'ಜೇಮ್ಸ್' ರಿಲೀಸ್ ಆಗಲಿರುವ ಥಿಯೇಟರ್‌ಗಳ ಪಟ್ಟಿ ಬಿಡುಗಡೆ: ಪ್ರಮುಖ ಚಿತ್ರಮಂದಿರಗಳ್ಯಾವುವು?

ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್' ರಿಲೀಸ್‌ಗೆ ಈಗಾಗಲೇ ತಯಾರಿ ಶುರುವಾಗಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆಗಳೂ ನಡೆಯುತ್ತಿವೆ. ಪವರ್‌ಸ್ಟಾರ್ ಅಗಲಿದ ದಿನದಿಂದ ಈ ಸಿನಿಮಾಗಾಗಿ ಅಪ್ಪು ಅಭಿಮಾನಿಗಳು ಕಾದು ಕೂತಿದ್ದಾರೆ. ಅದಕ್ಕೆ ತಕ್ಕಂತೆ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ಪುನೀತ್ ಅಭಿಮಾನಿಯೂ ಈ ಸಿನಿಮಾ ನೋಡಬೇಕು ಅನ್ನುವ ಪ್ರಯತ್ನಕ್ಕೆ 'ಜೇಮ್ಸ್' ತಂಡ ಮುಂದಾಗಿದೆ. ಈ ಕಾರಣಕ್ಕೆ ಈಗಾಗಲೇ ಥಿಯೇಟರ್ ಸೆಟಪ್ ಮಾಡಿಕೊಂಡಿದೆ.

ಪುನೀತ್ ರಾಜ್‌ಕುಮಾರ್ ಸಿನಿಮಾ ಯಾವಾಗಲೂ ಪವರ್‌ಪ್ಯಾಕ್ ಆಗಿರುತ್ತೆ. ಪವರ್‌ಫುಲ್ ಆಕ್ಷನ್ ಸೀಕ್ವೆನ್ಸ್‌ ಇರುತ್ತೆ. ಚೇಸಿಂಗ್ ಸೀನ್‌ಗಳಿರುತ್ತೆ. ಸೂಪರ್ ಸಾಂಗ್ಸ್, ಮಸ್ತ್ ಡ್ಯಾನ್ಸ್, ಫ್ಯಾಮಿಲಿ ಸ್ಟೋರಿ, ಸೆಂಟಿಮೆಂಟ್ ಇದ್ಯಾವುದಕ್ಕೂ ಕಮ್ಮಿ ಇರುವುದಿಲ್ಲ. 'ಜೇಮ್ಸ್' ಸಿನಿಮಾ ಕೂಡ ಅಷ್ಟೇ ಪವರ್‌ಫುಲ್ ಆಗಿ ಅಭಿಮಾನಿಗಳಿಗೆ ತಲುಪಿಸುವುದಕ್ಕೆ ಚಿತ್ರತಂಡ ಶತಪ್ರಯತ್ನ ಮಾಡುತ್ತಿದೆ. ಅದರ ಮೊದಲ ಹೆಜ್ಜೆಯಾಗಿ ಥಿಯೇಟರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

'ಜೇಮ್ಸ್' ಥಿಯೇಟರ್‌ ಲಿಸ್ಟ್ ರಿಲೀಸ್

'ಜೇಮ್ಸ್' ಥಿಯೇಟರ್‌ ಲಿಸ್ಟ್ ರಿಲೀಸ್

ಮಾರ್ಚ್ 17, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಹಬ್ಬ. ಅಂದು ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದೆ. 'ಜೇಮ್ಸ್' ರಿಲೀಸ್‌ಗೂ ತಮ್ಮದೇ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ. 'ಜೇಮ್ಸ್' ಟೀಮ್ ಕೂಡ ಮೊದಲ ಹಂತದ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಬೆಂಗಳೂರಿನಲ್ಲಿ ಕೆಜಿ ರಸ್ತೆಯಲ್ಲಿರುವ ತ್ರಿವೇಣಿ, ವಿಜಯನಗರದಲ್ಲಿರುವ ವೀರೇಶ್, ಪ್ರಸನ್ನ, ವೀರಭದ್ರೇಶ್ವರ, ಅಂಜನ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಫಸ್ಟ್ ಲಿಸ್ಟ್‌ನಲ್ಲಿ ಎಷ್ಟು ಥಿಯೇಟರ್‌ಗಳು?

ಫಸ್ಟ್ ಲಿಸ್ಟ್‌ನಲ್ಲಿ ಎಷ್ಟು ಥಿಯೇಟರ್‌ಗಳು?

'ಜೇಮ್ಸ್' ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಮಲ್ಟಿಪ್ಲೆಕ್ಸ್‌ಗಳನ್ನು ಹೊರಪಡಿಸಿ, ಕೇವಲ ಸಿಂಗಲ್ ಸ್ಕ್ರೀನ್‌ನಲ್ಲಿಯೇ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರು ಸೇರಿದಂತೆ ಹೊಸಪೇಟೆ, ಬಳ್ಳಾರಿಯಿಂದ ಹಿಡಿದು ಚಿತ್ರದುರ್ಗ, ಉತ್ತರ ಕರ್ನಾಟಕ, ಶಿವಮೊಗ್ಗ, ಸೇರಿದಂತೆ ತಾಲೂಕು ಸೆಂಟರ್‌ಗಳಲ್ಲೂ 'ಜೇಮ್ಸ್' ರಿಲೀಸ್ ಆಗಲಿದೆ. ರಿಲೀಸ್‌ಗೆ ಇನ್ನು 11 ದಿನಗಳು ಇದ್ದು, ಥಿಯೇಟರ್‌ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಯುರೋಪ್‌ನಲ್ಲೂ 'ಜೇಮ್ಸ್' ರಿಲೀಸ್

ಯುರೋಪ್‌ನಲ್ಲೂ 'ಜೇಮ್ಸ್' ರಿಲೀಸ್

'ಜೇಮ್ಸ್' ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೆಸಿದೆ. ಸದ್ಯ ಯುರೋಪ್‌ನಲ್ಲಿ ಬಿಡುಗಡೆಯಾಗುತ್ತಿರುವ ದೇಶ ಹಾಗೂ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಆಸ್ಟ್ರಿಯಾ, ಬೆಲ್ಜಿಯಂ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಇಟಲಿ, ಲಕ್ಸೆಂಬರ್ಗ್, ನೆದರ್‌ಲ್ಯಾಂಡ್, ನಾರ್ವೆ, ಪೊಲ್ಯಾಂಡ್ ಹಾಗೂ ಸ್ವೀಡನ್‌ನಲ್ಲಿ ರಿಲೀಸ್ ಆಗಲಿದೆ. ಬರೀ ಯುರೋಪ್‌ನಲ್ಲಿಯೇ 33 ಚಿತ್ರಮಂದಿರಗಳು ಮೊದಲ ಹಂತದ ಪಟ್ಟಿಯಲ್ಲಿವೆ. ಇನ್ನು ಹೆಚ್ಚಾಗುವ ಸಾಧ್ಯತೆಯಿದ್ದು, ಯುಎಸ್‌ಎ, ಆಸ್ಟ್ರೇಲಿಯಾ ಸೇರಿದಂತೆ ಹಲವೆಡೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಥಿಯೇಟರ್‌ಗಳ ಸಂಖ್ಯೆಯಲ್ಲೂ 'ಜೇಮ್ಸ್' ರೆಕಾರ್ಡ್

ಥಿಯೇಟರ್‌ಗಳ ಸಂಖ್ಯೆಯಲ್ಲೂ 'ಜೇಮ್ಸ್' ರೆಕಾರ್ಡ್

'ಜೇಮ್ಸ್' ಸಿನಿಮಾ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಕರ್ನಾಟಕದಲ್ಲಿ ಬಹುತೇಕ 80ರಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕನ್ನಡದ ಯಾವುದೇ ಸಿನಿಮಾ ಬಿಡುಗಡೆಯಾಗದಷ್ಟು ಥಿಯೇಟರ್‌ಗಳಲ್ಲಿ 'ಜೇಮ್ಸ್' ರಿಲೀಸ್ ಆಗುವ ಸಾಧ್ಯತೆಯಿದೆ. ಅದಕ್ಕಾಗಿ ಇಡೀ ಟೀಮ್ ಶತಪ್ರಯತ್ನ ಮಾಡುತ್ತಿದೆ. ಮೊದಲ ಹಂತದಲ್ಲಿ 130ಕ್ಕೂ ಅಧಿಕ ಚಿತ್ರಮಂದಿರಗಳಿದ್ದು, ಇದರಲ್ಲಿ ಮಲ್ಟಿಪ್ಲೆಕ್ಸ್ ಸೇರಿಕೊಂಡಿಲ್ಲ. ಇವೆಲ್ಲವೂ ಸೇರಿದರೆ ಸುಮಾರು 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಮೊದಲ ದಿನ ಪ್ರದರ್ಶನ ಕಾಣುತ್ತೆ ಎನ್ನುತ್ತಿದೆ ಆಪ್ತ ಮೂಲಗಳು. ಮಾರ್ಚ್ 16 ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತೆ ಅನ್ನುವುದು ಗೊತ್ತಾಗಲಿದೆ.

'ಜೇಮ್ಸ್' ಸಿನಿಮಾಗೆ ಪೈಪೋಟಿ ನೀಡೋರಿಲ್ಲ

'ಜೇಮ್ಸ್' ಸಿನಿಮಾಗೆ ಪೈಪೋಟಿ ನೀಡೋರಿಲ್ಲ

'ಜೇಮ್ಸ್' ಸಿನಿಮಾ ಬಿಡುಗಡೆಗೆ ಒಂದು ವಾರ ಮುನ್ನ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಬಿಡುಗಡೆಯಾಗುತ್ತಿದೆ. 'ಜೇಮ್ಸ್' ತೆರೆಕಂಡ ಒಂದು ವಾರದ ಬಳಿಕ ರಾಜಮೌಳಿ ನಿರ್ದೇಶನದ RRR ರಿಲೀಸ್ ಆಗುತ್ತಿದೆ. ಹೀಗಾಗಿ ಎರಡು ದೊಡ್ಡ ಸಿನಿಮಾ 'ಜೇಮ್ಸ್' ಅಕ್ಕಪಕ್ಕನೇ ಬಿಡುಗಡೆಯಾದರೂ, ಒಟ್ಟಿಗೆ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಮೊದಲ ವಾರ 'ಜೇಮ್ಸ್' ಕನ್ನಡದಲ್ಲಿ ಹೊಸ ದಾಖಲೆಯನ್ನು ಬರೆಯಲಿದೆ. ಇಡೀ ಸ್ಯಾಂಡಲ್‌ವುಡ್ 'ಜೇಮ್ಸ್' ಸಿನಿಮಾದ ಬಾಕ್ಸಾಫೀಸ್‌ ಕಲೆಕ್ಷನ್‌ ಮೇಲೆ ಕಣ್ಣಿಟ್ಟಿದೆ.

More from Filmibeat

English summary
Power Star Puneeth Rajkumar Starrer James movie theater list released. Puneeth last movie will be releasing on March 17th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X