Prajwal Devaraj: ಮದ್ವೆಯಾಗಿ 8 ವರ್ಷ.. ಗುಡ್ ನ್ಯೂಸ್ ಕೊಡೋದ್ಯಾವಾಗ ಪ್ರಜ್ವಲ್? ಡೈನಾಮಿಕ್ ಪ್ರಿನ್ಸ್ ಹೇಳಿದ್ದೇನು?
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಚ್ಚ ಹೊಸ ಸಿನಿಮಾ ರಿಲೀಸ್ ಆಗಿದೆ. ಇದೂವರೆಗೂ ಪ್ರಜ್ವಲ್ ಇಂತಹ ಪ್ರಯೋಗಾತ್ಮಕ ಸಿನಿಮಾದಲ್ಲಿ ನಟಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಈಗ ಮೇಘನಾ ರಾಜ್ ಕಮ್ ಬ್ಯಾಕ್ ಮಾಡಿರುವ 'ತತ್ಸಮ ತದ್ಬವ' ಸಿನಿಮಾದಲ್ಲಿ ವಿಶಿಷ್ಠವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನೊಂದು ಕಡೆ ಪತ್ನಿ ರಾಗಿಣಿ ಪ್ರಜ್ವಲ್ ಕೂಡ ಪ್ರತಿಭಾವಂತೆ. ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರೋ ರಾಗಿಣಿ ಇತ್ತೀಚೆಗೆ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ವೈಯಕ್ತಿಕ ಜೀವನದ ಜೊತೆ ಜೊತೆಗೆ ವೃತ್ತಿ ಬದುಕಿನಲ್ಲೂ ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ಪ್ರಜ್ವಲ್ ದೇವರಾಜ್ 'ತತ್ಸಮ ತದ್ಬವ' ಸಿನಿಮಾದ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಪ್ರಜ್ವಲ್‌ಗೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಪ್ರಜ್ವಲ್ ಪತ್ನಿ, ಫ್ಯಾಮಿಲಿ, ಮಕ್ಕಳ ಬಗ್ಗೆ ಡೈನಾಮಿಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.
ಯಾವಾಗ ಗುಡ್ ನ್ಯೂಸ್ ಕೊಡ್ತಾರೆ?
ಪ್ರಜ್ವಲ್ ಯಾವಾಗ ಗುಡ್ ನ್ಯೂಸ್ ಕೊಡುತ್ತಾರೆ? ಎಂದು ನಿರೂಪಕರು ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರಜ್ವಲ್ ದೇವರಾಜ್ ತಮಾಷೆಯಾಗಿಯೇ "ನಾನು ಮತ್ತು ರಾಗಿಣಿ ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಅಂತ ಕೇಳುತ್ತಿದ್ದೀರಾ?" ಎಂದು ಮರು ಪ್ರಶ್ನೆ ಮಾಡಿ ಹಾಸ್ಯ ಚಟಾಕಿ ಹಾರಿಸಿದ್ದರು. ಆ ಬಳಿಕ ಅಸಲಿ ಮ್ಯಾಟರ್‌ಗೆ ಬಂದರು. ಪ್ರಜ್ವಲ್ ಹಾಗೂ ರಾಗಿಣಿ ಮದುವೆ 8 ವರ್ಷಗಳಾಗಿದೆ. ಆದರೆ, ಮಗು, ಫ್ಯಾಮಿಲಿ ಪ್ಲಾನಿಂಗ್ ಅಂತ ಬ್ಯುಸಿಯಾಗಿಲ್ಲ. ಆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಜ್ವಲ್ ಹೀಗಂದಿದ್ದಾರೆ.

ಮಗು ಬಗ್ಗೆ ಯಾಕೆ ಯೋಚನೆ ಮಾಡಿಲ್ಲ?
ಕನ್ನಡ ಫಿಲ್ಮೋಲಜಿ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಜ್ವಲ್ ದೇವರಾಜ್ ಸಂದರ್ಶನ ನೀಡಿದ್ದಾರೆ. ಈ ವೇಳೆ ಮದುವೆ ಆಗಿ 8 ವರ್ಷಗಳಾಗಿದ್ದರೂ, ಮಕ್ಕಳ ಬಗ್ಗೆ ಯಾಕೆ ಯೋಚನೆ ಮಾಡಿಲ್ಲ ಅನ್ನೋ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. "ರಾಗಿಣಿನೂ ಶಾನುಭೋಗರ ಮಗಳು ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಅವರಿಗೂ ಒಳ್ಳೊಳ್ಳೆ ಸಿನಿಮಾಗಳು ಬರುತ್ತಿವೆ. ನಿಮಗೆ ಇಷ್ಟ ಇರಲಿ. ಇಲ್ಲದೆ ಇರಲಿ ಮಗು ಆದಾಗ ಅದಕ್ಕೆ ಸಮಯ ಕೊಡಬೇಕಾಗುತ್ತೆ. ಸಮಯ ಕೊಡುವುದಕ್ಕೆ ಆದರೇನೆ ಮಕ್ಕಳನ್ನು ಮಾಡಿಕೊಳ್ಳಬೇಕು. ಒಂದ್ಕಡೆ ನಾನು ಕೆಲಸ ಮಾಡುತ್ತಲೇ ಇರುತ್ತೇನೆ. ಸಡನ್ ಆಗಿ ಅವರ ಕೆಲಸ ನಿಂತು ಹೋಗುತ್ತೆ." ಅದಕ್ಕೆ ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲ ಅನ್ನೋದನ್ನು ಹೇಳಿದ್ದಾರೆ.
ಮಗು, ಫ್ಯಾಮಿಲಿ ಬಗ್ಗೆ ಏನಂತಾರೆ?
"ನಮ್ಮಿಬ್ಬರಿಗೂ ಯಾವಾಗ ಸಮಯ ಕೊಡುವುದಕ್ಕೆ ಆಗುತ್ತೋ ಅದೇ ಸರಿಯಾದ ಸಮಯ ಅಂತ ಅನಿಸುತ್ತೆ. ನಾನೊಬ್ಬ ಗಂಡಸು ಅಂತ ನೀನು ಕೆಲಸ ಬಿಡು. ಮಗು ನೋಡಿಕೋ ನಾನು ಆಚೆ ಹೋಗಿ ಸಂಪಾದನೆ ಮಾಡುತ್ತೇನೆ ಅನ್ನೋದು ಹೋಗಬೇಕು. ಅವರ ಕೆಲಸ, ಸಿನಿಮಾಗಳು ಮುಗಿದಾಗ ನಾವು ಪ್ಲ್ಯಾನ್ ಮಾಡುತ್ತೇವೆ." ಎಂದು ಪ್ರಜ್ವಲ್ ವೈಯಕ್ತಿಕ ವಿಚಾರದ ಬಗ್ಗೆ ಓಪನ್ ಆಗಿ ಹೇಳಿದ್ದಾರೆ.
ಪ್ರಜ್ವಲ್-ರಾಗಿಣಿ ಒಟ್ಟಿಗೆ ಸಿನಿಮಾ ಮಾಡ್ತಾರಾ?
ಇದೇ ಸಂದರ್ಶನದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯೊಂದಿಗೆ ಸಿನಿಮಾ ಮಾಡುವ ಬಗ್ಗೆನೂ ತಮ್ಮ ಫ್ಯಾನ್ಸ್‌ಗೆ ಸುಳಿವು ನೀಡಿದ್ದಾರೆ. ಪ್ರಜ್ವಲ್ ದೇವರಾಜ್ ಶೈಲಿಯ ಸಿನಿಮಾಗಳೇ ಬೇರೆ. ಇವರು ನಟಿಸಿದ ಸಿನಿಮಾಗಳಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಮಾಸ್, ಕ್ಲಾಸ್, ರೊಮ್ಯಾಂಟಿಕ್ ಎಲ್ಲಾ ತರಹದ ಸಿನಿಮಾಗಳಿಗೂ ಪ್ರಜ್ವಲ್ ದೇವರಾಜ್ ಸೂಟ್ ಆಗುವ ನಟ. ಹೀಗಾಗಿ ಈ ಜೋಡಿ ಯಾವಾಗ ಗುಡ್ ನ್ಯೂಸ್ ಕೊಡುತ್ತಾರೆ ಅನ್ನೋದನ್ನು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.


Click it and Unblock the Notifications










