»   » ತುಳು ಚಿತ್ರ ರಂಗದಲ್ಲಿ ದಾಖಲೆ ಬರೆದ 'ಪಿಲಿಬೈಲ್ ಯಮುನಕ್ಕ'

ತುಳು ಚಿತ್ರ ರಂಗದಲ್ಲಿ ದಾಖಲೆ ಬರೆದ 'ಪಿಲಿಬೈಲ್ ಯಮುನಕ್ಕ'

Posted By:
Subscribe to Filmibeat Kannada

ಇದೇ ಡಿಸೆಂಬರ್ 9 ರಂದು ಬಿಡುಗಡೆಗೊಂಡ ಕೋಸ್ಟಲ್‌ ವುಡ್ ಚಿತ್ರ 'ಪಿಲಿಬೈಲ್ ಯಮುನಕ್ಕ' ತುಳು ಚಿತ್ರರಂಗದಲ್ಲಿ ಈಗೊಂದು ಹೊಸ ದಾಖಲೆ ಬರೆದಿದೆ. ಕೇವಲ ಎರಡೇ ವಾರದಲ್ಲಿ ಅಂದರೆ 14 ದಿನಗಳಲ್ಲಿ 1 ಕೋಟಿ 7 ಲಕ್ಷ ಗಳಿಕೆ ಮಾಡಿ ಗಲ್ಲಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸಿದೆ.('ಪಿಲಿಬೈಲ್ ಯಮುನಕ್ಕ' ತುಳು ಚಿತ್ರದ ದೃಶ್ಯ ಲೀಕ್)

ತುಳು ಚಿತ್ರರಂಗದಲ್ಲಿ ಇದೇ ಮೊದಲು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ತುಂಬಿಸಿಕೊಂಡ ಚಿತ್ರ ಎಂಬ ಹೆಗ್ಗಳಿಕೆಗೆ 'ಪಿಲಿಬೈಲ್ ಯಮುನಕ್ಕ' ಮಾತ್ರವಾಗಿದೆ. ಈವರೆಗೆ ತುಳುವಿನಲ್ಲಿ ಬಿಡುಗಡೆಗೊಂಡ ಯಾವ ಚಿತ್ರವೂ ಇಷ್ಟು ಮೊತ್ತದ ಗಳಿಕೆಯ ದಾಖಲೆ ಮಾಡಿಲ್ಲ ಎಂದು ಸ್ವಂತಃ ಚಿತ್ರದ ನಿರ್ಮಾಪಕ ರೋಹನ್ ಶೆಟ್ಟಿ ಹೇಳಿದ್ದಾರೆ.

 

Pilibail Yamunakka Filled New Record in Tulu Film Industry

'ಪಿಲಿಬೈಲ್ ಯಮುನಕ್ಕ' ಚಿತ್ರ ಸದ್ಯ 12 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವೀಕೆಂಡ್ ಶೋಗಳಿಗೆ ಹೆಚ್ಚಿನ ಮಟ್ಟದಲ್ಲಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆಗುತ್ತಿರುವುದು ಚಿತ್ರ ತಂಡಕ್ಕೆ ಖುಷಿ ನೀಡಿದೆ. ಆದರೆ ಚಿತ್ರ ಬಿಡಗಡೆಗೂ ಮುನ್ನ ವೀಡಿಯೊ ತುಣುಕುಗಳು ಲೀಕ್‌ ಆಗಿದ್ದವು. ಆದರೂ ಸಹ ಚಿತ್ರ ಯಶಸ್ಸಿನ ಹಾದಿಯಿಂದ ಸರಿಯದೇ ಮುನ್ನುಗುತ್ತಿದೆ.

ಕೆ.ಸೂರಜ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನ ರೋಹನ್ ಶೆಟ್ಟಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಪುರವ್ ಅಂಬರ್, ಸೋನಾಲಿ ಮೊಂತೇರಿಯೋ , ನವೀನ್ ಡಿ. ಪಡೀಲ್ ನಟಿಸಿದ್ದಾರೆ.

Pilibail Yamunakka Filled New Record in Tulu Film Industry

'ಪಿಲಿಬೈಲ್ ಯಮುನಕ್ಕ' ಚಿತ್ರ ತಂಡದಿಂದ 'ಎಕ್ಕಸಕ -2' ಚಿತ್ರ
'ಪಿಲಿಬೈಲ್ ಯಮುನಕ್ಕ' ಯಶಸ್ವಿಯ ಖುಷಿಯಲ್ಲಿರುವ ಚಿತ್ರ ತಂಡ 'ಎಕ್ಕಸಕ-2' ಎಂಬ ಚಿತ್ರವನ್ನ ನಿರ್ಮಿಸಲಿದೆ. ಈ ಚಿತ್ರವನ್ನ ಕೆ.ಸೂರಜ್ ಶೆಟ್ಟಿ ನಿರ್ದೇಶಿಸಲಿದ್ದು, ಕಿಶೋರ್ ಡಿ. ಶೆಟ್ಟಿ ಹಾಗೂ ರೋಹನ್ ಶೆಟ್ಟಿ ಚಿತ್ರ ನಿರ್ಮಿಸಲಿದ್ದಾರೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಯಾರು ಇದ್ದಾರೆ ಎಂಬುದನ್ನ ಜನವರಿಯಲ್ಲಿ ತಿಳಿಸಲಾಗುವುದು ಎಂದು ಚಿತ್ರ ತಂಡ ' ಫಿಲ್ಮಿಬೀಟ್' ಗೆ ಮಾಹಿತಿ ನೀಡಿದೆ.

English summary
December 9th Relesed 'Pilibail Yamunakka' Film did record break in Tulu cinema Industry. 'pilibail yamunakka' filled box office Rs.1.7 crore in just two Weeks.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada