Karavali: ಕನ್ನಡ ಚಿತ್ರರಂಗಕ್ಕೆ ಲಕ್ಕಿ ಡೇಟ್ ಆಗುತ್ತಾ 'ಜುಲೈ 24'; 'ಕರಾವಳಿ'ಗೆ ಸಿಗುತ್ತಾ 'ಸು ಫ್ರಂ ಸೋ' ಸಕ್ಸಸ್
ಒಂದೊಂದು ಚಿತ್ರರಂಗದಲ್ಲೂ ಒಂದೊಂದು ನಂಬಿಕೆಯಿದೆ. ಕೆಲವು ಫಿಲ್ಮ್ ಇಂಡಸ್ಟ್ರಿಗೆ ಕೆಲವೊಂದು ಡೇಟ್ ಲಕ್ಕಿ. ಹೀಗಾಗಿ ಫಿಲ್ಮ್ ಮೇಕರ್ಸ್ ಅದೇ ದಿನ ಸಿನಿಮಾ ರಿಲೀಸ್ ಮಾಡುವುದಕ್ಕೆ ಸ್ಕೆಚ್ ಹಾಕಿ ನಿಂತಿರುತ್ತಾರೆ. ಇದರ ಹಿಂದೆ ಕೇವಲ ನಂಬಿಕೆ ಅಷ್ಟೇ ಅಲ್ಲ, ಲೆಕ್ಕಾಚಾರವೂ ಇರಬಹುದು. ಇನ್ನು ಕೆಲ ಮಂದಿಗೆ ಅವರು ರಿಲೀಸ್ ಮಾಡಿದ ದಿನವೇ ಲಕ್ಕಿ ಡೇಟ್ ಆಗಿರುತ್ತೆ. ಕೊನೆಗೆ ಅದೇ ದಿನವೇ ರಿಲೀಸ್ ಮಾಡುವುದು ಅಭ್ಯಾಸ ಆಗಿ ಹೋಗುತ್ತೆ.
ಸದ್ಯಕ್ಕೆ ಇಂತಹದ್ದೇ ಒಂದು ಉದಾಹರಣೆಯನ್ನು ಇನ್ನು ಕೆಲವು ದಿನಗಳಲ್ಲಿ ನೋಡಬಹುದು. ಕಳೆದ ವರ್ಷ ಸೋಲಿನಿಂದ ಕಂಗೆಟ್ಟಿ ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಬೂಸ್ಟ್‌ನಂತೆ ಬಂದು ಎನರ್ಜಿ ಕೊಟ್ಟಿದ್ದು 'ಸು ಫ್ರಂ ಸೋ'. ರಾಜ್ ಬಿ ಶೆಟ್ಟಿ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿತ್ತು. ಈಗ ಇದೇ ಲಕ್ಕಿ ಡೇಟ್‌ಗೆ ಅಲ್ಲಿನ ಭಾಗದ ಕಥೆಯನ್ನೇ ಹೊತ್ತು ಬಂದಿರುವ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ.

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬಹಳ ದಿನಗಳಿಂದ ರಿಲೀಸ್‌ಗಾಗಿ ಎದುರು ನೋಡುತ್ತಿದ್ದ ಈ ಸಿನಿಮಾ ಇಂದು (ಜೂನ್ 19) ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. 'ಸು ಫ್ರಂ ಸೋ' ತೆರೆಕಂಡ ದಿನಾಂಕದಂದೇ ಥಿಯೇಟರ್‌ಗೆ 'ಕರಾವಳಿ' ಲಗ್ಗೆ ಇಡುತ್ತಿದೆ. ಈ ಕಾರಣಕ್ಕೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚರಿತ್ರೆ ಸೃಷ್ಟಿಸಬಹುದೇ ಎಂದು ಈಗಿಂದಲೇ ಲೆಕ್ಕಾಚಾರಗಳನ್ನು ಹಾಕುವುದಕ್ಕೆ ಶುರು ಮಾಡಿದ್ದಾರೆ.
ಈ ವರ್ಷವಂತೂ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಿನಿಮಾಗೂ ಬಿಗ್ ಸಕ್ಸಸ್ ಅಂತ ಸಿಕ್ಕಿಲ್ಲ. ಹಾಗಂತ ಸಿನಿಮಾ ರಿಲೀಸ್ ಆಗೋದು ಕಮ್ಮಿ ಆಗಿಲ್ಲ. ಪ್ರತಿ ವಾರ ಒಂದಲ್ಲ ಎರಡು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡುತ್ತಲೇ ಇವೆ. ಕಳೆದ ವರ್ಷ ಚಿತ್ರರಂಗದ ಪರಿಸ್ಥಿತಿ ಏನು ಭಿನ್ನವಾಗಿರಲಿಲ್ಲ. ಆ ವೇಳೆ ರಾಜ್ ಬಿ ಶೆಟ್ಟಿ ನಿರ್ಮಿಸಿ, ನಟಿಸಿದ್ದ 'ಸು ಫ್ರಂ ಸೋ' ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿತ್ತು.
ಈ ವರ್ಷನೂ ಅದೇ ಪರಿಸ್ಥಿತಿ ಇದೆ. 'ಸು ಫ್ರಂ ಸೋ' ರಿಲೀಸ್ ಆಗಿದ್ದ ದಿನವೇ (ಜುಲೈ 24)'ಕರಾವಳಿ' ಸಿನಿಮಾ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲೂ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ, ಎರಡೂ ಸಿನಿಮಾಗಳೂ ಕರಾವಳಿ ಭಾಗದ ಕಥೆಗಳೇ ಆಗಿವೆ. ಹೀಗಾಗಿ ಈ ಎರಡೂ ಸಿನಿಮಾಗಳಿಗೂ ಸಾಕಷ್ಟು ಸಾಮ್ಯತೆಯಿದೆ. ಈ ಕಾರಣಕ್ಕೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಅಂತಹದ್ದೊಂದು ಮ್ಯಾಜಿಕ್ ನಡೆಯುತ್ತಾ? ಅಂತ ಸಿನಿಮಾ ಮಂದಿ ಲೆಕ್ಕಾಚಾರ ಹಾಕುತ್ತಿದ್ದಾರೆ.

ಅಂದ್ಹಾಗೆ, 'ಕರಾವಳಿ' ಈಗಾಗಲೇ ಪೋಸ್ಟರ್ ಹಾಗೂ ಟೀಸರ್ ಮೂಲಕ ಗಮನ ಸೆಳೆದಿದೆ. ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಜುಲೈ 24ರಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳಿದ್ದು, ಸಿನಿಮಾ ಮಂದಿಯ ಕಣ್ಣು ಈ ಸಿನಿಮಾ ಮೇಲಿದೆ. 'ಸು ಫ್ರಂ ಸೋ' ಹಾಗೆಯೇ 'ಕರಾವಳಿ' ಸಿನಿಮಾ ಕೂಡ ಚಿತ್ರರಂಗಕ್ಕೆ ಗೇಮ್ ಚೇಂಜರ್ ಆಗಬಹುದೇ? ಲೆಕ್ಕಾಚಾರ ಶುರುವಾಗಿದೆ.
'ಕರಾವಳಿ' ಸಿನಿಮಾದ ಹೆಸರೇ ಹೇಳುವ ಹಾಗೆ ಆ ಭಾಗದ ಸಂಸ್ಕೃತಿ ಹಾಗೂ ಸೊಗಡು ಇದೆ. ಈ ಕಥೆಯಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿದ್ದರೆ, ಇವರಿಗೆ ನಾಯಕಿಯಾಗಿ ಸಂಪದಾ ಇದ್ದಾರೆ. ರಾಜ್ ಬಿ ಶೆಟ್ಟಿ ವಿಶೇಷ ಪಾತ್ರದಲ್ಲಿ ನೋಡಬಹುದು. ಹಾಗೇ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಸೇರಿದಂತೆ ಬಿಗ್ ಸ್ಟಾರ್‌ಕಾಸ್ಟ್ ಇದೆ. 'ಕರಾವಳಿ' ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಸಚಿನ್ ಬಸ್ರೂರು ಸಂಗೀತ ನೀಡಿದ್ದಾರೆ.


Click it and Unblock the Notifications