ಮತ್ತೆ 'ಅಪ್ಪು' ಆದ ಅಪ್ಪು!: ಪುನೀತ್ ಅಭಿಮಾನಿಗಳಿಗೆ 'ಯುವರತ್ನ'ದ ಸಿಹಿ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಅಭಿಮಾನಿಗಳಿಗೆ ಹೊಸ 'ಅಪ್ಪು'ಗೆ ನೀಡುತ್ತಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ 'ಯುವರತ್ನ' ಚಿತ್ರದಲ್ಲಿ ಪುನೀತ್ ತಮ್ಮ ಹಳೆಯ ಗೆಟಪ್‌ಗೆ ಮರಳಲಿದ್ದಾರೆ ಎಂಬ ಸುಳಿವನ್ನು ಚಿತ್ರತಂಡ ನೀಡಿದೆ.

Recommended Video

ಹೊಸ ಗೆಟಪ್ ನಲ್ಲಿ ಹಳೆ ಅಪ್ಪು

ಮಾರ್ಚ್ 17 ಪುನೀತ್ ಜನ್ಮದಿನ. ಅಂದು ಅಭಿಮಾನಿಗಳಿಗೆ ಉಡುಗೊರೆ ನೀಡಲು ಚಿತ್ರತಂಡ ತೀರ್ಮಾನಿಸಿದೆ. ಬರ್ಥಡೇ ಟ್ರೀಟ್ ಸಿದ್ಧವಾಗುತ್ತಿದೆ ಎಂದು ಹೊಂಬಾಳೆ ಫಿಲಂಸ್‌ನ ನಿರ್ಮಾಪಕ ಕಾರ್ತಿಕ್ ಗೌಡ ಮಾಹಿತಿ ನೀಡಿದ್ದಾರೆ. ಯುವರತ್ನದ ಎರಡನೆಯ ಟೀಸರ್‌ಗಾಗಿ ಪುನೀತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು ಅಂದು ಚಿತ್ರತಂಡ ಅವರಿಗೆ ಹುಟ್ಟುಹಬ್ಬದ ಗಿಫ್ಟ್ ನೀಡಲಿದೆ ಎನ್ನಲಾಗಿದೆ.

ಕಾರ್ತಿಕ್ ಗೌಡ ಅವರಿಂದ ಮಾಹಿತಿ ಹೊರಬಂದಿದ್ದರೂ, ಅಭಿಮಾನಿಗಳು ನಿರ್ದೇಶಕ ಸಂತೋಷ್ ಅನಂದರಾಮ್ ಅವರಿಂದಲೇ ಅಪ್‌ಡೇಟ್ ಸಿಗಲಿ ಎಂದು ಆಗ್ರಹಿಸುತ್ತಿದ್ದಾರೆ.

'ಅಪ್ಪು' ತರಹದ ಪಾತ್ರ!

ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ ಮೊದಲು ತೆರೆ ಮೇಲೆ ಕಾಣಿಸಿಕೊಂಡಿದ್ದು 'ಅಪ್ಪು' ಚಿತ್ರದ ಮೂಲಕ. 'ಯುವರತ್ನ' ಚಿತ್ರದಲ್ಲಿಯೂ 'ಅಪ್ಪು' ತರಹದ್ದೇ ಪಾತ್ರದಲ್ಲಿ ಪುನೀತ್ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ತಿಕ್ ಗೌಡ ತಿಳಿಸಿದ್ದಾರೆ. ಈಗಾಗಲೇ ವಿಭಿನ್ನ ಬಗೆಯ ಪೋಸ್ಟರ್‌ಗಳ ಮೂಲಕ ಗಮನ ಸೆಳೆದಿರುವ 'ಯುವರತ್ನ'ದ ಬಗ್ಗೆ ಇದರಿಂದ ಮತ್ತಷ್ಟು ನಿರೀಕ್ಷೆಗಳು ಹುಟ್ಟಿವೆ.

18 ವರ್ಷದ ಬಳಿಕ ಮತ್ತೆ 'ಅಪ್ಪು'

18 ವರ್ಷದ ಬಳಿಕ ಮತ್ತೆ 'ಅಪ್ಪು'

'ಅಪ್ಪು' ಚಿತ್ರದಲ್ಲಿ ಅಗ್ರೆಷನ್ ಮತ್ತು ವಿಭಿನ್ನ ಆಟಿಟ್ಯೂಡ್‌ನ ಕಾಲೇಜು ಹುಡುಗ ಹಾಗೂ ಲವರ್ ಬಾಯ್ ಆಗಿಯೂ ಪುನೀತ್ ವಿವಿಧ ಛಾಯೆಗಳುಳ್ಳ ಪಾತ್ರದಲ್ಲಿ ನಟಿಸಿದ್ದರು. 18 ವರ್ಷದ ಬಳಿಕ ಪುನೀತ್ ಮತ್ತೆ ಅದೇ ರೀತಿಯ ಪಾತ್ರದ ಅಗ್ರೆಷನ್ ಅವರ ಪಾತ್ರದಲ್ಲಿ ಕಾಣಿಸಲಿದೆ.

ಹೊಸ ಗೆಟಪ್‌ನಲ್ಲಿ ಹಳೆ ಅಪ್ಪು

'ಯುವರತ್ನ' ಚಿತ್ರತಂಡ ನೀಡಿರುವ ಮಾಹಿತಿ ಪುನೀತ್ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. ಏಕೆಂದರೆ ಮಾರ್ಚ್ 17ರಂದು ಪುನೀತ್ ಜನ್ಮದಿನವನ್ನು ವಿಶೇಷವಾಗಿಸಲು ಏನಾದರೂ ಸಂತಸದ ಸಂಗತಿಯನ್ನು ನೀಡಿ ಎಂದು ಯುವರತ್ನ ಮತ್ತು ಜೇಮ್ಸ್ ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆ ಇರಿಸಿದ್ದರು. ಈಗ ಮಾರ್ಚ್ 17ರಂದು ಪುನೀತ್ ಅವರ 'ಯುವರತ್ನ' ಚಿತ್ರದ ಹೊಸ ಗೆಟಪ್‌ನಲ್ಲಿ ಹಳೆಯ 'ಅಪ್ಪು'ವನ್ನು ನೋಡುವ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ.

ವಿದೇಶಿ ಚಿತ್ರೀಕರಣ ರದ್ದು

ವಿದೇಶಿ ಚಿತ್ರೀಕರಣ ರದ್ದು

'ಯುವರತ್ನ' ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಹಾಡುಗಳಿಗಾಗಿ ಚಿತ್ರತಂಡ ಯುರೋಪ್‌ಗೆ ಹೊರಡಲು ತಯಾರಿ ನಡೆಸಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ವಿದೇಶ ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಹಾಡುಗಳ ಚಿತ್ರೀಕರಣವನ್ನು ಭಾರತದಲ್ಲಿಯೇ ಮಾಡಲಾಗುತ್ತದೆಯೇ ಅಥವಾ ವಿದೇಶಕ್ಕೆ ಹೋಗುವ ಅವಕಾಶಕ್ಕಾಗಿ ಕಾಯಲಾಗುತ್ತದೆಯೇ ಎಂಬಮಾಹಿತಿಯನ್ನು ಚಿತ್ರತಂಡ ಇನ್ನೂ ನೀಡಿಲ್ಲ.

More from Filmibeat

English summary
Power Star Puneeth Rajkumar will appear in Appu kinda character once again after his Appu movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X