'ಕರಾವಳಿ' ಶೂಟಿಂಗ್ ಮುಗೀತು; ಅಬ್ಬರಿಸೋಕೆ ಪ್ರಜ್ವಲ್ ದೇವರಾಜ್-ರಾಜ್ ಬಿ ಶೆಟ್ಟಿ ರೆಡಿ
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿಯ 'ಕರಾವಳಿ' ಭಾರಿ ನಿರೀಕ್ಷೆ ಮೂಡಿಸಿರುವ ಕನ್ನಡದ ಮತ್ತೊಂದು ಸಿನಿಮಾ. ಇತ್ತೀಚೆಗೆ ಕರಾವಳಿ ಭಾಗದ ಕಥೆಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿವೆ. ಅಲ್ಲಿಂದಲೇ ಮತ್ತೊಂದು ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಸದ್ಯ ಚಿತ್ರೀಕರಣ ಮುಗಿಸಿರುವ 'ಕರಾವಳಿ' ಸಿನಿಮಾ ತಂಡ ಥಿಯೇಟರ್‌ಗೆ ಲಗ್ಗೆ ಲಗ್ಗೆ ಇಡಲು ಮುಹೂರ್ತ ಹುಡುಕುತ್ತಿದೆ.
'ಕರಾವಳಿ' ಸಿನಿಮಾವನ್ನು 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ನಿರ್ದೇಶಕ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ.'ಕರಾವಳಿ' ಸಿನಿಮಾದ ಶೂಟಿಂಗ್ ಮುಗಿಸಿದ ಬೆನ್ನಲ್ಲೇ ಇತ್ತೀಚಿಗಷ್ಟೆ ಈ ತಂಡ ಮಾಧ್ಯಮದ ಮುಂದೆ ಹಾಜರಾಗಿ 'ಕರಾವಳಿ' ಬಗ್ಗೆ ಖುಷಿಯನ್ನು ಹಂಚಿಕೊಂಡಿದೆ.

ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ 'ಕರಾವಳಿ' ಸಿನಿಮಾದ ಪೋಸ್ಟರ್ ಮತ್ತು ಟೀಸರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದಾರೆ. ಮತ್ತೊಂದು ಟಿಪಿಕಲ್ ಕಂಟೆಂಟ್ ಸಿನಿಮಾ ಯಾವಾಗ ರಿಲೀಸ್ ಎಂದು ಕಾದು ಕೂರುತ್ತಿದ್ದರು. ಕೊನೆಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಆ ಸಮಯ ಬಂದಿದೆ. 'ಕರಾವಳಿ' ಚಿತ್ರಮಂದಿರಕ್ಕೆ ಎಂಟ್ರಿ ಕೊಡುವ ಸಮಯ ಹತ್ತಿರ ಬಂದಿದೆ. ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುವುದೊಂದೇ ಬಾಕಿ.
ಸಿನಿಮಾ ಟೈಟಲ್ ಸೂಚಿಸುವಂತೆ 'ಕರಾವಳಿ' ಸಿನಿಮಾ ಆ ಭಾಗದ ಸಂಸ್ಕೃತಿ, ಸೊಗಡಿನ ಹಿನ್ನೆಲೆಯನ್ನು ಇಟ್ಟುಕೊಂಡು ಸೃಷ್ಟಿಸಿರುವ ಸಿನಿಮಾ. ಇತ್ತೀಚೆಗೆ ಬೆಂಗಳೂರಿನ ದೊಡ್ಡಾಲದ ಮರದ ಬಳಿ ಸೆಟ್ ಹಾಕಿ ಕೊನೆಯ ದಿನದ ಚಿತ್ರೀಕರಣವನ್ನು ಶೂಟ್ ಮಾಡಿ ಸಿನಿಮಾವನ್ನು ಮುಗಿಸಲಾಗಿದೆ. ಯಕ್ಷಗಾನ ರಂಗಸ್ಥಳ, ಕರಾವಳಿ ಶೈಲಿ ಊಟ, ಕೊನೆಯ ದಿನದ ಶೂಟಿಂಗ್‌ನ ಹೈಲೆಟ್ ಆಗಿತ್ತು. 2 ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ವಿಕ್ರಮ್ ಮೋರ್ ಈ ಸಿನಿಮಾದ ಫೈಟಿಂಗ್ ದೃಶ್ಯಗಳನ್ನು ಸಂಯೋಜನೆ ಮಾಡಿರೋದು ಹೈಲೈಟ್. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಹಿಷಾಸುರನ ಅವತಾರದಲ್ಲಿ ಅಬ್ಬರಿಸಿದ್ದಾರೆ.

ಇದೇ ಖುಷಿಯಲ್ಲಿರುವ ಪ್ರಜ್ವಲ್ ದೇವರಾಜ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ."ನಾನೆಂದು ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಸಿಕ್ಕಾಪಟ್ಟೆ ಶ್ರಮ ಹಾಕಿದ್ದೀವಿ. ಭಯಪಟ್ಟು ಮಾಡಿರುವ ಪಾತ್ರವಿದು, ಈ ಸಿನಿಮಾ ಬಗ್ಗೆ ತುಂಬಾ ಖುಷಿ ಇದೆ" ಎಂದು ಪ್ರಜ್ವಲ್ ದೇವರಾಜ್ ಹೇಳಿದರು.
ಪ್ರಜ್ವಲ್ ದೇವರಾಜ್ ಜೊತೆ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಮಾವೀರ ಎನ್ನುವ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈಗಾಗಲೇ ರಾಜ್ ಬಿ ಶೆಟ್ಟಿ ಪಾತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ರಾಜ್ ಬಿ ಶೆಟ್ಟಿ ವಿಭಿನ್ನ ಲುಕ್‌ನಲ್ಲಿ ಈ ಸಿನಿಮಾಗೆ ಎಂಟ್ರಿ ಕೊಟ್ಟಿರೋದು, ಈ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇನ್ನೂ ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಹಾಗೂ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡದ್ದಾರೆ.
'ಕರಾವಳಿ' ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣ ಕೂಡ ಮಾಡಿದ್ದಾರೆ. 'ಕರಾವಳಿ' ಸಿನಿಮಾ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ಅಭಿಮನ್ಯೂ ಸದಾನಂದನ್ ಕ್ಯಾಮರ ವರ್ಕ್ ಇದೆ.


Click it and Unblock the Notifications











