ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್'ದಲ್ಲಿ ಶಿವಣ್ಣ: ರಾಜಮೌಳಿ, ಪೃಥ್ವಿರಾಜ್‌ಗೂ ಧನ್ಯವಾದ ಎಂದಿದ್ದೇಕೆ?

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಲವ್‌ ಸ್ಟೋರಿ ಥಿಯೇಟರ್‌ಗೆ ಲಗ್ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆಅಭಿನಯದ ಸಿನಿಮಾ ಮಾರ್ಚ್ 11ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. 'ರಾಧೆ ಶ್ಯಾಮ್' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಗ್ರ್ಯಾಂಡ್ ರಿಲೀಸ್‌ಗೆ ಭರ್ಜರಿ ತಯಾರಿ ನಡೆಯುತ್ತಿದೆ. ತೆಲುಗು, ಕನ್ನಡ, ಮಲಯಾಳಂ ಭಾಷೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

'ರಾಧೆ ಶ್ಯಾಮ್' ಸಿನಿಮಾ ಬಿಡುಗಡೆಗೆ ಸನಿಹದಲ್ಲಿರುವಾಗಲೇ ಹೊಸ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ತಂಡಕ್ಕೆ ದಕ್ಷಿಣ್ ಭಾರತದ ದಿಗ್ಗಜರನ್ನು ಸೇರಿಸಿಕೊಳ್ಳುತ್ತಿದೆ. ಕನ್ನಡ ಚಿತ್ರರಂಗದಿಂದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ರಾಧೆ ಶ್ಯಾಮ್' ತಂಡ ಸೇರಿಕೊಂಡಿದ್ದಾರೆ. ಹಾಗಂತ ಶಿವಣ್ಣ ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿಲ್ಲ. ಬದಲಾಗಿ ಚಿತ್ರದ ಕನ್ನಡ ಅವತರಣಿಕೆಗೆ ಶಿವರಾಜ್‌ಕುಮಾರ್ ಧ್ವನಿ ನೀಡಿದ್ದಾರೆ.

 ರಾಧೆ ಶ್ಯಾಮ್ ಚಿತ್ರಕ್ಕೆ ಶಿವಣ್ಣ ಧ್ವನಿ

ರಾಧೆ ಶ್ಯಾಮ್ ಚಿತ್ರಕ್ಕೆ ಶಿವಣ್ಣ ಧ್ವನಿ

ರಾಧೆ ಶ್ಯಾಮ್ ರಿಲೀಸ್‌ ಸಮೀಪಿಸುತ್ತಿದ್ದಂತೆ ಚಿತ್ರತಂಡ ಮತ್ತಷ್ಟು ಆಕ್ಟೀವ್ ಆಗಿದೆ. ದಕ್ಷಿಣ ಭಾರತದಲ್ಲಿ ಆಯಾ ಭಾಷೆಯಲ್ಲಿಯೇ ಪ್ರೇಕ್ಷಕರನ್ನು ಸೆಳೆಯಲು ಪ್ರಭಾಸ್ ಮತ್ತು ಅವರ ತಂಡ ಹರಸಾಹಸ ಪಡುತ್ತಿದೆ. ಇದರ ಮೊದಲ ಹೆಜ್ಜೆಯಾಗಿ, 'ರಾಧೆ ಶ್ಯಾಮ್' ಕನ್ನಡ ಅವತರಣಿಕೆಗೆ ಶಿವರಾಜ್‌ಕುಮಾರ್ ಬಳಿ ಧ್ವನಿ ಪಡೆದುಕೊಳ್ಳಲಾಗಿದೆ. ಈ ವಿಷಯವನ್ನು ರಾಧೆ ಶ್ಯಾಮ್ ಚಿತ್ರದ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಅಧಿಕೃತವಾಗಿ ತನ್ನ ಟ್ವೀಟ್ ಖಾತೆಯಲ್ಲಿ ಹೇಳಿಕೊಂಡಿದೆ.

ರಾಧೆ ಶ್ಯಾಮ್'ಗೆ ಶಿವಣ್ಣ ನಿರೂಪಣೆ

ರಾಧೆ ಶ್ಯಾಮ್'ಗೆ ಶಿವಣ್ಣ ನಿರೂಪಣೆ

ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡ ಭಾಷೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಡಬ್ ಆದ ಸಿನಿಮಾವನ್ನು ಬಿಡುಗಡೆ ಮಾಡುತ್ತಿವೆ. ಅದರಂತೆ ರಾಧೆ ಶ್ಯಾಮ್ ತಂಡ ಕೂಡ ಕನ್ನಡದಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಹೀಗಾಗಿ ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್‌ಗೆ ನಿರೂಪಣೆ ಮಾಡುವಂತೆ ಕೇಳಿಕೊಂಡಿದ್ದರು. ಅದರಂತೆ ಶಿವಣ್ಣ ಕೂಡ ಚಿತ್ರಕ್ಕೆ ಧ್ವನಿ ನೀಡಿದ್ದು, ಚಿತ್ರತಂಡ ಧನ್ಯವಾದ ಹೇಳಿದೆ.

ರಾಜಮೌಳಿ, ಪ್ರಥ್ವಿರಾಜ್ ನಿರೂಪಣೆ

ಕನ್ನಡ, ತಮಿಳು, ಮಲಯಾಳಂ, ಹಿಂದಿ ಈ ನಾಲ್ಕು ಭಾಷೆಗಳಿಗೂ 'ರಾಧೆ ಶ್ಯಾಮ್' ಸಿನಿಮಾ ಡಬ್​ ಆಗಿ ರಿಲೀಸ್​ ಆಗುತ್ತಿದೆ. ಒಂದೊಂದು ಭಾಷೆಯಲ್ಲೂ ಒಬ್ಬೊಬ್ಬ ದಿಗ್ಗಜರೊಂದಿಗೆ ಸಿನಿಮಾ ನಿರೂಪಣೆ ಮಾಡಿಸಲಾಗಿದೆ. ಇತ್ತೀಚೆಗೆ ಹಿಂದಿ ವರ್ಷನ್‌ಗೆ ಅಮಿತಾಬ್ ಬಚ್ಚನ್ ನಿರೂಪಣೆ ಮಾಡಿದ್ದರು. 'ರಾಧೆ ಶ್ಯಾಮ್​' ಚಿತ್ರದ ಕನ್ನಡ ಅವತರಣಿಕೆಗೆ​ ಶಿವಣ್ಣ ನಿರೂಪಣೆ ಮಾಡಿದ್ದರೆ, ತೆಲುಗಿಗೆ ರಾಜಮೌಳಿ ಹಾಗೂ ಮಲಯಾಳಂ ವರ್ಷನ್‌ಗೆ ಪೃಥ್ವಿರಾಜ್​ ಸುಕುಮಾರನ್​ ನಿರೂಪಣೆ ಮಾಡಿದ್ದಾರೆ. ಹೀಗಾಗಿ ನಿರ್ಮಾಣ ಸಂಸ್ಥೆ 'ನಿಮ್ಮ ಧ್ವನಿಯಿಂದ ಈ ರೊಮ್ಯಾಂಟಿಕ್​ ಸ್ಟೋರಿಯನ್ನು ಮತ್ತಷ್ಟು ಮಧುರವಾಗಿಸಿದ್ದಕ್ಕೆ ಧನ್ಯವಾದಗಳು' ಎಂದು ಶಿವಣ್ಣ​, ರಾಜಮೌಳಿ ಹಾಗೂ ಪೃಥ್ವಿರಾಜ್​ ಸುಕುಮಾರನ್‌ಗೆ 'ರಾಧೆ ಶ್ಯಾಮ್​' ತಂಡ ಟ್ವೀಟ್​ ಮೂಲಕ ತಿಳಿಸಿದೆ.

ಮಾರ್ಚ್ 11ಕ್ಕೆ 'ರಾಧೆ ಶ್ಯಾಮ್'

ಮಾರ್ಚ್ 11ಕ್ಕೆ 'ರಾಧೆ ಶ್ಯಾಮ್'

ಬಾಹುಬಲಿ, ಸಾಹೋ ಅಂತ ಪವರ್‌ಫುಲ್ ಸಿನಿಮಾಗಳಲ್ಲಿ ನಟಿಸಿದ್ದ ಪ್ರಭಾಸ್, ರೊಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಹಿಂದಿ ಭಾಷೆಗೆ ಬೇರೆ ಹಾಡುಗಳು ಹಾಗೂ ದಕ್ಷಿಣ ಭಾರತದ ಭಾಷೆಗಳಿಗೆ ಬೇರೆ ಹಾಡುಗಳನ್ನು ರಿಲೀಸ್ ಮಾಡಲಾಗಿದೆ. ಚಿತ್ರದ ಟೀಸರ್, ಟ್ರೈಲರ್‌ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಮಾರ್ಚ್ 11ರಂದು ವಿಶ್ವದಾದ್ಯಂತ 'ರಾಧೆ ಶ್ಯಾಮ್' ರಿಲೀಸ್ ಆಗುತ್ತಿದ್ದು, 'ಬಾಹುಬಲಿ', 'ಸಾಹೋ' ಚಿತ್ರದಂತೆಯೇ ಒಪನಿಂಗ್ ಪಡೆದುಕೊಂಡರೆ, ರೊಮ್ಯಾಂಟಿಕ್ ಸಿನಿಮಾಗಳೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲು ದಾರಿ ಮಾಡಿ ಕೊಡುತ್ತದೆ.

More from Filmibeat

English summary
Prabhas Starrer Radhe Shyam team thank shivarajkumar rajamouli prithviraj for voice over for movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X