"ಯೋಗರಾಜ್ ಭಟ್ರು ಹೆಂಡತಿ ತರ..ಬಿಡೋಕೂ ಆಗಲ್ಲ..ಜೊತೆಗೆ ಇರೋಕೂ ಆಗಲ್ಲ"- ನಟ ಪ್ರಭುದೇವ

'ಕಾಟೇರ'ದಂತಹ ಸಕ್ಸಸ್ ಕೊಟ್ಟಿರೋ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಮತ್ತೊಂದು ಸಿನಿಮಾ ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದುವೇ 'ಕರಟಕ ದಮನಕ'. ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಜಂಟಿಯಾಗಿ ಇದೇ ಮೊದಲ ಬಾರಿ ನಟಿಸಿರುವ ಈ ಸಿನಿಮಾದ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ.

ಯೋಗರಾಜ್ ಭಟ್ ನಿರ್ದೇಶಿಸಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಯೋಗರಾಜ್ ಭಟ್, ರಾಕ್‌ಲೈನ್ ವೆಂಕಟೇಶ್, ಶಿವರಾಜ್‌ಕುಮಾರ್, ಪ್ರಭುದೇವದಂತಹ ದಿಗ್ಗಜರು ಸೇರಿರುವ 'ಕರಟಕ ದಮನಕ' ಪ್ರಚಾರ ಆರಂಭಿಸಿದೆ. ಈ ಸಿನಿಮಾ ತಂಡ ಒಂದು ಸಾಂಗ್ ರಿಲೀಸ್ ಮಾಡಲಾಗಿದೆ. ಈ ವೇಳೆ ಪ್ರಭುದೇವ ಹಾಗೂ ಶಿವಣ್ಣ ಇಬ್ಬರೂ ಯೋಗರಾಜ್‌ ಭಟ್ ಕಾಲೆಳೆದಿದ್ದಾರೆ.

 Prabhudeva said Yogaraj Bhat is like wife in Karataka Damanaka movie song release

ನಿರ್ದೇಶಕ ಯೋಗರಾಜ್ ಭಟ್ ಹೆಂಡತಿ ಇದ್ದಂಗೆ ಎಂದು ವೇದಿಕೆ ಮೇಲೆ ಕಾಲೆಳೆದಿದ್ದಾರೆ. ಇಡೀ ಸಿನಿಮಾ ಮುಗಿಸುವುದು ಕಷ್ಟ ಅಂತ ಅನಿಸಿತ್ತು. ಆದ್ರೀಗ ಸಿನಿಮಾ ಮುಗಿದೇ ಬಿಡ್ತಲ್ಲ ಅಂತ ಅನಿಸುತ್ತಿದೆ. ಜಾಲಿ ಮಾಡಿಕೊಳ್ಳುತ್ತಾ ಸಿನಿಮಾ ಮಾಡಿದ್ದೇನೆ ಎಂದು ಪ್ರಭುದೇವ ಹೇಳಿದ್ದಾರೆ. ಇದೇ ವೇಳೆ ಶಿವಣ್ಣನ ಸರಳತೆ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ.

"ಈ ಸಿನಿಮಾದಲ್ಲಿ ಹೇಗೆ ನಟನೆ ಮಾಡುತ್ತೇನೆ ಅನ್ನೋದು ಗೊತ್ತಿಲ್ಲ. ಆದರೆ, ಶಿವಣ್ಣ ಸರ್ ಕೈಯಲ್ಲಿ ಒಳ್ಳೆಯ ಹುಡುಗ ಅಂತ ಅನಿಸಿಕೊಳ್ಳಬೇಕು ಅಂತಿತ್ತು. ಫಸ್ಟ್ ಶೆಡ್ಯೂಲ್ ಮುಗಿದಿತ್ತು. ಎರಡನೇ ಶೆಡ್ಯೂಲ್ ಶುರುವಾಗಿತ್ತು. ಆಗ ಫೈಟ್ ಮಾಡ್ತಿದ್ರು. ಏನೋ ಕೇಳಬೇಕು ಸಾರ್ ಅಂತ ಅಂದೆ. ಏನು ಪ್ರಭು ಅಂದ್ರು. ನೀವು ಹೆಂಗೆ ಸಾರ್ ಇಷ್ಟು ಒಳ್ಳೆಯವರಾಗಿದ್ದೀರಿ ಅಂದೆ. ಅವರು ಹೇಳಿದ್ರು. ನಂಗೆ ಬೆಳೆಸಿದ್ದೇ ಹಂಗೆ ಪ್ರಭು. ನನ್ನನ್ನು ಸ್ಟಾರ್ ಮಗ ಅಂತ ಬೆಳೆಸಿಲ್ಲ. ಅವರನ್ನು ನೋಡಿದಾಗ ಇದು ಹೆಂಗೆ ಸಾಧ್ಯ ಅಂತ ಅನಿಸುತ್ತೆ." ಎಂದು ಪ್ರಭುದೇವ ವೇದಿಕೆ ಮೇಲೆ ಶಿವಣ್ಣನ ಬಗ್ಗೆ ಮಾತಾಡಿದ್ದಾರೆ.

 Prabhudeva said Yogaraj Bhat is like wife in Karataka Damanaka movie song release

ಇದೇ ವೇದಿಕೆ ಮೇಲೆ ಯೋಗರಾಜ್‌ ರಾಜ್ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. "ಯೋಗರಾಜ್ ಭಟ್ಟರು ಹೆಂಡತಿ ತರ ಬಿಡುವುದಕ್ಕೂ ಆಗಲ್ಲ. ಜೊತೆಗೆ ಇರುವುದಕ್ಕೂ ಆಗಲ್ಲ. ಫೈನಲ್ ಆಗಿ ಇರಬೇಕಲ್ಲ. ಆದರೆ, ಕರಟಕ ದಮನಕ ಸ್ಕ್ರೀನ್‌ನಲ್ಲಿ ನಾವು. ಸ್ಕ್ರೀನ್ ಹಿಂದೆ ಕರಟಕ ದಮನಕ ಅವರಿಬ್ಬರೇ. ಎಂಥಾ ಬ್ರೈನ್. ಸ್ವಲ್ಪ ಕಷ್ಟನೇ ಸಿನಿಮಾ ಮಾಡೋದು. ಆದರೆ, ಮೊದಲನೇ ಸೀನ್‌ನಿಂದ ಕೊನೆಯ ಸೀನ್‌ವರೆಗೂ ಅದೇ ಫ್ಯಾಷನ್ ಇಟ್ಟುಕೊಂಡಿದ್ದಾರೆ." ಎಂದು ಪ್ರಭುದೇವ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಹಾಗೇ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬಗ್ಗೆನೂ ತಮಾಷೆಯಾಗಿ ಮಾತಾಡಿದ್ದಾರೆ."ರಾಕ್‌ಲೈನ್ ವೆಂಕಟೇಶ್ ನೋಡುವುದಕ್ಕೆ ಬಾಡಿ ಬಿಲ್ಡರ್. ಆದರೆ ಸಾಫ್ಟ್ ಮನುಷ್ಯ. ನಮ್ಮಿಬ್ಬರನ್ನು ಕಂಟ್ರೋಲ್ ಮಾಡುವುದು ತುಂಬಾನೇ ಸುಲಭ. ಡೈರೆಕ್ಟರ್ ಅನ್ನು ಕಂಟ್ರೋಲ್ ಮಾಡಿ ಪಿಕ್ಚರ್ ಮುಗಿಸಿದ್ರಲ್ಲ. ಅವರು ಗ್ರೇಟ್. ಅವರು ಈ ಸಿನಿಮಾದಲ್ಲಿ ಆಕ್ಟಿಂಗ್ ಮಾಡುತ್ತಿದ್ದರು. ಟೆನ್ಷನ್‌ನಲ್ಲಿ ಇದ್ದರು." ಎಂದು ರಾಕ್‌ಲೈನ್ ಬಗ್ಗೆ ಹೇಳಿದ್ದಾರೆ.

More from Filmibeat

English summary
Prabhudeva about Yogaraj Bhat in Karataka Damanaka song release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X