ಬುಲೆಟ್ ಪ್ರಕಾಶ್‌ಗೆ 'ಹ್ಯಾಪಿ ಜರ್ನಿ ಗೆಳೆಯ' ಎಂದಿದ್ದ ಮೈಕಲ್ ಮಧು ಗೆಳೆಯನನ್ನು ಹಿಂಬಾಲಿಸಿದರು
ಎರಡು ದಶಕಗಳ ಹಿಂದಿನ ಸಿನಿಮಾಗಳನ್ನು ನೋಡುವವರಿಗೆ, ಅದರಲ್ಲಿಯೂ ಕಾಶೀನಾಥ್ ಅವರ ಸಿನಿಮಾಗಳನ್ನು ನೋಡಿದವರಿಗೆ ಮೈಕಲ್ ಮಧು ಖಂಡಿತಾ ಪರಿಚಿತರು. ಸಣ್ಣಪುಟ್ಟ ಹಾಸ್ಯ ಪಾತ್ರಗಳಲ್ಲಿ ಕಾಣಿಸಿದರೂ ಮೈಕಲ್ ಮಧು ಅವರ ಹಾಸ್ಯ ನೆನಪಲ್ಲಿ ಉಳಿಯುತ್ತಿತ್ತು.
Recommended Video
ಮೈಕಲ್ ಮಧು ಅವರು ಹೆಚ್ಚಾಗಿ ನಟಿಸಿದ್ದು ಭಿಕ್ಷುಕನ ಪಾತ್ರಗಳಲ್ಲಿ. ಅವರು ಅತ್ಯುತ್ತಮ ಡ್ಯಾನ್ಸರ್. ನೃತ್ಯಪಟುವಾಗಿಯೇ ಬೆಳೆಯಬೇಕು ಎಂದು ಕನಸು ಕಂಡಿದ್ದವರು. ಆದರೆ ಅವರಿಗೆ ಅದು ಸಾಧ್ಯವಾಗಲಿಲ್ಲ ಎಂದು ಬಲ್ಲವರು ಹೇಳುತ್ತಾರೆ. 51 ಸಾಯುವ ವಯಸ್ಸಲ್ಲ. ಮಧು ಅವರ ಸಾವು ಚಿತ್ರರಂಗಕ್ಕೆ ಆಘಾತ ನೀಡಿದೆ. ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರನ್ನು ಕಳೆದುಕೊಂಡ ದುಃಖ ಮರೆಯಾಗುವ ಮೊದಲೇ ಮೈಕಲ್ ಮಧು ಕೂಡ ವಿದಾಯ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಅದರ ಕೊರಗು ಅವರಿಗೆ ಇತ್ತು. ಅವರನ್ನು ಕಳೆದುಕೊಂಡ ಸಂದರ್ಭದಲ್ಲಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಹ್ಯಾಪಿ ಜರ್ನಿ ಗೆಳೆಯ ಎಂದಿದ್ದರು
ಹಾಸ್ಯ ನಟ ಬುಲೆಟ್ ಪ್ರಕಾಶ್ ಏ. 6ರಂದು ಮೃತಪಟ್ಟಿದ್ದರು. ಆಗ ನಟ ಮೈಕಲ್ ಮಧು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನೋವು ಹಂಚಿಕೊಂಡಿದ್ದರು. ಗಂಧದ ಗುಡಿಯಲ್ಲಿ ನಗುವಿನ ಸುರಿಮಳೆ ಸುರಿಸಿದ್ದ ಜಗತ್ತಿನ ಅತ್ಯುತ್ತಮ ಹಾಸ್ಯ ನಟರಲ್ಲಿ ಒಬ್ಬರಾದ ನನ್ನ ಆತ್ಮೀಯ ಸ್ನೇಹಿತ ಬುಲೆಟ್ ಪ್ರಕಾಶ್, ಸ್ವರ್ಗದಲ್ಲಿ ಈಗಾಗಲೇ ನೆಲೆಯೂರಿರುವ ಡಾ. ರಾಜ್ ಅಣ್ಣ, ನರಸಿಂಹ ರಾಜು ಸರ್, ಬಾಲಣ್ಣ ಸರ್, ದಿನೇಶ್ ಸರ್, ಮುಸುರಿ ಕೃಷ್ಣಮೂರ್ತಿ ಸರ್ ಹಾಗೂ ಸ್ಯಾಂಡಲ್ ವುಡ್‌ನ ಎಲ್ಲ ತಾರೆಯರನ್ನು ಭೇಟಿ ಮಾಡಲು ಸ್ವರ್ಗಕ್ಕೆ ಪಯಣ. ಹ್ಯಾಪಿ ಜರ್ನಿ ಗೆಳೆಯ ಎಂದು ಮೈಕಲ್ ಮಧು ಬರೆದುಕೊಂಡಿದ್ದರು. ಆದರೆ ಒಂದು ತಿಂಗಳ ಬಳಿಕ ಗೆಳೆಯನನ್ನು ಅವರು ಹಿಂಬಾಲಿಸಿದ್ದಾರೆ.

ಅಟ್ಲಾಂಟ ನಾಗೇಂದ್ರ ನೆನಪು
ನಾನು ಮೈಕಲ್ ಮಧು ಅವರನ್ನು ನೋಡಿದ್ದು 1995ರಲ್ಲಿ. ಆಗ ನಾನು ಎಂಜಿನಿಯರಿಂಗ್ ಮಾಡುತ್ತಿದ್ದೆ. ಅವರೊಂದಿಗೆ ಕೆಲವು ಸಮಯ ಮಾತನಾಡಿದ್ದೆ. ಚೆನ್ನಾಗಿ ಮಾತನಾಡಿದ್ದರು. 2003ರಲ್ಲಿ ಜೋಕ್ ಫಾಲ್ಸ್ ಸಿನಿಮಾ ಮಾಡುವಾಗ ಅವರಿಗೆ ಪಾತ್ರ ನೀಡಲು ಬಯಸಿದ್ದೆ. ಅವರು ಒಪ್ಪಿಕೊಂಡಿದ್ದರು. ನಟರು ಎಂದೆಂದಿಗೂ ತೆರೆಯ ಮೇಲೆ ಅಜರಾಮವಾಗಿ ಇರುತ್ತಾರೆ ಎಂದು ನಿರ್ಮಾಪಕ ಅಟ್ಲಾಂಟ ನಾಗೇಂದ್ರ ಹೇಳಿದ್ದಾರೆ.

ಪ್ರವೀಣ್ ಜಾಕೋಬ್
ನಾನು ಭೇಟಿ ಮಾಡಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು, ಅದ್ಭುತ ನಟ, ಸಂಗೀತ ಪ್ರಿಯ, ನೃತ್ಯಪಟು, ನೆರೆಹೊರೆಯ, ಸ್ನೇಹಿತ, ಸಹೋದರ ಮತ್ತು ಕೆಲವೊಮ್ಮೆ ಸಲಹೆಗಾರ ಕೂಡ. ಬಾಸ್ ನೀವು ನಮ್ಮ ಕಣ್ಣಿನಿಂದ ಮರೆಯಾಗಿರಬಹುದು, ಆದರೆ ನಮ್ಮ ಹೃದಯದಲ್ಲಿ ಎಂದೆಂದಿಗೂ ಇರುತ್ತೀರಿ ಎಂದು ಪ್ರವೀಣ್ ಜಾಕೋಬ್ ಹೇಳಿದ್ದಾರೆ.

ಜನರನ್ನು ರಂಜಿಸಿದವರು
ತನ್ನ ವಿಶಿಷ್ಟ ಹಾಸ್ಯ ಪಾತ್ರಗಳ ಮೂಲಕ ಕನ್ನಡ ಹಾಸ್ಯ ರಸಿಕರನ್ನು ರಂಜಿಸಿದ, ತನ್ನ ವೃತ್ತಿ ಜೀವನದಲ್ಲಿ ಯಾವ ಕಲಾವಿದನು ಹೆಚ್ಚಾಗಿ ಮಾಡಿರದ ಭಿಕ್ಷುಕ ಪಾತ್ರಗಳಿಂದಲೇ ಗುರುತಿಸಿಕೊಂಡು, ವೃತ್ತಿ ಧರ್ಮಕ್ಕೆ ಗೌರವ ನೀಡುತ್ತಿದ್ದ ಮೈಕಲ್ ಮಧು ಅವರು ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸೋಣ- ಪ್ರಕಾಶ್ ಸಿ ಬಾವಿ

ಉತ್ತಮ ಕಲಾವಿದ
ಆ ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ ಮೈಕಲ್ ಮಧು ಸರ್. ಒಬ್ಬ ಉತ್ತಮ ಕಲಾವಿದರನ್ನ ನಮ್ಮ ಕನ್ನಡ ಚಿತ್ರರಂಗ ಹಾಗೂ ಕನ್ನಡ ಪ್ರೇಕ್ಷಕರು ಕಳೆದುಕೊಂಡಿದ್ದಾರೆ. ನೀವು ಮಾಡಿದ ಎಲ್ಲಾ ಹಾಸ್ಯ ಚಿತ್ರಗಳನ್ನು ನಾನು ನೋಡಿದ್ದೇನೆ- ಸ್ಫೂರ್ತಿ ಎಚ್‌ಆರ್‌ಸಿ

ಮಹಾಪ್ರಭುಗಳೇ ನೀವೇನು ಇಲ್ಲಿ'
"ಮಹಾಪ್ರಭುಗಳೇ ನೀವೇನು ಇಲ್ಲಿ'' ಈ ಡೈಲಾಗ್ ಮರೆಯಲು ಸಾಧ್ಯವಿಲ್ಲ... ಕನ್ನಡದ ಖ್ಯಾತ ಕಲಾವಿದ, ವಿಭಿನ್ನ ಶೈಲಿಯ ಹೇರ್ ಸ್ಟೈಲ್ ಹಾಗೂ ಮ್ಯಾನರಿಸಂ ನಿಂದಲೇ ಗುರುತಿಸಿಕೊಂಡಿದ್ದ ಕನ್ನಡದ ಹಿರಿಯ ಹಾಸ್ಯ ನಟ ಮೈಕಲ್ ಮಧು ಇನ್ನಿಲ್ಲ- ವಿಜಯಕುಮಾರ್ ನರಹರಿ


Click it and Unblock the Notifications











