ಹೃತಿಕ್, ಜೂ.ಎನ್‌ಟಿಆರ್, ರಾಜಮೌಳಿಯನ್ನೇ ಹಿಂದಿಕ್ಕಿದ ರಿಷಬ್-ರುಕ್ಮಿಣಿ: ಇವ್ರು ಭಾರತದ ಜನಪ್ರಿಯ ತಾರೆಯರು

adkfkಕಳೆದ ಎರಡು ವಾರಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿಯದ್ದೇ ಹವಾ. 'ಕಾಂತಾರ ಚಾಪ್ಟರ್ 1' ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ಅಬ್ಬರಿಸುತ್ತಿದೆ. ರಿಷಬ್ ಶೆಟ್ಟಿಯ ನಟನೆ ಹಾಗೂ ನಿರ್ದೇಶನಕ್ಕೆ ಕನ್ನಡಿಗರು ಸೇರಿದಂತೆ ಹೊರ ರಾಜ್ಯಗಳ ಜನರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಬಾಕ್ಸಾಫೀಸ್‌ನಲ್ಲಿಯೂ ಈ ಸಿನಿಮಾ ದಾಖಲೆಗಳನ್ನು ಬರೆಯುತ್ತಿದೆ.

'ಕಾಂತಾರ ಚಾಪ್ಟರ್ 1' ರಿಲೀಸ್ ಆದ ದಿನದಿಂದ ರಿಷಬ್ ಶೆಟ್ಟಿ ಜನಪ್ರಿಯತೆ ಹೆಚ್ಚಾಗಿದೆ. ಕಳೆದೆರಡು ವಾರಗಳಲ್ಲಿ ವಿಶ್ವದಾದ್ಯಂತ ರಿಷಬ್ ಶೆಟ್ಟಿಯ ಬಗ್ಗೆ ಹೆಚ್ಚು ಮಂದಿ ಹುಡುಕಾಡಿದ್ದಾರೆ. ಹೀಗಾಗಿ 'ಕಾಂತಾರ ಚಾಪ್ಟರ್ 1' ಸಿನಿಮಾ ರಿಷಬ್ ಶೆಟ್ಟಿ ಹಾಗೂ ರುಕ್ಷ್ಮಿಣಿ ವಸಂತ್ ಇಬ್ಬರೂ ಭಾರತದ ಜನಪ್ರಿಯ ಸೆಲೆಬ್ರೆಟಿಗಳ ಪಟ್ಟಿ ಸೇರಿದ್ದಾರೆ.

Popular Indian Celebrities Weekly IMDb Feature Rishab Shetty tops beating Hrithik Roshan Jr Ntr

ವಿಶೇಷ ಅಂದರೆ, ಬಾಲಿವುಡ್‌ ಸೂಪರ್‌ಸ್ಟಾರ್ ಹೃತಿಕ್ ರೋಷನ್, ಟಾಲಿವುಡ್‌ನ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್, ಪ್ಯಾನ್ ಇಂಡಿಯಾ ಡೈರೆಕ್ಟರ್ ಎಸ್‌.ಎಸ್‌.ರಾಜಮೌಳಿ ಸೇರಿದಂತೆ ಹಲವರನ್ನು ಈ ಜೋಡಿ ಹಿಂದಿಕ್ಕಿದೆ. ಹಾಗಿದ್ದರೆ, ಪ್ರತಿಷ್ಠಿತ ಐಎಂಡಿಬಿ ಭಾರತದ ಜನಪ್ರಿಯ ಸೆಲೆಬ್ರೆಟಿಗಳ ಪಟ್ಟಿಯಲ್ಲಿರುವ ಯಾರೆಲ್ಲ ಯಾವ್ಯಾವ ಸ್ಥಾನದಲ್ಲಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಐಎಂಡಿಬಿ ಪಟ್ಟಿಯಲ್ಲಿ ರಿಷಬ್ ನಂ 1

ಐಎಂಡಿಬಿಯಲ್ಲಿ ಜನರು ಅತೀ ಹೆಚ್ಚು ಹುಡುಕಾಡಿದ ಭಾರತದ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ಇದ್ದಾರೆ. 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಸದ್ದು ಮಾಡುವುದಕ್ಕೆ ಶುರು ಮಾಡಿದ ಕ್ಷಣದಿಂದ ರಿಷಬ್ ಶೆಟ್ಟಿಯ ಬಗ್ಗೆ ಐಎಂಡಿಬಿ ಜಾಲತಾಣದಲ್ಲ ಹುಡುಕಾಡಿದ್ದರು. ಕಳೆದೆರಡು ವಾರಗಳಲ್ಲಿ ಐಎಂಡಿಬಿಗೆ ವಿಸಿಟ್ ಹಾಕಿದ ವೀಕ್ಷಕರ ಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು ರಿಷಬ್ ಶೆಟ್ಟಿ ನಂ 1 ಭಾರತದ ಜನಪ್ರಿಯ ತಾರೆ ಎಂದು ಘೋಷಿಸಿದೆ.

ಎರಡನೇ ಸ್ಥಾನದಲ್ಲಿ ರುಕ್ಮಿಣಿ ವಸಂತ್

ಐಎಂಡಿಬಿಯ ಎರಡನೇ ಸ್ಥಾನದಲ್ಲಿ ರುಕ್ಮಿಣಿ ವಸಂತ್ ಇದ್ದಾರೆ. 'ಕಾಂತಾರ ಚಾಪ್ಟರ್ 1' ಮೆಗಾ ಸಕ್ಸಸ್ ಆಗಿದ್ದು, ರುಕ್ಮಿಣಿ ಜನಪ್ರಿಯತೆಯನ್ನು ದುಪ್ಪಟ್ಟು ಮಾಡಿದೆ. ಹೀಗಾಗಿ ರಿಷಬ್ ಶೆಟ್ಟಿಯ ನಂತರದ ಸ್ಥಾನದಲ್ಲಿ ರುಕ್ಮಿಣಿ ವಸಂತ್ ಹೆಸರು ಇದೆ. ಭಾರತದ ಜನಪ್ರಿಯ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ರುಕ್ಮಿಣಿ ಎರಡನೇ ಸ್ಥಾನದಲ್ಲಿದ್ದಾರೆ.

ಯಾರನ್ನೆಲ್ಲ ಹಿಂದಿಕ್ಕಿದ್ರು?

ಐಎಂಡಿಬಿ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ರಿಷಬ್ ಶೆಟ್ಟಿಗೆ ಮೊದಲ ಸ್ಥಾನ, ರುಕ್ಮಿಣಿ ವಸಂತ್‌ಗೆ 2ನೇ aಸ್ಥಾನವಿದೆ. ಅದು ಬಿಟ್ಟರೆ, 6ನೇ ಸ್ಥಾನದಲ್ಲಿ ಬಾಲಿವುಡ್ ನಟಿ ಮೋನಾ ಸಿಂಗ್, 11ನೇ ಸ್ಥಾನದಲ್ಲಿ ಹೃತಿಕ್ ರೋಷನ್, 15ನೇ ಸ್ಥಾನದಲ್ಲಿ ಶ್ರದ್ಧಾ ದಾಸ್, 23ನೇ ಸ್ಥಾನದಲ್ಲಿ ಜಾಹ್ನವಿ ಕಪೂರ್, 24ನೇ ಸ್ಥಾನದಲ್ಲಿ ಕಿಯಾರಾ ಅಡ್ವಾಣಿ, 25ನೇ ಸ್ಥಾನದಲ್ಲಿ ರಕ್ಷಿತ್ ಶೆಟ್ಟಿ, 31ನೇ ಸ್ಥಾನದಲ್ಲಿ ಜೂನಿಯರ್ ಎನ್‌ಟಿಆರ್, 32ನೇ ಸ್ಥಾನದಲ್ಲಿ ಎಸ್‌.ಎಸ್‌.ರಾಜಮೌಳಿ ಇದ್ದಾರೆ.

ದೀಪಾವಳಿಗೆ ವಿಶೇಷ ಟ್ರೈಲರ್

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ: ಚಾಪ್ಟರ್ 1' ಈ ವರ್ಷದ ಅತಿದೊಡ್ಡ ಯಶಸ್ಸು ಕಂಡ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾ ರಿಲೀಸ್ ಆದಲ್ಲಿಂದ ಬಾಕ್ಸ್ ಆಫೀಸ್‌ನಲ್ಲಿ ಒಂದೊಂದೇ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ ಮುನ್ನಡೆಯುತ್ತಿದೆ. ಬಿಡುಗಡೆಯಾದ 14 ದಿನಗಳಲ್ಲಿ ವಿಶ್ವಾದ್ಯಂತ ₹700 ಕೋಟಿ ಗಳಿಕೆ ಕಂಡಿದೆ. ಇದೇ ಖುಷಿಯಲ್ಲಿ ಪ್ರೇಕ್ಷಕರಿಗಾಗಿ ದೀಪಾವಳಿ ಹಬ್ಬಕ್ಕೆ ಹೊಚ್ಚ ಹೊಸ ಟ್ರೈಲರ್ ಅನ್ನು ರಿಲೀಸ್ ಮಾಡಿದೆ. ಅದಕ್ಕೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

More from Filmibeat

English summary
Popular Indian Celebrities: Weekly IMDb Feature Rishab Shetty tops beating Hrithik Roshan, Jr.Ntr, SS Rajamouli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X