ಕರ್ನಾಟಕದಲ್ಲಿ ಅಬ್ಬರಿಸಿದ 'ಕಲ್ಕಿ 2898AD';ಬಾಕ್ಸಾಫೀಸ್ ಕಲೆಕ್ಷನ್ ಏನು? 'ಜೈಲರ್' ದಾಖಲೆ ಮುರಿಯುತ್ತಾ?
ಪರಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ಸದ್ದು ಮಾಡೋದು ಹೊಸ ವಿಷಯವೇನಲ್ಲ. ಆದರೆ, ಆ ಸಿನಿಮಾ ಕನ್ನಡದ ಸೂಪರ್‌ಸ್ಟಾರ್ ಸಿನಿಮಾಗಳ ದಾಖಲೆಯನ್ನು ಬ್ರೇಕ್ ಮಾಡೋದು ಹೊಸ ವಿಷಯ. ಆದರೆ, ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗಳು ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿವೆ. ಅದರಲ್ಲಿ ಇತ್ತೀಚೆಗೆ ತೆರೆಕಂಡಿರೋ 'ಕಲ್ಕಿ 2898AD' ಸಿನಿಮಾ ಕೂಡ ಒಂದು.
'ಕಲ್ಕಿ 2898AD'ಗೂ ಮುನ್ನ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾಗೂ ಇದೇ ರೆಸ್ಪಾನ್ಸ್ ಸಿಕ್ಕಿತ್ತು. ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಸದ್ದು ಉದಾಹರಣೆಗಳಿವೆ. ಆದರೆ, ಪ್ರಭಾಸ್ ಸಿನಿಮಾಗೆ 'ಬಾಹುಬಲಿ' ಬಳಿಕ ದೊಡ್ಡ ಮಟ್ಟಕ್ಕೆ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಬಿಡುಗಡೆಯಾಗಿ 9ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆವರೆಗೂ (ಜುಲೈ 4) ಕಲ್ಕಿ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿದೆ.

'ಕಲ್ಕಿ 2898AD' ಹೀಗೆ ಮುಂದುವರೆದರೆ ಇನ್ನೊಂದು ವಾರದಲ್ಲಿ ಕರ್ನಾಟಕದಲ್ಲಿ 'ಜೈಲರ್' ಕಲೆಕ್ಷನ್ ಅನ್ನು ಬ್ರೇಕ್ ಮಾಡಬಹುದು. ಇನ್ನೇನು ಮತ್ತೊಂದು ವೀಕೆಂಡ್ ಶುರುವಾಗಿದ್ದರಿಂದ ಪ್ರಭಾಸ್, ದೀಪಿಕಾ ಪಡುಕೋಣೆಯ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಎಂಟು ದಿನಗಳ ಕರ್ನಾಟಕದ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.
'ಕಲ್ಕಿ 2898AD' ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಈ ಎಲ್ಲಾ ಭಾಷೆಯ ಸಿನಿಮಾಗಳಿಗೂ ಕರ್ನಾಟಕದಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲಿ ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ 'ಕಲ್ಕಿ' ಕೋಟಿ ಲೆಕ್ಕದಲ್ಲಿ ಕೆಲಕ್ಷನ್ ಮಾಡಿದೆ.

ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ ಅಂತ ದೊಡ್ಡ ತಾರಾಬಳಗವೇ 'ಕಲ್ಕಿ 2898AD' ಸಿನಿಮಾದಲ್ಲಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಕನ್ನಡ ಡಬ್ ವರ್ಷನ್ ಸಿನಿಮಾಗಳು ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಕಲ್ಕಿ ಕೂಡ ಸುಮಾರು 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ನಿನ್ನೆ (ಜುಲೈ 4) ಕನ್ನಡ ವರ್ಷನ್ ಕರ್ನಾಟಕದಲ್ಲಿ ಸುಮಾರು 12 ಲಕ್ಷ ರೂಪಾಯಿ (Nett) ಕಲೆಕ್ಷನ್ ಮಾಡಿದ್ದು, ಒಟ್ಟು ಎಂಟು ದಿನಗಳಲ್ಲಿ 3.24 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಹಾಗೇ 'ಕಲ್ಕಿ 2898AD' ತೆಲುಗು ವರ್ಷನ್‌ಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ (ಜುಲೈ 4) ರಂದು 1 ಕೋಟಿ ರೂಪಾಯಿ (Nett) ಕಲೆಕ್ಷನ್ ಮಾಡಿದೆ. ಈ ಎಂಟು ದಿನಗಳಲ್ಲಿ ತೆಲುಗು ವರ್ಷನ್‌ನಿಂದ 19.52 ಕೋಟಿ ರೂಪಾಯಿಗಳಷ್ಟು ಗಳಿಕೆ ಮಾಡಿದೆ. ಈ ಸಿನಿಮಾ ಕರ್ನಾಟಕದಲ್ಲಿ ಒಟ್ಟು 219 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದು, ಬಾಕ್ಸಾಫೀಸ್‌ನಲ್ಲಿ ಆರ್ಭಟ ಮುಂದುವರೆಸಿದೆ.
ಇನ್ನು ಹಿಂದಿ ಹಾಗೂ ತಮಿಳು ವರ್ಷನ್‌ಗೂ ಕರ್ನಾಟಕದಲ್ಲಿ ರೆಸ್ಪಾನ್ಸ್ ಉತ್ತಮವಾಗಿದೆ. ಎಂಟು ದಿನಗಳಲ್ಲಿ ಹಿಂದಿ ವರ್ಷನ್‌ನಿಂದ 3.62 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇ ತಮಿಳು ವರ್ಷನ್‌ನಿಂದ ರಾಜ್ಯದಲ್ಲಿ 60 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಕರ್ನಾಟಕದ ಬಾಕ್ಸಾಫೀಸ್‌ನಿಂದ 'ಕಲ್ಕಿ 2898AD' ಸಿನಿಮಾ ಒಟ್ಟು 28.28 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದ ಮೂಲಗಳು ಮಾಹಿತಿ ಕೊಟ್ಟಿವೆ. ಈಗ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.


Click it and Unblock the Notifications











