Pepe-Laughing Buddha Box Office:'ಪೆಪೆ', 'ಲಾಫಿಂಗ್ ಬುದ್ಧ' ವೀಕೆಂಡ್‌ನಲ್ಲಿ ಹೇಗಿದೆ ಕಲೆಕ್ಷನ್?

ಆಗಸ್ಟ್ ತಿಂಗಳು ಕನ್ನಡ ಚಿತ್ರರಂಗಕ್ಕೆ ಚಿಕ್ಕದೊಂದು ಚೇತರಿಕೆ ತಂದು ಕೊಟ್ಟಿದೆ. ದುನಿಯಾ ವಿಜಯ್ ಸಿನಿಮಾ 'ಭೀಮ' ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಈ ಸಿನಿಮಾ ತೆರೆಕಂಡು ಒಂದು ವಾರದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ 'ಕೃಷ್ಣಂ ಪ್ರಣಯ ಸಖಿ' ಕೂಡ ಹಿಟ್ ಲಿಸ್ಟ್ ಸೇರಿದೆ. ಯಶಸ್ಸಿನ ಬೆನ್ನಲ್ಲೇ ತೆರೆಕಂಡ ಎರಡು ಸಿನಿಮಾಗಳು 'ಪೆಪೆ' ಮತ್ತು 'ಲಾಫಿಂಗ್ ಬುದ್ಧ'.

ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಹಾಗೂ ಪ್ರಮೋದ್ ಶೆಟ್ಟಿಯ 'ಲಾಫಿಂಗ್ ಬುದ್ಧ' ಬೇರೆ ಬೇರೆ ಕಾರಣಗಳಿಗೆ ಗಮನ ಸೆಳೆದಿದ್ದವು. ವಿನಯ್ ಇದೇ ಮೊದಲ ಬಾರಿಗೆ ರಗಡ್ ಕಲ್ಟ್ ಲುಕ್‌ನಲ್ಲಿ ನಟಿಸಿದ್ದಾರೆ. ಇಲ್ಲಿವೆರೆಗೂ ಲವರ್ ಬಾಯ್‌ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದ ವಿನಯ್ ವೃತ್ತಿ ಬದುಕಿಗೆ ಮಾಸ್ ಕಿಕ್ ಕೊಟ್ಟ ಸಿನಿಮಾವಿದು.

Pepe and Laughing Buddha movie Box Office 3 Days collection report

ಇನ್ನೊಂದು ಕಡೆ ಹೆಚ್ಚಾಗಿ ಪೋಷಕ ಪಾತ್ರಗಳಲ್ಲೇ ನಟಿಸುತ್ತಿದ್ದ ಪ್ರಮೋದ್ ಶೆಟ್ಟಿ 'ಲಾಫಿಂಗ್ ಬುದ್ಧ'ನಾಗಿ ಜನರನ್ನು ನಗಿಸುವುದಕ್ಕೆ ಮುಂದಾಗಿದ್ದರು. ಪೊಲೀಸರ ಕಥೆ-ವ್ಯಥೆಯನ್ನು ಇಟ್ಟುಕೊಂಡು, ಅದಕ್ಕೆ ಹಾಸ್ಯ ಹಾಗೂ ಥ್ರಿಲ್ಲರ್ ಟಚ್ ಕೊಟ್ಟು ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಕಳೆದ ವಾರ ತೆರೆಕಂಡಿದ್ದ ಈ ಎರಡೂ ಸಿನಿಮಾಗಳು ವೀಕೆಂಡ್‌ನಲ್ಲಿ ಹೇಗೆ ಕಲೆಕ್ಷನ್ ಮಾಡಿದೆ? ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಗೆಲ್ತಾ? ತಿಳಿಯಲು ಮುಂದೆ ಓದಿ.

3ನೇ ದಿನ 'ಪೆಪೆ' ಕಥೆ ಏನಾಯ್ತು?

ವಿನಯ್ ರಾಜ್‌ಕುಮಾರ್ ಸಿನಿಮಾ 'ಪೆಪೆ'ಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಮಾಸ್ ಸಿನಿಮಾ ಲವರ್‌ಗಳು 'ಪೆಪೆ'ಯನ್ನು ಮೆಚ್ಚಿಕೊಂಡಿದ್ದರು. ವಿನಯ್ ರಾಜ್‌ಕುಮಾರ್ ಅವರನ್ನು ಇಂತಹ ರಗಡ್ ಅವತಾರದಲ್ಲಿ ನೋಡಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದರು. ಮೊದಲ ದಿನ 20 ರಿಂದ 25 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಅದೇ ಮೂರನೇ ದಿನ ಅಂದರೆ, ನಿನ್ನೆ ಭಾನುವಾರ (ಸೆಪ್ಟೆಂಬರ್ 1) 30 ರಿಂದ 35 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಅಂತ ವಿತರಕರ ವಲಯದಿಂದ ಬಂದಿರುವ ಲೆಕ್ಕ. ಆದರೆ, sacnilk ಲೆಕ್ಕ ಬೇರೆನೇ ಇದೆ.

Pepe and Laughing Buddha movie Box Office 3 Days collection report

ವೀಕೆಂಡ್‌ನಲ್ಲಿ ಮಿಂಚಿದ್ನಾ 'ಪೆಪೆ'?

ವಿನಯ್ ರಾಜ್‌ಕುಮಾರ್ ಸಿನಿಮಾ 'ಪೆಪೆ' ವೀಕೆಂಡ್‌ನಲ್ಲಿ ಮಸ್ತ್ ಕಲೆಕ್ಷನ್ ಮಾಡಬಹುದು ಅನ್ನೋ ನಿರೀಕ್ಷೆಯಿತ್ತು. ಆದರೆ, 'ಪೆಪೆ' ವೀಕೆಂಡ್‌ನಲ್ಲೂ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಏನೂ ಸಿಕ್ಕಿಲ್ಲ. ಮೊದಲನೇ ದಿನ 20 ರಿಂದ 25 ಲಕ್ಷ ರೂಪಾಯಿ, ಎರಡನೇ ದಿನ ಕೂಡ 20 ರಿಂದ 25 ಲಕ್ಷ ರೂಪಾಯಿ ಆಸು ಪಾಸಿನಲ್ಲೇ ಕಲೆಕ್ಷನ್ ಆಗಿತ್ತು. ಹಾಗೇ ಮೂರನೇ ದಿನ 30 ರಿಂದ 35 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದ ಎನ್ನಲಾಗಿದೆ. ಒಟ್ಟಿ 70 ರಿಂದ 75 ಲಕ್ಷ ರೂಪಾಯಿ ಕಲೆಕ್ಷನ್ ಆಗಿರಬಹುದೆಂಬುದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ.

3ನೇ ದಿನ 'ಲಾಫಿಂಗ್ ಬುದ್ದ' ಗೆದ್ದನೇ?

ತೀರಾ ದೊಡ್ಡ ಸ್ಟಾರ್‌ಕಾಸ್ಟ್ ಇಲ್ಲದ ಸಿನಿಮಾ ಒಮ್ಮೆಗೆ ಬಾಕ್ಸಾಫೀಸ್‌ನಲ್ಲಿ ಕಚ್ಚಿಕೊಳ್ಳಲ್ಲ. ನಿಧಾನವಾಗಿ ಮೌತ್‌ ಪಬ್ಲಿಸಿಟಿ ಆದರೆ, ಸಿನಿಮಾ ನೋಡುವುದಕ್ಕೆ ಜನರು ಥಿಯೇಟರ್‌ಗೆ ಬರುತ್ತಾರೆ. ಮೂರನೇ ದಿನ 'ಲಾಫಿಂಗ್ ಬುದ್ಧ' ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಿಲ್ಲ. ಫ್ಯಾಮಿಲಿ ಸಿನಿಮಾ ಆಗಿದ್ದರಿಂದ ಭಾನುವಾರ ಕಳೆದೆರಡು ದಿನಗಳಿಂದ ಹೆಚ್ಚು ಕಲೆಕ್ಷನ್ ಆಗಿದೆ. ಭಾನುವಾರ ಈ ಸಿನಿಮಾ 30 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರು ಹೇಳಿತ್ತಿದ್ದಾರೆ.

ಒಟ್ಟು 3 ದಿನಗಳ ಕಲೆಕ್ಷನ್ ಏನು?

'ಲಾಫಿಂಗ್ ಬುದ್ಧ' ಒಟ್ಟು ಮೂರು ದಿನಗಳಲ್ಲಿ ಬರೋಬ್ಬರಿ 50 ರಂದ 60 ಲಕ್ಷದವರೆಗೂ ಕಲೆಕ್ಷನ್ ಆಗಿರಬಹುದೆಂದು ಅಂದಾಜು ಹಾಕಲಾಗಿದೆ. ಇನ್ನು ಈ ವಾರದ ಹೊತ್ತಿಗೆ 'ಲಾಫಿಂಗ್ ಬುದ್ಧ' 1 ಕೋಟಿ ದಾಟಬಹುದೆಂದು ನಿರೀಕ್ಷಿಸಲಾಗಿದೆ.

ಸೂಚನೆ: ಇದು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ಬಾಕ್ಸಾಫೀಸ್ ಮಾಹಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಎರಡೂ ಚಿತ್ರತಂಡಗಳು ಮಾಹಿತಿಯನ್ನು ನೀಡಬೇಕಿದೆ.

More from Filmibeat

English summary
Pepe and Laughing Buddha movie Box Office 3 Days collection report:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X