'ಕನ್ನಡ ಗೊತ್ತಿಲ್ಲ.. ಸಿನಿಮಾದಲ್ಲಿ ನಟಿಸಿಲ್ಲ.. ಈಗ ಹೆಮ್ಮೆ ಅಂತಿರೋದ್ಯಾಕೆ? ಪೂಜಾ ಹೆಗ್ಡೆ ವಿರುದ್ಧ ನೆಟ್ಟಿಗರ ಕಮೆಂಟ್!

ಕಳೆದೊಂದು ವಾರದಿಂದ ಪೂಜಾ ಹೆಗ್ಡೆ ಸಿಕ್ಕಾಪಟ್ಟೆ ನೆಟ್ಟಿಗರ ಕಣ್ಣಿಗಳಿಗೆ ಬೀಳುತ್ತಿದ್ದಾರೆ. ಇನ್ನೇನು ಪೂಜಾ ಹೆಗ್ಡೆಯ ಬಾಲಿವುಡ್ ಸಿನಿಮಾ 'ಸರ್ಕಸ್' ಬಿಡುಗಡೆಯಾಗುತ್ತಿದೆ. ಆದರೆ, ಈ ಸಿನಿಮಾಗಿಂತ ಪೂಜಾ ಹೆಗ್ಡೆ ಡೇಟಿಂಗ್ ಮ್ಯಾಟರ್ ಎಲ್ಲಾ ಕಡೆ ಹಲ್‌ಚಲ್ ಎಬ್ಬಿಸುತ್ತಿದೆ.

ಹೌದು, ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ಜೊತೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ವೇಳೆ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ ಅನ್ನೋ ಟಾಕ್ ಶುರುವಾಗಿದೆ. ಅದೇ ಇನ್ನೊಂದು ಕಡೆ ರೌಂಡ್ ಟೇಬಲ್ ಸಂದರ್ಶನದಲ್ಲಿ ಕೊಟ್ಟ ಹೇಳಿಕೆ ಕೂಡ ವೈರಲ್ ಆಗುತ್ತಿದೆ.

ಭಾರತೀಯ ಚಿತ್ರರಂಗ ಸ್ಟಾರ್ ಫಿಲ್ಮ್ ಮೇಕರ್ಸ್ ಜೊತೆ ಸ್ಟಾರ್‌ಗಳ ಜೊತೆ ಪೂಜಾ ಹೆಗ್ಡೆ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವೇಳೆ ಪ್ರಾದೇಶಿಕ ಸಿನಿಮಾಗಳ ಬಗ್ಗೆ ಮಾತಾಡುವಾಗ ಪೂಜಾ ಹೆಗ್ಡೆ ಮಂಗಳೂರು, ಭೂತಕೋಲ, ಕಾಂತಾರ ಸಿನಿಮಾ ಹಾಗೂ ಕನ್ನಡ ಸಿನಿಮಾಗಳ ಬಗ್ಗೆ ಮಾತಾಡಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.

ಪೂಜಾ ಹೆಗ್ಡೆ ಹೇಳಿದ್ದೇನು?

ಪೂಜಾ ಹೆಗ್ಡೆ ಹೇಳಿದ್ದೇನು?

ಫಿಲ್ಮ್ ಕ್ರಿಟಿಕ್ ಭಾರದ್ವಾಜ್ ರಂಗನ್ ರೌಂಡ್‌ ಟೇಬಲ್ ಸಂದರ್ಶನದಲ್ಲಿ ಪೂಜಾ ಹೆಗ್ಡೆ ಭಾಗವಹಿಸಿದ್ದರು. ಈ ವೇಳೆ ಕನ್ನಡ ಸಿನಿಮಾ ಹಾಗೂ 'ಕಾಂತಾರ' ಬಗ್ಗೆ ಪೂಜಾ ಹೆಗ್ಡೆ ಮಾತಾಡಿದ್ದರು. ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಮಂಗಳೂರು ಮೂಲದ ಪೂಜಾ ಹೆಗ್ಡೆ ಕನ್ನಡ ಚಿತ್ರರಂಗವನ್ನು ಸಂದರ್ಶನದಲ್ಲಿ ಹೊಗಳಿದ್ದಾರೆ. ಇದು ನೆಟ್ಟಿಗರ ಕಣ್ಣು ಕುಕ್ಕುವಂತೆ ಮಾಡಿದೆ. " ಪ್ರೇಕ್ಷಕಳಾಗಿ ಕನ್ನಡ ಚಿತ್ರರಂಗದ ಬಗ್ಗೆ ಮಾತಾಡಬೇಕು ಅಂದ್ರೆ, ನನ್ನ ಮೂಲ ಮಂಗಳೂರು. ಸಿನಿಮಾಗಳಲ್ಲಿ ನಿಮ್ಮನ್ನು ಹಾಗೂ ನಿಮ್ಮ ಸಂಸ್ಕೃತಿಯನ್ನು ಕಾಣಲು ಬಯಸುತ್ತೇವೆ. 'ಕಾಂತಾರ'ದಂತಹ ಸಿನಿಮಾ ಭೂತಕೋಲವನ್ನು ಚಿತ್ರೀಸಲಾಗಿದೆ. ಇಂತಹದ್ದನ್ನೇ ನಾವು ನೋಡಿಕೊಂಡು ಬೆಳೆದಿದ್ದೇವೆ. ಈ ಆಚರಣೆಯನ್ನು ನಾನು ನೋಡಿಕೊಂಡು ಬೆಳೆದಿದ್ದೇನೆ. ಅದನ್ನು ದೊಡ್ಡ ಪರದೆ ಮೇಲೆ ನೋಡಿದಾಗ ವಾವ್ಹ್ ಎಂದು ಎನಿಸಿತ್ತು." ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.

'ನನಗೆ ಹೆಮ್ಮೆ ಎನಿಸುತ್ತಿದೆ'

'ನನಗೆ ಹೆಮ್ಮೆ ಎನಿಸುತ್ತಿದೆ'

ಪೂಜಾ ಹೆಗ್ಡೆ ಇಷ್ಟಕ್ಕೆ ನಿಲ್ಲಿಸಲಿಲ್ಲ. " ಜನರು ಇಂತಹ ಮ್ಯಾಜಿಕ್ ಅನ್ನು ಅನುಭವಿಸುತ್ತಿರುವುದು ನನಗೆ ಖುಷಿಕೊಟ್ಟಿದೆ. ನನ್ನ ಅಜ್ಜಿ ಹಾಗೂ ತಾಯಿ ಸೇರಿದಂತೆ ಇಡೀ ಕುಟುಂಬ ಕಾಂತಾರ ಸಿನಿಮಾ ನೋಡಬೇಕು ಎಂದು ಬಯಸಿದ್ದರು. ಅವರು ಬೇರೆ ಸಿನಿಮಾ ನೋಡಲು ಇಷ್ಟ ಪಡಲಿಲ್ಲ. ಇದು ನನಗೆ ಹೆಮ್ಮೆ ಅನಿಸುತ್ತದೆ." ಎಂದು ಪೂಜಾ ಹೆಗ್ಡೆ ಹೇಳಿದ್ದರು. ಪೂಜಾ ಹೆಗ್ಡೆ ಸಂದರ್ಶನದಲ್ಲಿ ಹೀಗೆ ಹೇಳುತ್ತಿದ್ದಂತೆ ಇತ್ತ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸುಮ್ಮನೆ ಕಾಂತಾರ, ಮಂಗಳೂರು ಅಂತ ಹೇಳೆ ಅಡ್ವಾಂಟೇಜ್ ತೆಗೆದುಕೊಳ್ಳುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ.

ಹೆಮ್ಮ ಪಡುತ್ತಿರೋದು ಯಾಕೆ?

ಹೆಮ್ಮ ಪಡುತ್ತಿರೋದು ಯಾಕೆ?

ಪೂಜಾ ಹೆಗ್ಡೆ ಮಂಗಳೂರು ಮೂಲ ನಿಜ. ಆದರೆ, ಕನ್ನಡ ಗೊತ್ತಿಲ್ಲ. ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಈಗ 'ಕಾಂತಾರ', ಕನ್ನಡ ಸಿನಿಮಾ ಅಂತ ಮಾಡುತ್ತಿದ್ದಾರೆ. ಕನ್ನಡ ಸಿನಿಮಾಗಳ ಜೊತೆ ಗುರುತಿಸಿಕೊಳ್ಳುವುದಕ್ಕೆ ಪ್ರಯತ್ನ ಪಡ್ತಿದ್ದಾರೆ ಅಂತ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹಲವು ವರ್ಷಗಳಿಂದ ನಟಿಸುತ್ತಿದ್ದಾರೆ. ತೆಲುಗು, ತಮಿಳು ಹಾಗೂ ಬಾಲಿವುಡ್‌ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಎಂದಿಗೂ ಕನ್ನಡ ಸಿನಿಮಾಗಳಲ್ಲಿ ನಟಿಸೋ ಮನಸ್ಸು ಮಾಡಿಲ್ಲ. ಈಗ 'ಕಾಂತಾರ', ಕನ್ನಡ ಸಿನಿಮಾ ಅಂತ ಹೇಳುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

'ಸರ್ಕಸ್' ಸಿನಿಮಾ ರಿಲೀಸ್‌ಗೆ ರೆಡಿ

'ಸರ್ಕಸ್' ಸಿನಿಮಾ ರಿಲೀಸ್‌ಗೆ ರೆಡಿ

ಈ ವರ್ಷ ಪೂಜಾ ಹೆಗ್ಡೆ ಅಭಿನಯದ ಮೂರು ಬಿಗ್ ಸಿನಿಮಾಗಳು ರಿಲೀಸ್ ಆಗಿವೆ. 'ರಾಧೆ ಶ್ಯಾಮ್', 'ಆಚಾರ್ಯ' ಹಾಗೂ 'ಬೀಸ್ಟ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿತ್ತು. ಈಗ ನಾಲ್ಕನೇ ಸಿನಿಮಾ 'ಸರ್ಕಸ್' ಕೂಡ ರಿಲೀಸ್‌ಗೆ ರೆಡಿಯಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 23ಕ್ಕೆ ಬಿಡುಗಡೆಯಾಗುತ್ತಿದೆ. ಸದ್ಯ ಪೂಜಾ ಹೆಗ್ಡೆ ಇದೇ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ 'ಸರ್ಕಸ್' ಮೂಲಕ ಸಕ್ಸಸ್ ಪಡೆಯೋ ತರಾತುರಿಲ್ಲಿ ಪೂಜಾ ಹೆಗ್ಡೆ ಇದ್ದಾರೆ.

More from Filmibeat

English summary
Pooja Hegde About Kantara Mangalore And Kannada Movies In Round Table Discussion, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X