Puneeth Rajkumar Birthday: ನಗುಮುಖದ 'ರಾಜಕುಮಾರ'ನಿಗೆ 47ನೇ ಹುಟ್ಟುಹಬ್ಬದ ಶುಭಾಶಯಗಳು
ಮೂರು ವರ್ಷದ ಹಿಂದೆ ನೋಡಬೇಕಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಹೇಗಿರುತ್ತಿತ್ತು ಅನ್ನೋ ಒಂದು ಝಲಕ್ ಕಣ್ಮುಂದೆ ಬರುತ್ತಿತ್ತು. ಮಧ್ಯರಾತ್ರಿಯಿಂದಲೇ ಪುನೀತ್ ರಾಜ್‌ಕುಮಾರ್ ಮನೆಯ ಮುಂದೆ ಅಭಿಮಾನಿಗಳ ಜನಸಾಗರ. ಕೇಕ್ ಹಿಡಿದು ಮಾರುದ್ಧ ಕ್ಯೂ ನಿಂತ ಅಭಿಮಾನಿಗಳು. ನೆಚ್ಚಿನ ನಟನನ್ನು ಭೇಟಿ ಮಾಡಲು ಅಭಿಮಾನಿಗಳ ಕಾತುರ. ಅಪ್ಪು ಜೊತೆಗೊಂದು ಸೆಲ್ಫಿ. ಆ ಸೆಲ್ಫಿ ಹಿಂದೆ ಒಂದೊಂದು ಕಹಾನಿ.
Recommended Video

ಅಪ್ಪು ಅಭಿಮಾನಿಗಳ ಈ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದು ಕೊರೊನಾ. ಅದ್ಯಾವಾಗ ಕೊರೊನಾ ಭಾರತದಲ್ಲಿ ಹಾವಳಿ ಇಡಲು ಆರಂಭಿಸಿತ್ತೋ. ಆಗಲೇ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಆಚರಿಸದೆ ಇರಲು ತೀರ್ಮಾನಿಸಿದ್ದರು. ಅದೂ ಅಭಿಮಾನಿಗಳ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ವರ್ಷ ಬರ್ತ್ ಡೇ ಆಚರಣೆ ಮಾಡುವುದೇ ಬೇಡ ಎಂದುಕೊಂಡಿದ್ದರು. ಹಾಗೇ ಅದು ಮೂರು ವರ್ಷ ಕಳೆದು ಹೋಯ್ತು. ಆದರೆ ಈ ಬಾರಿ ಮಾತ್ರ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಣೆ ಮಾಡುತ್ತಿದ್ದರು.
ಅಭಿಮಾನಿ ದೇವರುಗಳೊಂದಿಗೆ ಹುಟ್ಟುಹಬ್ಬ
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಅಂದರೆ, ಅಭಿಮಾನಿಗಳಿಗೆ ಮನೆ ಹಬ್ಬವಿದ್ದಂತೆ. ಆ ದಿನ ತಮ್ಮದೇ ಹುಟ್ಟುಹಬ್ಬವೇನೋ ಎಂಬುವಂತೆ ಆಚರಣೆ ಮಾಡಿಕೊಳ್ಳುತ್ತಿದ್ದರು. ಆ ದಿನ ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳಿಂದ ವಿಶೇಷ ಉಡುಗೊರೆಗಳು ಸಿಗುತ್ತಿದ್ದವು. ಭಿನ್ನ-ವಿಭಿನ್ನವಾದ ಕೇಕ್‌ಗಳನ್ನು ತರುತ್ತಿದ್ದರು. ಹೂವಿಹಾರ ಈ ಎಲ್ಲಾ ಸಂಭ್ರಮ ಪ್ರತಿ ವರ್ಷ ಪುನೀತ್ ರಾಜ್‌ಕುಮಾರ್ ಮನೆಯ ಮುಂದೆ ಕಾಣಿಸುತ್ತಿತ್ತು.

ಅಪ್ಪು ಕೂಡ ಅಭಿಮಾನಿಗಳಿಗೆ ಕಾಯಿಸುತ್ತಿರಲಿಲ್ಲ. ಮಧ್ಯರಾತ್ರಿಯಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಸಮಾಧಾನದಿಂದ ಅಭಿಮಾನಿಗಳು ತಂದ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಅಭಿಮಾನಿಗಳಿಗೆ ಸೆಲ್ಫಿ ಕೊಟ್ಟು ಕಳುಹಿಸುತ್ತಿದ್ದರು. ಈಗ ಅಭಿಮಾನಿಗಳು ಆ ಎಲ್ಲಾ ಸಂಭ್ರಮವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅಪ್ಪು ಇದ್ದಿದ್ದರೆ, ಈ ವರ್ಷ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದರು.
ಬರ್ತ್‌ಡೇ ಅನೌನ್ಸ್ ಆಗುತ್ತಿತ್ತು ಹೊಸ ಸಿನಿಮಾ
ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಬಂತು ಅಂದರೆ, ಅಭಿಮಾನಿಗಳಿಗೂ ಸರ್ಪ್ರೈಸ್ ಕಾದಿರುತ್ತಿತ್ತು. ಯಾಕಂದರೆ, ಅಪ್ಪು ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿದ್ದವು. ಬಿಡುಗಡೆಯಾಗಬೇಕಿದ್ದ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿತ್ತು. ಸಿನಿಮಾಗೆ ಮುಹೂರ್ತ ಕಾಣುತ್ತಿತ್ತು. ಮೂರು ವರ್ಷದಿಂದ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳದೆ ಇದ್ದರೂ, ಅಭಿಮಾನಿಗಳಿಗಾಗಿ ಹೊಸ ಸಿನಿಮಾ ಅನೌನ್ಸ್ ಆಗಿದೆ.
ಈ ಬಾರಿ ಅಪ್ಪು ಅಭಿಮಾನಿಗಳು ನೋವಿನಲ್ಲೂ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಮಾರ್ಚ್ 17 ಅಪ್ಪು ಹುಟ್ಟುಹಬ್ಬವನ್ನೂ ಎಂದೂ ಮಾಡದಷ್ಟು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ತಾವೇ ಮುಂದೆ ನಿಂತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. 5 ದಿನ ನಿರಂತರ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಅಪ್ಪು ಅಗಲಿದ ನೋವಿನಲ್ಲೂ ಬರ್ತ್‌ಡೇಯನ್ನ ಪವರ್‌ಫುಲ್ ಆಗಿ ಆಚರಿಸಲು ಮುಂದಾಗಿರುವ ಅಭಿಮಾನಿಗಳಿಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಶುಭಾಶಯಗಳು.


Click it and Unblock the Notifications











