'ಜೇಮ್ಸ್' ಟೀಸರ್ ನೋಡಿ ಮೆಚ್ಚಿದ ಪ್ರಭಾಸ್: ಅಪ್ಪು ಲಕ್ಷಾಂತರ ಅಭಿಮಾನಿಗಳಿಗೆ ಈ ಚಿತ್ರ ವಿಶೇಷ ಎಂದ ಬಾಹುಬಲಿ
ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಟೀಸರ್ ರಿಲೀಸ್ ಆಗಿದೆ. ಬಿಡುಗಡೆಯಾದ 24 ಗಂಟೆಗಳಲ್ಲಿ 'ಜೇಮ್ಸ್' ಟೀಸರ್ ಸಿಕ್ಕಿರುವ ಪ್ರತಿಕ್ರಿಯೆ ಅದ್ಭುತ. ದಾಖಲೆಗಳನ್ನೆಲ್ಲಾ ಒಂದೊಂದಾಗೇ ಅಳಿಸಿ ಹಾಕುತ್ತಾ ಮುನ್ನುಗ್ಗುತ್ತಿದೆ. ಪುನೀತ್ ಅಭಿಮಾನಿಗಳು 'ಜೇಮ್ಸ್' ಟೀಸರ್ ನೋಡಿ ಮತ್ತೆ ಭಾವುಕರಾಗಿದ್ದಾರೆ. ಕೆಲವು ಟೀಸರ್ ಮೆಚ್ಚಿ ಹರ್ಷ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ 'ಜೇಮ್ಸ್' ಟ್ರೆಂಡಿಂಗ್‌ನಲ್ಲಿದೆ.
'ಜೇಮ್ಸ್' ಟೀಸರ್ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂಟ್ರಿ, ಆಕ್ಷನ್, ಮ್ಯಾನರಿಸಂ, ಸ್ಟೈಲ್ ಎಲ್ಲವನ್ನೂ ಪ್ರೇಕ್ಷಕರು ಕಣ್ತುಂಬಿ ಕೊಳ್ಳುತ್ತಿದ್ದಾರೆ. ಇದೇ ವೇಳೆ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ 'ಜೇಮ್ಸ್' ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಜೇಮ್ಸ್ ಟೀಸರ್ ಶೇರ್ ಮಾಡಿ, ಭಾವುಕರಾಗಿದ್ದಾರೆ.

'ಜೇಮ್ಸ್' ಟೀಸರ್ ನೋಡಿ ಪ್ರಭಾಸ್ ಥ್ರಿಲ್
ಇದೊಂದು ಟೀಸರ್‌ಗಾಗಿ ಅಪ್ಪು ಅಭಿಮಾನಿಗಳು ಕಾಯುತ್ತಲೇ ಇದ್ದರು. ತಮ್ಮ ನೆಚ್ಚಿನ ನಟನ ದಿಢೀರ್ ಅಗಲಿಕೆಯನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಂಡಿಲ್ಲ. ಆದರೆ, 'ಜೇಮ್ಸ್' ಟೀಸರ್ ಅವರ ನೋವಿನ ಮಧ್ಯೆ ಸಂಜೀವಿನಿಯಂತೆ ತೆರೆಕಂಡಿದೆ. ಈ ಟೀಸರ್ ನೋಡಿ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಮತ್ತೊಂದು ಖುಷಿ ವಿಷಯವಿದೆ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ 'ಜೇಮ್ಸ್' ಸಿನಿಮಾದ ಟೀಸರ್ ನೋಡಿ ಥ್ರಿಲ್ ಆಗಿದ್ದಾರೆ. ಭಾವುಕರಾಗಿ 'ಜೇಮ್ಸ್' ಟೀಸರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
'ಜೇಮ್ಸ್' ಟೀಸರ್ ನೋಡಿ ಪ್ರಭಾಸ್ ಹೇಳಿದ್ದೇನು?
'ಜೇಮ್ಸ್' ಟೀಸರ್ ನೋಡಿ ಪ್ರಭಾಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಹೀಗಾಗಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್ಪು ಹಾಗೂ ಜೇಮ್ಸ್ ಟೀಸರ್ ಬಗ್ಗೆ ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ. "ಜೇಮ್ಸ್ ಸಿನಿಮಾ ಒಂದು 'ಮಾಸ್ಟರ್ ಪೀಸ್' ಆಗಲು ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂಬುದು ನನಗೆ ಖಾತ್ರಿಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ ಅವರನ್ನು ಮೆಚ್ಚುವ ಲಕ್ಷಾಂತರ ಜನರಿಗೆ ಈ ಚಿತ್ರ ಯಾವಾಗಲೂ ವಿಶೇಷವಾಗಿರುತ್ತದೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ." ಎಂದು ಪ್ರಭಾಸ್ ಜೇಮ್ಸ್ ಟೀಸರ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಜೇಮ್ಸ್' ಕನ್ನಡ ಟೀಸರ್‌ಗೆ 1 ಕೋಟಿ ವೀವ್ಸ್
ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ. 'ಜೇಮ್ಸ್' ಟೀಸರ್‌ನ ಖಡಕ್ ಡೈಲಾಗ್ ಇದು. ಈ ಡೈಲಾಗ್ ಟೀಸರ್‌ನಲ್ಲಿ ನೋಡಿದ್ಮೇಲೆ ನಿಜಕ್ಕೂ ದಾಖಲೆಗಳೆಲ್ಲಾ ಪುಡಿ ಪುಡಿಯಾಗಿವೆ. 24 ಗಂಟೆಗಳಲ್ಲಿ 'ಜೇಮ್ಸ್' ಎರಡು ಹೊಸ ದಾಖಲೆಗಳನ್ನು ಬರೆದಿದೆ. ಒಂದು ದಿನದೊಳಗೆ ಟೀಸರ್‌ಗೆ 1 ಕೋಟ ವೀವ್ಸ್ ಸಿಕ್ಕಿದೆ. ಅಲ್ಲದೆ 5 ಲಕ್ಷದ 30 ಸಾವಿರ ಮಂದಿ ಟೀಸರ್ ಲೈಕ್ ಮಾಡಿದ್ದಾರೆ. ಕನ್ನಡದ ಯಾವುದೇ ಟೀಸರ್‌ಗೂ ಈ ಮಟ್ಟಿಗಿನ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಒಂದೊಂದು ದಾಖಲೆಗಳನ್ನು ಅಳಿಸಿ ಹಾಕುತ್ತಿದೆ.

ಬೇರೆ ಭಾಷೆಯಲ್ಲೂ 'ಜೇಮ್ಸ್'ಗೆ ಸಖತ್ ರೆಸ್ಪಾನ್ಸ್
ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್' ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಹೀಗಾಗಿ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಅಲ್ಲೂ ಬೇರೆ ಭಾಷೆಗಳಲ್ಲೂ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. 'ಜೇಮ್ಸ್' ತೆಲುಗು ಟೀಸರ್‌ಗೆ 2.1 ಮಿಲಿಯನ್ ವೀವ್ಸ್ ಸಿಕ್ಕಿದೆ. 'ಜೇಮ್ಸ್' ತಮಿಳು ಟೀಸರ್ 1.6 ಮಿಲಿಯನ್, 'ಜೇಮ್ಸ್' ಹಿಂದಿ ಟೀಸರ್‌ಗೆ 1.7 ಮಿಲಿಯನ್ ಹಾಗೂ 'ಜೇಮ್ಸ್' ಮಲಯಾಳಂ ಟೀಸರ್ 1.7 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಎಲ್ಲಾ ಭಾಷೆಯಲ್ಲೂ ಸಿನಿಮಾಗೆ ಅದ್ಬುತ ರೆಸ್ಪಾನ್ಸ್ ಸಿಗುತ್ತಿದೆ.


Click it and Unblock the Notifications











