600 ವರ್ಷಗಳ ಹಿಂದಿನ ಕಥೆ.. ರಾತ್ರಿ ಕನಸು.. ವಿಲಕ್ಷಣ ದೃಶ್ಯ: ಭಯ ಬೀಳಿಸುತ್ತಿದೆ ಪ್ರಭುದೇವ 'ವುಲ್ಫ್'!
ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಯಾವುದಾದರೂ ಒಂದು ಕ್ಷೇತ್ರದಲ್ಲಿ ಬ್ಯುಸಿಯಾಗಿರುತ್ತಾರೆ. ಯಾವುದಾದರೂ ಒಂದು ಸಿನಿಮಾದಲ್ಲಿ ನಟಿಸುತ್ತಿರುತ್ತಾರೆ. ಇಲ್ಲಾ ಯಾವುದಾದರೂ ಸಿನಿಮಾಗೆ ಕೊರಿಯೋಗ್ರಾಫಿ ಮಾಡುತ್ತಾರೆ. ಇಲ್ಲಾ ನಿರ್ದೇಶನಕ್ಕೆ ಇಳಿದು ಬಿಡುತ್ತಾರೆ.
ಸದ್ಯ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ನಟಿಸುವ ಮೂಡಿನಲ್ಲಿ ಇದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದು ಮತ್ತೆ ಆಕ್ಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾ ತಮಿಳಿನಲ್ಲಷ್ಟೇ ಅಲ್ಲದೆ, ಕನ್ನಡದಲ್ಲೂ ರಿಲೀಸ್ ಆಗುತ್ತಿರೋದು ವಿಶೇಷ.

ಪ್ರಭುದೇವ ಈಗಾಗಲೇ ಒಪ್ಪಿಕೊಂಡಿರುವ ಎರಡು ಸಿನಿಮಾಗಳು ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಒಂದು 'ಕರಟಕ ದಮನಕ'. ಮತ್ತೊಂದು 'ವುಲ್ಫ್'. ಎರಡೂ ಸಿನಿಮಾಗಳಿಗೂ ನಿರ್ಮಾಪಕರು ಕನ್ನಡದವರೇ ಅನ್ನೋದು ಮತ್ತೊಂದು ವಿಶೇಷ. ಸದ್ಯ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿರುವ 'ವುಲ್ಫ್' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಿನಿಪ್ರಿಯರನ್ನು ಬೆಚ್ಚಿಬೀಳಿಸಿದೆ. ಹಾಗಿದ್ದರೆ, ಪ್ರಭುದೇವ ನಟಿಸಿದ 'ವುಲ್ಫ್' ಸಿನಿಮಾದ ಕಥೆಯೇನು? ಬೆಚ್ಚಿಬೀಳಿಸುತ್ತಿರೋದ್ಯಾಕೆ? ತಿಳಿಯಲು ಮುಂದೆ ಓದಿ.
'ವುಲ್ಫ್' ಸೈಕಾಲಜಿಕಲ್ ಥ್ರಿಲ್ಲರ್
ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಸದ್ಯ ಆಕ್ಟಿಂಗ್ ಮೂಡಿಗೆ ಜಾರಿದ್ದಾರೆ. 50ನೇ ವಯಸ್ಸಿನಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡಿರುವ ನಟ, ವಿಶಿಷ್ಟ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೊಂದು 'ವುಲ್ಫ್'. ಈ ಸಿನಿಮಾವನ್ನು ಕನ್ನಡದ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಇದೊಂದು ಪಕ್ಕಾ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಅಲ್ಲದೆ ಈ ಕಥೆಗೆ ಸುಮಾರು 600 ವರ್ಷಗಳ ಹಿಂದಿನ ಲಿಂಕ್ ಇದ್ದು, ಇದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.
ಈ ಸಿನಿಮಾದಲ್ಲಿ ಪ್ರಭುದೇವ ಖೈದಿ?
'ವುಲ್ಫ್' ಸಿನಿಮಾದಲ್ಲಿ ಟೀಸರ್ ಸಿನಿ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದೆ. ಇದೊಂದು ವಿಶಿಷ್ಠ ಸಿನಿಮಾ ಆಗಿರುವುದರಿಂದ ಪ್ರಭುದೇವ ಪಾತ್ರ ಕೂಡ ಗಮನ ಸೆಳೆಯುತ್ತಿದೆ. ಅಂದ್ಹಾಗೆ, 'ವುಲ್ಫ್' ಪ್ರಭುದೇವ ನಟಿಸುತ್ತಿರುವ 60ನೇ ಸಿನಿಮಾ. ಇದರಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಖೈದಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಮತ್ತೊಂದು ಶೇಡ್‌ನಲ್ಲಿ ಪ್ರಭುದೇವ ಗಮನ ಸೆಳೆಯಲಿದ್ದಾರೆ. ವಿನೂ ವೆಂಕಟೇಶ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

600 ವರ್ಷಗಳ ಹಿಂದಿನ ಕಥೆಗೆ ಲಿಂಕ್?
'ವುಲ್ಫ್' ಟೀಸರ್ ನೋಡಿದವರಿಗೆ ಇದೊಂದು ಸಾಮಾನ್ಯ ಕಥೆಯಲ್ಲ ಅನ್ನೋದು ಗೊತ್ತಾಗಿದೆ. ಪ್ರಭುದೇವ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರೋದು ಒಂದು ವಿಷಯವಾಗಿದ್ದರೆ, ಮತ್ತೊಂದು ಕಡೆ ಈ ಸಿನಿಮಾ 600 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗುತ್ತೆ ಅನ್ನೋ ಬಗ್ಗೆ ಚಿಕ್ಕದೊಂದು ಹಿಂಟ್ ಅನ್ನು ಟೀಸರ್‌ನಲ್ಲಿ ಕೊಡಲಾಗಿದೆ. ಒಂದ್ಕಡೆ ಖೈದಿಯಾಗಿ ಕಾಣಿಸಿಕೊಂಡರೆ, ಮತ್ತೊಂದು ಕಡೆ ಚಾರ್ಮಿಂಗ್ ವ್ಯಕ್ತಿಯಾಗಿ ಎದುರಾಗುತ್ತಾರೆ. ಪ್ರಭುದೇವ
ಜೊತೆ ರೈ ಲಕ್ಷ್ಮಿ, ಅನಸೂಯ ಭಾರದ್ವಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'ವುಲ್ಫ್'ನಲ್ಲಿ ವಿಜಯ್ ಸೇತುಪತಿ
'ವುಲ್ಫ್' ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗೆಯಾಗಿತ್ತಿದೆ. ತಮಿಳು,ಕನ್ನಡ,ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯ ಸಿನಿಮಾದ ಬಹುತೇಕ ಕೆಲಸ ಮುಗಿದಿದ್ದು, ಆಗಸ್ಟ್ 3 ರಂದು ಸಿನಿಮಾ ಟೀಸರ್ ರಿಲೀಸ್ ಆಗಿದೆ. ಇದೇ ಆಗಸ್ಟ್ 16ರಂದು ಸಂದೇಶ್ ನಾಗರಾಜ್ ಹುಟ್ಟುಹಬ್ಬವಿರುವುದರಿಂದ ಅಂದು ವಿಜಯ್ ಸೇತುಪತಿ ಹಾಡಿರುವ ಲಿರಿಕಲ್ ಸಾಂಗ್ ಅನ್ನು ರಿಲೀಸ್ ಮಾಡಲು ಮುಂದಾಗಿದೆ.


Click it and Unblock the Notifications











