ನಿರ್ಮಾಪಕ ರಾಮು ನಿರ್ಮಾಣದ ಕೊನೆಯ ಸಿನಿಮಾ 'ಅರ್ಜುನ್ ಗೌಡ' ರಿಲೀಸ್‌ಗೆ ರೆಡಿ

ಸ್ಯಾಂಡಲ್‌ವುಡ್‌ನ ಕೋಟಿ ನಿರ್ಮಾಪಕ ರಾಮು ನಿರ್ಮಿಸಿದ ಕೊನೆಯ ಸಿನಿಮಾ 'ಅರ್ಜುನ್ ಗೌಡ'. ಈ ಸಿನಿಮಾ ಇಷ್ಟೊತ್ತಿಗಾಗಲೇ ಬಿಡುಗಡೆ ಆಗಬೇಕಿತ್ತು. ರಾಮು ಕೊರೊನಾಗೆ ಬಲಿಯಾಗುವ ಮೊದಲೇ ಈ ಸಿನಿಮಾ ಬಿಡುಗಡೆಯ ತಯಾರಿ ನಡೆಸಿದ್ದರು. ಈ ಸಿನಿಮಾ ಕನ್ನಡದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡೇ ಮಾಡುತ್ತೆ ಅನ್ನುವ ಅಚಲವಾದ ನಂಬಿಕೆ ಹೊಂದಿದ್ದರು. ಅಷ್ಟರಲ್ಲೇ ರಾಮುಗೆ ಕೊರೊನಾ ಸೋಂಕು ತಗುಲಿ ಕೊನೆಯುಸಿರೆಳೆದಿದ್ದರು.

ಅರ್ಜುನ್ ಗೌಡ ಪಕ್ಕಾ ಆ್ಯಕ್ಷನ್ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಅದ್ಧೂರಿ ಚಿತ್ರಗಳನ್ನು ನಿರ್ಮಿಸಿರುವ ರಾಮು ಫಿಲಂಸ್ ಸಂಸ್ಥೆ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿವೆ. ಈಗ ಅವರ ನಿಧನದ ಬಳಿಕ ಅರ್ಜುನ್ ಗೌಡ ಬಿಡುಗಡೆಯಾಗುತ್ತಿದೆ. ಪತ್ನಿ ಮಾಲಾಶ್ರೀ ರಾಮು ನಿರ್ಮಿಸಿದ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. 2021 ಏಪ್ರಿಲ್​​ನಲ್ಲಿಯೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಸಿನಿಮಾ ಬಿಡುಗಡೆಯಾಗಿರಲಿಲ್ಲ.

ರಾಮು ನಿರ್ಮಾಣದ ಮೂರು ಸಿನಿಮಾಗಳಲ್ಲಿ ಪ್ರಜ್ವಲ್ ನಟನೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕಾ ತಿಮ್ಮೇಶ್ 'ಅರ್ಜುನ್ ಗೌಡ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 31ರಂದು ಅರ್ಜುನ್ ಗೌಡ ಬಿಡುಗಡೆಯಾಗುತ್ತಿದೆ. ಹೀಗಾಗಿ ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಈಗಾಗಲೇ ಪ್ರಜ್ವಲ್ ದೇವರಾಜ್ ರಾಮು ನಿರ್ಮಿಸಿದ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಂದೆ ದೇವರಾಜ್ ಕಾಲದಿಂದಲೂ ನಿರ್ಮಾಪಕ ರಾಮು ಜೊತೆ ಒಡನಾಡ ಹೊಂದಿದ್ದಾರೆ. " ನಾನು "ಗುಲಾಮ" ಚಿತ್ರದಿಂದ ರಾಮು ಅವರ ನಿರ್ಮಾಣದ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. 'ಅರ್ಜುನ್ ಗೌಡ' ಆದ ಮೇಲೆ ಮತ್ತೊಂದು ಚಿತ್ರ ಆರಂಭಿಸೋಣ ಎಂದು ಹೇಳಿದ್ದರು." ರಾಮು ಅವರನ್ನು ಪ್ರಜ್ವಲ್ ದೇವರಾಜ್ ನೆನಪಿಸಿಕೊಂಡಿದ್ದರು.

Prajwal Devaraj starrer arjun gowda movie release in december 31st

'ಅರ್ಜುನ್ ಗೌಡ' ಸಿನಿಮಾದಲ್ಲಿ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇವರು ಜಾಹ್ನವಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನಿಗೆ ಉತ್ತಮ ಗೆಳತಿಯ ಜೊತೆ ನಾಯಕನನ್ನು ಬಹಳ ಪ್ರೀತಿಸುವ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.‌

ಅರ್ಜುನ್ ಗೌಡ ರಾಮು ನಿರ್ಮಿಸಿದ 39ನೇ ಸಿನಿಮಾ

Prajwal Devaraj starrer arjun gowda movie release in december 31st

'ಅರ್ಜುನ್ ಗೌಡ' ನಿರ್ಮಾಪಕ ರಾಮು ನಿರ್ಮಾಣದ 39 ನೇ ಸಿನಿಮಾ. ಇದೊಂದು ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ಇದರೊಂದಿಗೆ ಆಕ್ಷನ್, ರೊಮ್ಯಾಂಟಿಕ್, ಥ್ರಿಲ್ಲರ್ ಎಳೆ ಕೂಡ ಇದೆ ಎಂದು ನಿರ್ದೇಶಕ ಲಕ್ಕಿ ಶಂಕರ್ ಭರವಸೆ ನೀಡಿದ್ದಾರೆ. ಅಂದಹಾಗೆ 'ಅರ್ಜುನ್ ಗೌಡ' ನೇರಾ ನೇರ ಮಾತನಾಡುವ ವ್ಯಕ್ತಿ. ಸಮಾಜದಲ್ಲಿನ ಕೆಲವು ತೊಡಕುಗಳನ್ನು ಸರಿಪಡಿಸಲು ಹೋರಾಡಲು ಸದಾ ಸಿದ್ದವಿರು ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ.

Prajwal Devaraj starrer arjun gowda movie release in december 31st

ರಾಮು ಸಿನಿಮಾದಲ್ಲಿ ಕೇವಲ ಮನರಂಜನೆಯಷ್ಟೇ ಇರುವುದಿಲ್ಲ. ಬದಲಿಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೂಡ ಇರುತ್ತದೆ. 'ಅರ್ಜುನ್ ಗೌಡ' ಸಿನಿಮಾ ಧರ್ಮವಿಶ್ ಸಂಗೀತ ನೀಡಿದ್ದಾರೆ. ಪ್ರಜ್ವಲ್ ಜೊತೆ ಬಾಲಿವುಡ್​​ ನಟ ರಾಹುಲ್ ದೇವ್ ನಟಿಸಿದ್ದಾರೆ. ಹಾಗೇ ಸ್ಪರ್ಶ ರೇಖಾ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭಿತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಸೇರಿದಂತೆ ಈ ಚಿತ್ರದಲ್ಲಿ ದೊಡ್ಡ ತಾರಾಗಣವೇದ ಸೇರಿದೆ. ಡಿಸೆಂಬರ್ 31ಕ್ಕೆ ರಾಜ್ಯಾದ್ಯಂತ ಸುಮಾರು ‌ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, ರಾಮು ಕನಸನ್ನು ನನಸು ಮಾಡಲು ಮಾಲಾಶ್ರೀ ಸಜ್ಜಾಗಿದ್ದಾರೆ.

More from Filmibeat

English summary
Prajwal devaraj starrer arjun gowda movie release in december 31st. Arjun Gowda is the last movie Produced by late Ramu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X