ಕುಂದಾಪುರಕ್ಕೆ ಬಂದ 'ಕಲ್ಕಿ'ಯ ಬುಜ್ಜಿ; ಭೈರವನ ವಾಹನ ಓಡಿಸಿ ರಿಷಬ್ ಶೆಟ್ಟಿ ಥ್ರಿಲ್
'ಕಲ್ಕಿ 2898 AD'ಭಾರತೀಯ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ. 600 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಿನಿಮಾದಲ್ಲಿ ಸ್ಟಾರ್ ಕಾಸ್ಟ್‌ಗಿಂತ ಹೆಚ್ಚು ಕಿಕ್ ಕೊಡುತ್ತಿರುವುದು ಪ್ರಭಾಸ್ ವಾಹನ ಬುಜ್ಜಿ. ಸದ್ಯಕ್ಕೆ ರಿಷಬ್ ಶೆಟ್ಟಿ ಇರುವ ಕುಂದಾಪುರಕ್ಕೆ ಬಂದಿದೆ.
ಬಿಗ್ ಸ್ಟಾರ್ ಕಾಸ್ಟ್ ಇರುವ 'ಕಲ್ಕಿ 2898 AD'ಸಿನಿಮಾಗೆ ತಂಡ ಕೊನೆಯ ಹಂತದ ಪ್ರಚಾರ ಮಾಡುತ್ತಿದೆ. ಇದೇ ಜೂನ್ 27ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಬುಜ್ಜಿ ದಕ್ಷಿಣ ಭಾರತದ ರಾಜ್ಯಗಳನ್ನು ಸುತ್ತುತ್ತಿದೆ. ಆಂಧ್ರ, ತಮಿಳುನಾಡಿನಲ್ಲೆಲ್ಲ ಸುತ್ತಿದ ಬಳಿಕ ಈಗ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದೆ. ರಿಷಬ್ ಶೆಟ್ಟಿ ತಂಗಿರುವ ಕುಂದಾಪುರಕ್ಕೆ ಭೇಟಿ ಕೊಟ್ಟಿದೆ.

ಕುಂದಾಪುರದವರೆಗೂ ಬಂದಿರೋ ಬುಜ್ಜಿಗೆ ರಿಷಬ್ ಶೆಟ್ಟಿ ಅಂಡ್ ತಂಡ ಗ್ರ್ಯಾಂಡ್ ವೆಲ್‌ಕಮ್ ಮಾಡಿದೆ. ರಿಷಬ್ ಶೆಟ್ಟಿ ಕೂಡ ಬುಜ್ಜಿಯೊಳಗೆ ಕೂತು ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು 'ಕಲ್ಕಿ 2898 AD'ಯ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ತನ್ನ ಎಕ್ಸ್ ಖಾತೆಯಲ್ಲಿ ರಿಲೀಸ್ ಮಾಡಿದೆ. ಆ ವಿಡಿಯೋದಲ್ಲಿ ರಿಷಬ್ ಶೆಟ್ಟಿ ಏನು ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಕಲ್ಕಿ 2898 AD' ಬಿಗ್ ಸ್ಟಾರ್‌ಕಾಸ್ಟ್ ಇರುವ ಸಿನಿಮಾ. ಭೈರವನಾಗಿ ಪ್ರಭಾಸ್ ಈ ಸಿನಿಮಾದಲ್ಲಿ ನಟಿಸಿದ್ದರೆ, ಇವರೊಂದಿಗೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಠಾಣಿ ಅಂತಹ ದಿಗ್ಗಜರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಇವರೊಂದಿಗೆ ಈ ಸಿನಿಮಾಗಾಗಿ ವಿಶೇಷವಾಗಿ ಡಿಸೈನ್ ಮಾಡಿರುವ ವಾಹನ ಬುಜ್ಜಿ ಕೂಡ ಪ್ರಮುಖ ಪಾತ್ರದಲ್ಲಿದೆ.
ಬುಜ್ಜಿ ಈಗ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈಗಾಗಲೇ ಅಕ್ಕಿನೇನಿ ನಾಗಚೈತನ್ಯ, ಮಾಜಿ ಫಾರ್ಮುಲಾ ಒನ್ ರೇಸರ್ ನಾರಾಯಣ್ ಕಾರ್ತಿಕೇಯನ್, ಆನಂದ್ ಮಹೀಂದ್ರ ಸೇರಿದಂತೆ ಹಲವರ ಬಿಜ್ಜಿಯನ್ನು ಈಗಾಗಲೇ ಚಲಾವಣೆ ಮಾಡಿದ್ದಾರೆ. ಈಗ ಕುಂದಾಪುರಕ್ಕೆ ಬಂದಿದ್ದು, ರಿಷಬ್ ಶೆಟ್ಟಿ ಕೂಡ ಬುಜ್ಜಿಯನ್ನು ಏರಿ ಸವಾರಿ ಮಾಡಿ ಸಂಭ್ರಮಿಸಿದ್ದಾರೆ.
ಬುಜ್ಜಿಯನ್ನು ಚಲಾಯಿಸಿದ ಬಳಿಕ ರಿಷಬ್ ಶೆಟ್ಟಿ ಫುಲ್ ಥ್ರಿಲ್ ಆಗಿದ್ದಾರೆ. ಬಳಿಕ ಬುಜ್ಜಿಯ ಮೇಲೆ ಕೂತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಭಾಸ್‌ಗೆ ಶುಭವನ್ನು ಹಾರೈಸಿದ್ದಾರೆ. " ಟೀಸರ್‌ನಲ್ಲೇ ಗೊತ್ತಾಗುತ್ತೆ. ಯಾವ ರೇಂಜ್‌ನಲ್ಲಿ ಬುಜ್ಜಿ ಹವಾ ಇದೆ ಅನ್ನೋದು. ಡ್ರೈವ್ ಮಾಡಿದ್ದು ಒಂದು ಅದ್ಭುತ ಅನುಭವ. ಆಲ್ ದಿ ಬೆಸ್ಟ್ ಭೈರವ ಅಂಡ್ ಬುಜ್ಜಿ. ಕಲ್ಕಿ ಜೂನ್ 27ಕ್ಕೆ ರಿಲೀಸ್ ಆಗುತ್ತೆ. ಎಲ್ಲರೂ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಇನ್ನು ರಿಷಬ್ ಶೆಟ್ಟಿ ಕೂಡ 'ಕಾಂತಾರ' ಸಿನಿಮಾದ ಮೇಕಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಕಾಂತಾರ' ಯಶಸ್ಸಿನ ಬಳಿಕ ಪ್ರೀಕ್ವೆಲ್ ಶೂಟಿಂಗ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕುಂದಾಪುರದಲ್ಲಿ ಬೀಡುಬಿಟ್ಟಿದ್ದಾರೆ. ಬಿಡುವಿನ ವೇಳೆ ರಿಷಬ್ ಶೆಟ್ಟಿ 'ಕಲ್ಕಿ 2898 AD'ಯ ಬುಜ್ಜಿಯನ್ನು ಚಲಾಯಸಿ ಎಂಜಾಯ್ ಮಾಡಿದ್ದಾರೆ.


Click it and Unblock the Notifications











