ಉಡುಪಿಯಲ್ಲಿ ಕಂಬಳ ತಂಡದೊಂದಿಗೆ ಒಂದು ತಿಂಗಳು ಬೀಡು ಬಿಟ್ಟ ಪ್ರಜ್ವಲ್ ದೇವರಾಜ್;
ಕರಾವಳಿಯಲ್ಲಿ ನಡೆಯುವ ಕಂಬಳಕ್ಕೆ ಅದರದ್ದೇ ಆದ ಇತಿಹಾಸವಿದೆ. ಪ್ರತಿ ವರ್ಷ ನಡೆಯುವ ಕಂಬಳವನ್ನು ನೋಡುವುದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಈ ವರ್ಷ ಮತ್ತೆ ಕಂಬಳದ ಸೀಸನ್ ಆರಂಭ ಆಗುತ್ತಿದೆ. ವಿಶ್ವಪ್ರಸಿದ್ಧಿಯಾದ ಈ ಕಂಬಳ ಸಿನಿಮಾ ಮಂದಿಗೂ ಬಲು ಇಷ್ಟ. ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ದೇಶಿಸಿದ 'ಕಾಂತಾರ' ಸಿನಿಮಾದಲ್ಲಿಯೂ ಕಂಬಳದ ಸನ್ನಿವೇಶವನ್ನು ಇಡಲಾಗಿತ್ತು.
ಈಗ ಮತ್ತೊಂದು ತಂಡ 'ಕರಾವಳಿ' ಭಾಗದ ಕಥೆಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದೆ. ಅದುವೇ ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಸಿನಿಮಾ 'ಕರಾವಳಿ'. ಇತ್ತೀಚೆಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಆ ಸಿನಿಮಾದ ನಟಿ ಸಂಪದಾ ಕಂಬಳ ಸ್ಪರ್ಧೆಯನ್ನು ಕಣ್ತುಂಬಿಕೊಂಡು ಖುಷಿ ಪಟ್ಟಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಪ್ರಜ್ವಲ್ ದೇವರಾಜ್ ಉಡುಪಿಯಲ್ಲಿ ಬೀಡು ಬಿಟ್ಟಿದ್ದಾರೆ.

ಪ್ರಜ್ವಲ್ ದೇವರಾಜ್ ವೃತ್ತಿ ಬದುಕಿನಲ್ಲಿ ಇದೊಂದು ವಿಭಿನ್ನ ಸಿನಿಮಾವಾಗಿ ನಿಲ್ಲುವ ಸಾಧ್ಯತೆಗಳು ಇವೆ. 'ಅಂಬಿ ನಿಂಗ್ ವಯಸ್ಸಾಯ್ತೋ' ಅಂತಹ ಸಿನಿಮಾವನ್ನು ನಿರ್ದೇಶನ ಮಾಡಿರುವ ಗುರುದತ್ ಗಾಣಿಕ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗ ಸಿನಿಮಾ ಕಂಬಳದ ದೃಶ್ಯವನ್ನು ಚಿತ್ರೀಕರಣ ಮಾಡುವುದಕ್ಕೆ ಉಡುಪಿಯಲ್ಲಿ ಬೀಡು ಬಿಟ್ಟಿದೆ. ಅಷ್ಟಕ್ಕೂ 'ಕರಾವಳಿ' ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಕಥೆ ಏನಿದೆ? ತಿಳಿಯಲು ಮುಂದೆ ಓದಿ.
ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಸಿನಿಮಾದ ಮುಕ್ಕಾಲು ಭಾಗದ ಚಿತ್ರೀಕರಣ ಮುಗಿದೆ. ಕೇವಲ ಒಂದು ಹಂತದ ಚಿತ್ರೀಕರಣವನ್ನು ಉಳಿಸಿಕೊಂಡಿದೆ. ಈಗ ಕಂಬಳದ ದೃಶ್ಯವನ್ನು ಚಿತ್ರೀಕರಣ ಮಾಡುವುದಕ್ಕೆ ಮುಂದಾಗಿದೆ. ಹೀಗಾಗಿ ಬರೋಬ್ಬರಿ ಒಂದು ತಿಂಗಳ ಕಾಲ ಉಡುಪಿಯಲ್ಲಿ ಬೀಡು ಬಿಟ್ಟು ಕಂಬಳದ ಸೀನ್‌ಗಳನ್ನು ತಂಡ ಚಿತ್ರೀಕರಣ ಮಾಡಲಿದೆ. ಹೀಗಾಗಿ ಪ್ರಜ್ವಲ್ ಹಾಗೂ ಚಿತ್ರತಂಡ ಒಂದು ತಿಂಗಳ ಕಾಲ ಉಡುಪಿಯಲ್ಲಿರುತ್ತಾರೆ.
ಇನ್ನುಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಹಾಗೂ ನಾಯಕಿ ಸಂಪದಾ ಕಂಬಳವನ್ನು ವೀಕ್ಷಿಸಿದ್ದಾರೆ. ಇವರೊಂದಿಗೆ ಹಾಸ್ಯ ನಟ ಮಿತ್ರ ಹಾಗೂ ನಿರ್ದೇಶಕ ಗುರುದತ್ ಗಾಣಿಗ ಕೂಡ ಭಾಗವಹಿಸಿದ್ದರು. ಕಂಬಳ ಆಯೋಜಕರ ಜೊತೆಗೂ ಚಿತ್ರತಂಡ ಕೆಲವು ಸಮಯ ಕಳೆದಿದ್ದು, ಕರಾವಳಿ ಭಾಗದಲ್ಲಿ ಕಂಬಳ ಹೇಗೆ ನಡೆಯುತ್ತೆ ಅನ್ನೋದು ಕಣ್ತುಂಬಿಕೊಂಡಿದ್ದಾರೆ.

ಕರಾವಳಿ ಸಿನಿಮಾ ಸಿನಿಮಾ ಬಹುತೇಕ 80 ರಷ್ಟು ಚಿತ್ರೀಕರಣವನ್ನು ಮುಗಿಸಿದೆ. ಪ್ರಜ್ವಲ್, ಸಂಪದಾ ಜೊತೆಗೆ ಪ್ರಮುಖ ಪಾತ್ರಗಳಲ್ಲಿ ಮಿತ್ರಾ, ರಮೇಶ್ ಇಂದಿರಾ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. ಈ ಸಿನಿಮಾ ಕರಾವಳಿ ಭಾಗದಲ್ಲಿ ಮನುಷ್ಯ ಹಾಗೂ ಪ್ರಾಣಿಗಳ ಮಧ್ಯೆ ನಡೆಯುವ ಸಂಘರ್ಷದ ಕಥೆಯನ್ನು ಹೇಳುವುದಕ್ಕೆ ಹೊರಟದ್ದಾರೆ. ಹೀಗಾಗಿ ಇದು ಡೈನಾಮಿಕ್ ಪ್ರಿನ್ಸ್ ವೃತ್ತಿ ಬದುಕಿಗೆ ವಿಶೇಷ ಸಿನಿಮಾ ಆಗಲಿದೆ. ಗುರುದತ್ ಗಾಣಿಗ ಅವರದ್ದೇ ಆದ ಗಾಣಿಗ ಫಿಲ್ಮ್ಸ್ ಹಾಗೂ ವಿಕೆ ಫಿಲ್ಮ್ಸ್ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗುತ್ತಿದೆ. ಮುಂದಿನ ವರ್ಷ ಈ ಸಿನಿಮಾ ಬಿಡುಗಡೆಯಾಗಲಿದೆ.
ಇನ್ನು ಪ್ರಜ್ವಲ್ ದೇವರಾಜ್ ಕೈಯಲ್ಲಿ 'ಕರಾವಳಿ' ಜೊತೆಗೆ ಇನ್ನೂ ಹಲವು ಸಿನಿಮಾಗಳು ಕೈಯಲ್ಲಿವೆ. 'ಮಾಫಿಯಾ' ಹಾಗೂ 'ಗಾನಾ' ಈ ಎರಡೂ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿ ಇವೆ. ಇವುಗಳಲ್ಲಿ 'ಕರಾವಳಿ' ಸಿನಿಮಾ ಮೊದಲು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿವೆ. 2025ರಲ್ಲಿ ಡೈನಾಮಿಕ್ ಪ್ರಿನ್ಸ್ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುವ ಸಾಧ್ಯತೆಗಳು ಇವೆ.


Click it and Unblock the Notifications











