Pepe-Laughing Buddha Box Office:'ಪೆಪೆ'-'ಲಾಫಿಂಗ್ ಬುದ್ಧ' ಮೊದಲನೇ ದಿನ ಗೆದ್ದೋರು ಯಾರು?

ವಿನಯ್ ರಾಜ್‌ಕುಮಾರ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ 'ಪೆಪೆ' ಸಿನಿಮಾ ನಿನ್ನೆ (ಆಗಸ್ಟ್ 30) ರಿಲೀಸ್ ಆಗಿದೆ. ಇದೇ ದಿನ ಪ್ರಮೋದ್ ಶೆಟ್ಟಿ ನಟನೆಯ 'ಲಾಫಿಂಗ್ ಬುದ್ಧ' ಸಿನಿಮಾ ಕೂಡ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ನಿರ್ಮಾಣದ ಈ ಸಿನಿಮಾಗೂ ಕೂಡ ಭರ್ಜರಿ ಪ್ರಚಾರ ಮಾಡಲಾಗಿತ್ತು. ಈ ಎರಡೂ ಸಿನಿಮಾಗಳು ಸಾಕಷ್ಟು ಹೈಪ್‌ನೊಂದಿಗೆ ರಿಲೀಸ್ ಆಗಿದ್ದವು.

ವಿನಯ್ ರಾಜ್‌ಕುಮಾರ್ ಸಿನಿಮಾ 'ಪೆಪೆ' ಮಾಸ್ ಪ್ರಿಯರನ್ನು ಸೆಳೆದಿತ್ತು. ಇದೇ ಮೊದಲ ಬಾರಿಗೆ ಅಣ್ಣಾವ್ರ ಮೊಮ್ಮಗ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ರಗಡ್ ಲುಕ್‌ನಲ್ಲಿ ಗಂಭೀರ ವಿಷಯವನ್ನು ಇಟ್ಟುಕೊಂಡು ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ. ಹೀಗಾಗಿ ಫಸ್ಟ್ ಡೇ 'ಪೆಪೆ' ಕಲೆಕ್ಷನ್ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ ಕಣ್ಣಿಟ್ಟಿದ್ದರು.

Pepe and Laughing Buddha movie Box Office day 1 collection report

ಇನ್ನೊಂದು ಕಡೆ ರಿಷಬ್ ಶೆಟ್ಟಿ ನಿರ್ಮಿಸಿರುವ 'ಲಾಫಿಂಗ್ ಬುದ್ಧ' ಪೊಲೀಸ್ ಕಾನ್‌ಸ್ಟೆಬಲ್‌ಗಳ ಕಥೆ ವ್ಯಥೆಯನ್ನು ಹೊತ್ತು ಬಂದಿದೆ. ಕಾಮಿಡಿ ಜೊತೆಗೆ ಸಸ್ಪೆನ್ಸ್ ಎಲಿಮೆಂಟ್‌ಗಳನ್ನು ಇಟ್ಟುಕೊಂಡಿರುವ ಈ ಸಿನಿಮಾ ಕಲೆಕ್ಷನ್ ಮೇಲೂ ಕುತೂಹಲವಿದೆ. ಹಾಗಿದ್ದರೆ, ಮೊದಲನೇ ದಿನ ಈ ಎರಡು ಸಿನಿಮಾಗಳ ಕಲೆಕ್ಷನ್ ಹೇಗಿದೆ? ತಿಳಿಯಲು ಮುಂದೆ ಓದಿ..

'ಪೆಪೆ' ಮೊದಲನೇ ದಿನ ಕಲೆಕ್ಷನ್ ಹೇಗಿದೆ?

ವಿನಯ್ ರಾಜ್‌ಕುಮಾರ್ ಕಲ್ಟ್ ಲುಕ್ ದೊಡ್ಮನೆ ಅಭಿಮಾನಿಗಳಿಗೆ ಇಷ್ಟ ಆಗಿತ್ತು. ಇಲ್ಲಿವರೆಗೂ ಕೇವಲ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ವಿನಯ್, 'ಪೆಪೆ' ಮೂಲಕ ಮಾಸ್ ಹೀರೋ ಆಗಿದ್ದಾರೆ. ಪೋಸ್ಟರ್, ಟೀಸರ್ ಹಾಗೂ ಟ್ರೈಲರ್ ಮೂಲಕ ಗಮನ ಸೆಳೆದಿದ್ದ ಸಿನಿಮಾಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಫಸ್ಟ್ ಡೇ ಒಂದೊಳ್ಳೆ ಕೆಲಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಮೊದಲ ದಿನ 20 ರಿಂದ 25 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

Pepe and Laughing Buddha movie Box Office day 1 collection report

ವೀಕೆಂಡ್ ಮೇಲೆ ಕಣ್ಣು

'ಪೆಪೆ' ವೀಕೆಂಡ್‌ನಲ್ಲಿಒಳ್ಳೆಯ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ. ಇಂದು (ಶನಿವಾರ) ಮತ್ತು ನಾಳೆ (ಭಾನುವಾರ) ಈ ಎರಡು ದಿನ 'ಪೆಪೆ' ಬಾಕ್ಸಾಫೀಸ್‌ನಲ್ಲಿ ಒಂದೊಳ್ಳೆ ಗಳಿಕೆ ಮಾಡಬಹುದೆಂದು ಲೆಕ್ಕ ಹಾಕಲಾಗುತ್ತೆ. ಈ ಎರಡು ದಿನಗಳಲ್ಲಿ ವಿನಯ್ ರಾಜ್‌ಕುಮಾರ್ ಸಿನಿಮಾ ಕೋಟಿ ಲೆಕ್ಕದಲ್ಲಿ ಗಳಿಸಿದರೆ, ಹಿಟ್‌ ಲಿಸ್ಟ್ ಸೇರಬಹುದು ಎಂಬುದು ವಿತರಕರು ಲೆಕ್ಕಾಚಾರ.

'ಲಾಫಿಂಗ್ ಬುದ್ಧ' ಕಲೆಕ್ಷನ್ ಎಷ್ಟು?

ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಕಾಮಿಡಿ ಹಾಗೂ ಸಸ್ಪೆನ್ಸ್ ಸಿನಿಮಾ. ಈ ಎರಡೂ ಜಾನರ್‌ ಅನ್ನೂ ಒಟ್ಟಿಗೆ ಸೇರಿಸಿದ 'ಲಾಫಿಂಗ್ ಬುದ್ಧ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾಗೂ ಸಾಧಾರಾಣ ಒಪನಿಂಗ್ ಸಿಕ್ಕಿದೆ ಎನ್ನಲಾಗಿದೆ. ಮೊದಲನೇ ದಿನ ಈ ಸಿನಿಮಾ ಕೂಡ 20 ರಿಂದ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯದಲ್ಲಿ ಚರ್ಚೆ ಆಗ್ತಿದೆ. ಅಷ್ಟಕ್ಕೂ ಈ ಎರಡೂ ಚಿತ್ರತಂಡ ಅಧಿಕೃತವಾಗಿ ಬಾಕ್ಸಾಫೀಸ್ ಗಳಿಕೆಯನ್ನು ರಿವೀಲ್ ಇಲ್ಲ.

ವೀಕೆಂಡ್‌ನಲ್ಲಿ ಗಳಿಕೆ ಹೆಚ್ಚಾಗಬಹುದು?

'ಲಾಫಿಂಗ್ ಬುದ್ಧ' ಸಿನಿಮಾ ಮೊದಲನೇ ದಿನ ಹೇಳಿಕೊಳ್ಳುವಂತಹ ಕಲೆಕ್ಷನ್ ಆಗಿಲ್ಲ. ಆದರೆ, ವೀಕೆಂಡ್‌ನಲ್ಲಿ ಫ್ಯಾಮಿಲಿ ಆಡಿಯನ್ಸ್ ಅನ್ನು ಸೆಳೆಯಬಹುದೆಂದು ನಿರೀಕ್ಷೆ ಮಾಡಲಾಗಿದೆ. ಇಂದು (ಶನಿವಾರ) ಮತ್ತು ನಾಳೆ (ಭಾನುವಾರ) ವೀಕೆಂಡ್‌ನಲ್ಲಿ ಈ ಸಿನಿಮಾ ನೋಡುವುದಕ್ಕೆ ಜನ ಬಂದರೆ, ಮತ್ತೊಂದು ಸ್ಮಾಲ್ ಬಜೆಟ್ ಸಿನಿಮಾ ಹಿಟ್ ಲಿಸ್ಟ್ ಸೇರಿದಂತೆ ಆಗುತ್ತೆ.

ಸೂಚನೆ: ಈ ಬಾಕ್ಸಾಫೀಸ್‌ ವರದಿ, ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದೆ. ಚಿತ್ರತಂಡಗಳು ಇನ್ನೂ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.

More from Filmibeat

English summary
Pepe and Laughing Buddha movie Box Office day 1 collection report:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X