ಮತ್ತೆ ತಾಯಿಯಾಗಲಿರುವ ದರ್ಶನ್ ಸಿನಿಮಾ ನಾಯಕಿ; ಬೇಬಿ ಬಂಪ್ ಫೋಟೋ ಶೇರ್ ಮಾಡಿ ಹೇಳಿದ್ದೇನು?
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಇಂದು (ಜುಲೈ 25) ತಮ್ಮ ಅಭಿಮಾನಿಗಳ ಜೊತೆ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತದ ಈ ಜನಪ್ರಿಯ ನಟಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ವಿಶೇಷವಾದ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು ಸಂತಸ ಪಟ್ಟಿದ್ದಾರೆ.
ದರ್ಶನ್ ನಟಿಸಿದ 'ಪೊರ್ಕಿ' ಸಿನಿಮಾ ಮೂಲಕ ನಟಿ ಪ್ರಣಿತಾ ಸುಭಾಷ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದ ಮೂಲಕವೇ ಗಮನ ಸೆಳೆದಿದ್ದ ನಟಿ ಬಳಿಕ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ನಟಿ ಎನಿಸಿಕೊಳ್ಳುತ್ತಿದ್ದಂತೆ ಪರಭಾಷೆಯ ಸಿನಿಮಾಗಳಲ್ಲೂ ನಟಿಸುವುದಕ್ಕೆ ಆರಂಭಿಸಿದ್ದರು.

ಹೀಗೆ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಎನಿಸಿಕೊಂಡಿರುವ ಪ್ರಣಿತಾ ಸುಭಾಷ್ ತಮ್ಮ ದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಾಹದ ಬಳಿಕ ಸಿನಿಮಾರಂಗ ಕೊಂಚ ದೂರವೇ ಉಳಿದಿರುವ ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆ ಮೂಲಕವೇ ಮತ್ತೊಂದು ಸಂತಸದ ವಿಷಯವನ್ನು ಹಂಚಿಕೊಂಡಿದ್ದಾರೆ.
ಪ್ರಣಿತಾ ಸುಭಾಷ್ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಬೇಬಿ ಬಂಪ್ ಅನ್ನು ತೋರಿಸಿ, ಗರ್ಣಿಣಿಯಾಗಿರುವ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಟಾಪ್-ಬ್ಲೂ ಜೀನ್ಸ್ ತೊಟ್ಟು ಬೇಬಿ ಬಂಪ್ ಫೋಟೋಗಳನ್ನು ನಟಿ ಪ್ರಣಿತಾ ಸುಭಾಷ್ ಹಂಚಿಕೊಂಡಿದ್ದಾರೆ.
ಈ ಪೋಟೋಗಳ ಜೊತೆಗೆ "ರೌಂಡ್- 2.. ಇನ್ಮುಂದೆ ಈ ಪ್ಯಾಂಟ್‌ಗಳು ಫಿಟ್ ಆಗುವುದಿಲ್ಲ" ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ನಟಿ ಪ್ರಣಿತಾ ಸುಭಾಷ್ ಹೇಳಿಕೊಂಡಿದ್ದಾರೆ. ಈ ಖುಷಿ ವಿಷಯ ಕೇಳಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ನೆಟ್ಟಿಗರು ನಟಿ ಪ್ರಣಿತಾಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ನಟಿ ಪ್ರಣಿತಾ ಸುಭಾಷ್ 2021ರಲ್ಲಿ ಗೆಳೆಯ ನಿತಿನ್ ರಾಜು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕೋವಿಡ್ ಸಮಯದಲ್ಲಿ ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ತಮ್ಮ ಮದುವೆ ವಿಷಯವನ್ನು ಖಾಸಗಿಯಾಗಿ ಇಡಲು ಬಯಸಿದ್ದರು ಅನ್ನೋದು ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಸಂಗತಿ. ಈ ಜೋಡಿ ಹಿಂದೂ ಸಾಂಪ್ರದಾಯದಂತೆ ವಿವಾಹವಾಗಿದ್ದರು. ಈಗಾಗಲೇ ಈ ದಂಪತಿಗೆ 2023ರಲ್ಲಿ ಹೆಣ್ಣು ಮಗು ಜನಿಸಿದೆ.
2023, ಜೂನ್ 10 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಣಿತಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ನಿತಿನ್ ರಾಜು ಹಾಗೂ ಪ್ರಣಿತಾ ಸುಭಾಷ್ ತಮ್ಮ ಪ್ರೀತಿಯ ಮಗಳಿಗೆ ಅರ್ನಾ ಎಂದು ನಾಮಕರಣ ಮಾಡಿದ್ದಾರೆ. ವಿವಾಹದ ಬಳಿಕ ಸಂಸಾರ, ಮಕ್ಕಳು ಅಂತ ಸಿನಿಮಾಗಳಿಂದ ಕೊಂಚ ಮಟ್ಟಿಗೆ ದೂರವಿದ್ದಾರೆ. ಆದರೂ, ತಮ್ಮ ಸೌಂದರ್ಯವನ್ನು ಹಾಗೇ ಉಳಿಸಿಕೊಂಡಿದ್ದು, ಎರಡನೇ ಮಗುವಿನ ಬಳಿಕ ಮತ್ತೆ ಚಿತ್ರರಂಗಕ್ಕೆ ಬಂದರೂ ಬರಬಹುದು.


Click it and Unblock the Notifications











