ಧ್ರುವ ಸರ್ಜಾ ಅಭಿಮಾನಿಗಳಿಗೆ 'ಪೊಗರು' ಚಿತ್ರದಿಂದ ಸಿಗಲಿದೆ ಮತ್ತೊಂದು ಗಿಫ್ಟ್
ಧ್ರುವ ಸರ್ಜಾ ಅಭಿನಯದ, ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರದ 'ಖರಾಬು' ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಹಾಡಿಗೆ 21 ಮಿಲಿಯನ್‌ಗೂ ಅಧಿಕ ವೀವ್ಸ್ ಸಿಕ್ಕಿದೆ. ಲಕ್ಷಾಂತರ ಲೈಕ್ಸ್ ಸಿಕ್ಕಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರದ ಹಾಡೊಂದಕ್ಕೆ ಯೂಟ್ಯೂಬ್‌ನಲ್ಲಿ ಸಿಕ್ಕ ಬಹುದೊಡ್ಡ ಹಿಟ್ ಇದು.
Recommended Video
ಇದು 'ಪೊಗರು' ಚಿತ್ರತಂಡಕ್ಕೆ ಸಂತಸ ಮೂಡಿಸಿದೆ. ಧ್ರುವ ಸರ್ಜಾ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಪ್ರೀತಿಸುವಂತೆ ಪೀಡಿಸುವ ದೃಶ್ಯಗಳಿವೆ. ಧ್ರುವ ಅವರಂತೆಯೇ ಉದ್ದನೆಯ ಕೂದಲು ಗಡ್ಡ ಬಿಟ್ಟ ಸಹ ಕಲಾವಿದರು ಹಾಡಿನಲ್ಲಿ ನರ್ತಿಸಿದ್ದಾರೆ. ಆನಂದ್ ಆಡಿಯೋ ಬಿಡುಗಡೆ ಮಾಡಿರುವ ಈ ಹಾಡು ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್‌ನಲ್ಲಿಯೂ ಈ ಹಾಡು ಹೆಚ್ಚು ಹರಿದಾಡುತ್ತಿದೆ. ಮುಂದೆ ಓದಿ...

ಲಾಕ್‌ಡೌನ್‌ನಲ್ಲಿ ಫ್ಯಾನ್ಸ್‌ಗೆ ಮತ್ತೊಂದು ಗಿಫ್ಟ್
ಚಂದನ್ ಶೆಟ್ಟಿ ಸಂಗೀತ ನೀಡಿರುವ ಈ ಹಾಡಿನ ಯಶಸ್ಸು, ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಮೂಡಿಸಿದೆ. ಹಾಗೆಯೇ ಈಗ ಕೊರೊನಾ ವೈರಸ್ ಭೀತಿ ಇನ್ನೂ ಇರುವುದರಿಂದ ಚಿತ್ರೀಕರಣ ಪೂರ್ಣಗೊಳಿಸಿ ಸಿನಿಮಾ ತೆರೆಗೆ ತರುವುದು ತಡವಾಗುತ್ತದೆ. ಹಾಗಾಗಿ ಅಭಿಮಾನಿಗಳ ಬಯಕೆ ತಣಿಸಲು ಚಿತ್ರತಂಡ ಮತ್ತೊಂದು ಉಪಾಯ ಮಾಡಿದೆ.

ಮೇಕಿಂಗ್ ವಿಡಿಯೋ
'ಖರಾಬು' ಹಾಡಿನ ವಿಚಿತ್ರ ಗೆಟಪ್ ಮತ್ತು ನೃತ್ಯಗಳು ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಕಾರಣದಿಂದ ಈ ಹಾಡಿನ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲು ನಂದ ಕಿಶೋರ್ ಬಯಸಿದ್ದಾರೆ. ಈಗ ನಿಯಮಗಳು ಸಡಿಲಿಕೆಯಾಗಿರುವುದರಿಂದ ಮೇಕಿಂಗ್ ವಿಡಿಯೋ ಸಿದ್ಧಪಡಿಸಿ ಬಳಿಕ ಉಳಿದ ಚಟುವಟಿಕೆಗಳನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇಂಟ್ರೊಡಕ್ಷನ್ ಸಾಂಗ್ ಬಾಕಿ
ಚಿತ್ರದಲ್ಲಿ ನಾಯಕನ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ನಿಗದಿಯಾದಂತೆ ನಡೆದಿದ್ದರೆ ಈ ವೇಳೆಗೆ 'ಪೊಗರು' ಚಿತ್ರಮಂದಿರದಲ್ಲಿ ಇರುತ್ತಿತ್ತು. ಹೈದರಾಬಾದ್‌ನಲ್ಲಿ ಹಾಡಿನ ಶೂಟಿಂಗ್ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು.

ಹಿನ್ನೆಲೆ ಸಂಗೀತ ಕಾರ್ಯ
ಸದ್ಯಕ್ಕೆ ಸಿನಿಮಾದ ಎರಡನೆಯ ಭಾಗದ ಹಿನ್ನೆಲೆ ಸಂಗೀತ ನೀಡುವ ಕಾರ್ಯ ನಡೆಯುತ್ತಿದೆ. ಚಿತ್ರದ ಹಾಡುಗಳಿಗೆ ಸಂಗೀತ ನೀಡಿರುವ ಚಂದನ್ ಶೆಟ್ಟಿ ಮತ್ತು ವಿ. ಹರಿಕೃಷ್ಣ ಹಿನ್ನೆಲೆ ಸಂಗೀತ ನೀಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ಮಯೂರಿ, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್ ಮುಂತಾದವರು ಚಿತ್ರದಲ್ಲಿದ್ದಾರೆ.


Click it and Unblock the Notifications











