೆ ಇಮೋಷನ್‌ಗೆ ಮತ್ತು ರಿಲೇಷನ್‌ಶಿಪ್‌ಗೆ ಯಾರೂ ಮರ್ಯಾದೆ ಕೊಡ್ತಾ ಇಲ್ಲ ಅಂತ ಅವರಿಗೆ ಅನ್ನಿಸುವುದಕ್ಕೆ ಶುರುವಾಗಿದೆಯಂತೆ.

ಇವತ್ತಿನ ಖುಷಿ ಇವತ್ತಿಗೆ

ರಚಿತಾ ರಾಮ್ ಮದುವೆ ಆಗುತ್ತಾರೋ ಇಲ್ವೋ? ಅನ್ನೋ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಿದ್ದಾರೆ. ಇಂದಿನ ಖುಷಿ, ಇಂದಿಗೆ ಮಾತ್ರ ಅಂತ ಹೇಳಿದ್ದಾರೆ. ಈಗ ಮಾತು ಮಾತಿಗೂ ಡಿವೋರ್ಸ್ ಅಂತ ಮಾತಾಡುತ್ತಾರೆ. ಆ ಚಂದಕ್ಕೆ ಯಾಕೆ ಸಮಯ ವ್ಯರ್ಥ ಮಾಡಬೇಕು ಎಂದು ರಚಿತಾ ರಾಮ್ ಹೇಳಿದ್ದಾರೆ.

English summary
People didn't respecting emotions and relationship says Rachita Ram. While asking on her marriage in an interview.
Read more about: rachita ram interview marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X