Kalki 2898AD:ವಿಶ್ವದಾದ್ಯಂತ ₹191.5 ಕೋಟಿ, ಕರ್ನಾಟಕದಲ್ಲೂ ಕಲೆಕ್ಷನ್ ಏನು ಕಮ್ಮಿಯಿಲ್ಲ!
'ಕಲ್ಕಿ2898 AD'2024ರಲ್ಲಿ ಅತೀ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಅಂತ ಮೊದಲ ದಿನವೇ ಪ್ರೋವ್ ಮಾಡಿದೆ. 600 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಇದೂವರೆಗೂ ಸೆಟ್ಟೇರಿದ ಮೊದಲ ಬಿಗ್ ಬಜೆಟ್ ಸಿನಿಮಾ ಎನಿಸಿಕೊಂಡಿದೆ. ಈ ಕಾರಣಕ್ಕೆ ಟ್ರೇಡ್ ಎಕ್ಸ್‌ಪರ್ಟ್‌ಗಳ ಕಣ್ಣು ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮೇಲಿತ್ತು. ಹಾಗೇ ಕರ್ನಾಟಕದ ಪ್ರದರ್ಶಕರು ಕೂಡ ಈ ಸಿನಿಮಾ ಮೇಲೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.
ಯಾವುದೇ ಬಿಗ್ ಬಜೆಟ್ ಸಿನಿಮಾಗೆ ಮೊದಲ ದಿನ ಸಿಗುವ ಕಲೆಕ್ಷನ್ ಮೇಲೆ ಅದರ ಯಶಸ್ಸು ನಿಂತಿರುತ್ತೆ. ಫಸ್ಟ್ ಡೇ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದರೆ ಹಾಕಿದ ಬಂಡವಾಳವನ್ನು ಹಿಂಪಡೆಯಬಹುದು. ಸದ್ಯ 'ಕಲ್ಕಿ2898 AD'ಬಾಕ್ಸಾಫೀಸ್ ಕಲೆಕ್ಷನ್ ಇಂಪ್ರೆಸಿವ್ ಆಗಿದೆ. ವಿಶ್ವದಾದ್ಯಂತ ಪ್ರಭಾಸ್ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, 191.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

'ಕಲ್ಕಿ2898 AD' ಭಾರತದಲ್ಲಿಯೇ ಸುಮಾರು 120 ಕೋಟಿ ರೂಪಾಯಿ ಅಧಿಕ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ. ಯಾವುದೇ ಫ್ಯಾನ್ ಇಂಡಿಯಾ ಸಿನಿಮಾ ಬಂದರೂ, ಕರ್ನಾಟಕದ ಮೇಲೂ ಕಣ್ಣಿಟ್ಟಿರುತ್ತೆ. ಕರ್ನಾಟಕದಿಂದಲೂ ದೊಡ್ಡ ಮೊತ್ತ ಪ್ರೊಡಕ್ಷನ್ ಹೌಸ್ ಹೋಗುತ್ತೆ. ಹಾಗಾಗಿ 'ಕಲ್ಕಿ2898 AD' ಸಿನಿಮಾದ ಕರ್ನಾಟಕ ಎಷ್ಟು ಕಲೆಕ್ಷನ್ ಮಾಡಿದೆ ಅನ್ನುವ ಕುತೂಹಲಕ್ಕೀಗ ತೆರೆಬಿದ್ದಿದೆ.
ಕರ್ನಾಟಕದಲ್ಲಿ 'ಕಲ್ಕಿ2898 AD' ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು.
ಸಿನಿಮಾಗಳು ಕನ್ನಡದಲ್ಲೂ ಡಬ್ ಮಾಡಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿವೆ. 'ಜೈಲರ್'ನಿಂದ ಕನ್ನಡ ಡಬ್ ಸಿನಿಮಾಗಳ ಮಾರ್ಕೆಟ್ ಹೆಚ್ಚಾಗುತ್ತಿದೆ. ಸದ್ಯ ಕರ್ನಾಟಕದಲ್ಲಿ ನಾಲ್ಕು ಭಾಷೆಗಳಲ್ಲಿ 'ಕಲ್ಕಿ2898 AD' ಬಿಡುಗಡೆಯಾಗಿದೆ. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ 'ಕಲ್ಕಿ2898 AD' ಗಳಿಸಿದ್ದು ಬರೋಬ್ಬರು 6.7 ಕೋಟಿ ರೂಪಾಯಿ (Nett) ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

ಇದರಲ್ಲಿ ತೆಲುಗು ವರ್ಷನ್ ಅತೀ ಹೆಚ್ಚು ಗಳಿಕೆ ಕಂಡಿದೆ. 219 ಸ್ಕ್ರೀನ್‌ಗಳಿಂದ ತೆಲುಗು ವರ್ಷನ್ ಸುಮಾರು 4.85 ಕೋಟಿ ರೂಪಾಯಿ (Nett) ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಹಾಗೇ ಮೊದಲ ದಿನ ತಮಿಳು ವರ್ಷನ್‌ನಿಂದ 20 ಲಕ್ಷ ರೂಪಾಯಿ (Nett), ಹಿಂದಿ ವರ್ಷನ್‌ನಿಂದ 80 ಲಕ್ಷ ರೂಪಾಯಿ (Nett) ಕಲೆಕ್ಷನ್ ಆಗಿದೆ ಎಂಬ ಲೆಕ್ಕ ಸಿಕ್ಕಿದೆ.
ಇನ್ನು 'ಕಲ್ಕಿ2898 AD' ಸುಮಾರು 100 ಸ್ಕ್ರೀನ್‌ಗಳಲ್ಲಿ ಕನ್ನಡ ವರ್ಷನ್ ರಿಲೀಸ್ ಆಗಿದ್ದು, ಮೊದಲ ದಿನ ಸುಮಾರು 80 ಲಕ್ಷ ರೂಪಾಯಿ (Nett) ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಈ ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮೊದಲ ದಿನವೇ ಕೇವಲ 6.7 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಇನ್ನು ಮೂರು ದಿನಗಳಲ್ಲಿ 25 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸಾಧ್ಯತೆಯಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕಚಾರ ಹಾಕಿದ್ದಾರೆ.


Click it and Unblock the Notifications











