'ಜೇಮ್ಸ್' ತಂಡದಿಂದ ಹಿಂದೆಂದೂ ನೋಡಿರದ ಅಪ್ಪು ಲುಕ್ ರಿವೀಲ್: ಅಭಿಮಾನಿಗಳಿಂದಲೇ ಬಿಡುಗಡೆ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್'. ಈ ಸಿನಿಮಾದ ವಿಶೇಷ ಪೋಸ್ಟರ್ ನಾಳೆ ( ಜನವರಿ 26) ರಂದು ಬಿಡುಗಡೆಯಾಗಲಿದೆ. ಕಳೆದ ಕೆಲವು ದಿನಗಳಿಂದಲೂ 'ಜೇಮ್ಸ್' ಪೋಸ್ಟರ್ ರಿಲೀಸ್ ಮಾಡುತ್ತಿರುವ ಬಗ್ಗೆ ನಿರ್ದೇಶಕ ಚೇತನ್ ಮಾಹಿತಿ ನೀಡಿದ್ದರು. ಅದರಂತೆ ಅದ್ಧೂರಿಯಾಗಿ ಅಪ್ಪು ಅಭಿನಯದ 'ಜೇಮ್ಸ್' ಪೋಸ್ಟರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿ ನಿಂತಿದೆ.

Recommended Video

ಅಪ್ಪು ವಿಷಯದಲ್ಲಿ ಇದು ಅಭಿಮಾನಿಗಳ ಕೊನೆಯ ಆಸೆ

ಜನವರಿ 29ಕ್ಕೆ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ಮೂರು ತಿಂಗಳು ಕಳೆಯುತ್ತೆ. ಅಪ್ಪು ಸಾವಿನ ನೋವನ್ನು ಅಭಿಮಾನಿಗಳು ಇನ್ನೂ ಅರಗಿಸಿಕೊಂಡಿಲ್ಲ. ಇದೇ ವೇಳೆ ಅವರಿಗಾಗಿಯೇ ಅಪ್ಪು ನಟಿಸಿದ ಕೊನೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಗಣರಾಜ್ಯೋತ್ಸದ ಅಂಗವಾಗಿ ಜೇಮ್ಸ್ ಚಿತ್ರದ ಈ ವಿಶೇಷ ಪೋಸ್ಟರ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ.

ಅಪ್ಪು ಅಭಿಮಾನಿಗಳಿಂದಲೇ 'ಜೇಮ್ಸ್' ಪೋಸ್ಟರ್ ರಿಲೀಸ್

ಜನವರಿ 26 ರಂದು ಬಿಡುಗಡೆಯಾಗುತ್ತಿರುವ 'ಜೇಮ್ಸ್' ಚಿತ್ರದ ಪೋಸ್ಟರ್ ಅನ್ನು ಅಪ್ಪು ಅಭಿಮಾನಿಗಳೇ ಬಿಡುಗಡೆ ಮಾಡುತ್ತಿದ್ದಾರೆ. ನಾಳೆ (ಜನವರಿ 26) ಬೆಳಗ್ಗೆ 11:11 ಕ್ಕೆ ಸರಿಯಾಗಿ ಅಭಿಮಾನಿಗಳಿಂದ ಜೇಮ್ಸ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಅಪ್ಪು ಅಭಿಮಾನಿಗಳೇ ಈ ವಿಶೇಷ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಿದ್ದಾರೆ.

Power Star Puneeth Rajkumar Fans Will Be Releasing James Movie Poster on January 26th

ಪುನೀತ್ ರಾಜ್‌ಕುಮಾರ್ ಅಭಿನಯಿಸಿದ ಕೊನೆಯ ಸಿನಿಮಾ 'ಜೇಮ್ಸ್' ಪೋಸ್ಟರ್ ಕುತೂಹಲ ಕೆರಳಿಸಿದೆ. ನಾಳೆ( ಜನವರಿ 26) ಬಿಡುಗಡೆಯಾಗುತ್ತಿರುವ ಪೋಸ್ಟರ್ ಹೇಗಿರುತ್ತೆ? ಅನ್ನುವುದನ್ನು ನೋಡುವುದಕ್ಕಾಗಿಯೇ ಅಭಿಮಾನಿಗಳು ಕಾದು ಕೂತಿದ್ದಾರೆ. ಚೇತನ್ ಕುಮಾರ್ ನಿರ್ದೇಶಿಸಿರುವ 'ಜೇಮ್ಸ್' ಚಿತ್ರದ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಅಪ್ಪು ಫ್ಯಾನ್ಸ್ ಸಮಸ್ತ ರಾಜ್‌ಕುಮಾರ್ ಅಭಿಮಾನಿಗಳಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.

'ಜೇಮ್ಸ್' ಸಿನಿಮಾದಲ್ಲಿ ಶಿವಣ್ಣ-ರಾಘಣ್ಣ ನಟನೆ

'ಜೇಮ್ಸ್' ಸಿನಿಮಾ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ವಿಶೇಷ ಸಿನಿಮಾ. ಯಾಕಂದ್ರೆ ಈ ಸಿನಿಮಾದಲ್ಲಿ ಡಾ. ಶಿವರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಇಬ್ಬರೂ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಇಡೀ ಡಾ.ರಾಜ್‌ಕುಮಾರ್ ಕುಟುಂಬವೇ ಈ ಸಿನಿಮಾಗಾಗಿ ಕಾದು ಕೂತಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಶತಪ್ರಯತ್ನ ನಡೆಸುತ್ತಿದೆ.

Power Star Puneeth Rajkumar Fans Will Be Releasing James Movie Poster on January 26th

ಇನ್ನೂ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎನ್ನುವುದನ್ನು 'ಜೇಮ್ಸ್' ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಬಿಟ್ಟುಕೊಟ್ಟಿಲ್ಲ. ಆದರೆ, ನಿರ್ದೇಶಕ ಚೇತನ್ ಮಾರ್ಚ್ 17ರಂದೇ ಸಿನಿಮಾ ಬಿಡುಗಡೆ ಮಾಡಲು ಶ್ರಮಿಸುತ್ತಿದ್ದಾರೆಂಬ ಚರ್ಚೆ ಸ್ಯಾಂಡಲ್‌ವುಡ್‌ನಲ್ಲಿ ಆಗುತ್ತಿದೆ. ಇದರೊಂದಿಗೆ 'ಜೇಮ್ಸ್' ಸಿನಿಮಾದ ಮತ್ತೊಂದು ಕುತೂಹಲವನ್ನು ಹುಟ್ಟುಹಾಕಿದೆ. ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ಯಾರು ಡಬ್ಬಿಂಗ್ ಮಾಡುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಸದ್ಯ ಪುನೀತ್ ರಾಜ್‌ಕುಮಾರ್ ಶೂಟಿಂಗ್ ವೇಳೆ ಹೇಳಿದ ಡೈಲಾಗ್‌ಗಳನ್ನೇ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಚಿತ್ರತಂಡ ಕೈ ಹಾಕಿದೆ. ಲಂಡನ್, ಮುಂಬೈ ಸೇರಿದಂತೆ ಹಲವು ಕಡೆ ಆ ಧ್ವನಿಯನ್ನು ಹಾಗೆಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದರೇ ಶಿವಣ್ಣ 'ಜೇಮ್ಸ್' ಸಿನಿಮಾದ ಅಪ್ಪು ಪಾತ್ರಕ್ಕೆ ಧ್ವನಿ ನೀಡುವ ಸಾಧ್ಯತೆಗಳು ಹೆಚ್ಚಿವೆ.

More from Filmibeat

English summary
Power Star Puneeth Rajkumar fans will be releasing James movie poster on January 26th. On Occation of Republic day Puneeth Starrer James unique poster will be releasing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X