'ಮಾಫಿಯಾ' ರಿಲೀಸ್‌ಗೂ ಮುನ್ನವೇ ಅದೇ ನಿರ್ದೇಶಕನಿಗೆ ಕಾಲ್‌ಶೀಟ್ ಕೊಟ್ಟ ಪ್ರಜ್ವಲ್ !
ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿರೋ ನಟ. ನಿರಂತರವಾಗಿ ಒಂದರ ಹಿಂದೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಈಗಾಗಲೇ ಪ್ರಜ್ವಲ್ ಅಭಿನಯದ 'ಅಬ್ಬರ' ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಈ ಹಿಂದಿನೇ ಇನ್ನೊಂದು ಸಿನಿಮಾ ಸೆಟ್ಟೇರುವುದಕ್ಕೆ ಸಜ್ಜಾಗಿದೆ.
ಪ್ರಜ್ವಲ್ ದೇವರಾಜ್ 'ಮಾಫಿಯಾ' ಅನ್ನೋ ಸಿನಿಮಾದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. ಈ ಸಿನಿಮಾವನ್ನು ಲೋಹಿತ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾನೇ ಇನ್ನೂ ಪೋಸ್ಟ್ ಪ್ರೊಡಕ್ಷನ್‌ನಲ್ಲಿದೆ. ಅಷ್ಟರಲ್ಲೇ ಇದೇ ನಿರ್ದೇಶಕನೊಂದಿಗೆ ಮತ್ತೊಂದು ಸಿನಿಮಾ ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ.

ಲೋಹಿತ್ ಈಗಾಗಲೇ 'ಮಮ್ಮಿ', 'ದೇವಕಿ' ಅನ್ನೋ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದರ ಜೊತೆನೇ ಪ್ರಜ್ವಲ್ ದೇವರಾಜ್‌ಗೆ 'ಮಾಫಿಯಾ' ಅನ್ನೋ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಆ ಸಿನಿಮಾ ಸದ್ಯ ಬಿಡುಗಡೆಗೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಅಷ್ಟರಲ್ಲೇ ಮತ್ತೊಂದು ಸಿನಿಮಾ ಆರಂಭ ಮಾಡಿದ್ದಾರೆ.
'ಮಾಫಿಯಾ' ನಿರ್ದೇಶಕ ಲೋಹಿತ್ ಕಥೆ ಹೇಳುವ ಪರಿ ಪ್ರಜ್ವಲ್‌ಗೆ ಹಿಡಿಸಿದೆ. ಅಲ್ಲದೆ ಈಗ ಕೇಳಿರುವ ಕತೆ ಕೂಡ ಅದ್ಭುತವಾಗಿದೆಯಂತೆ. ಜೊತೆ ಈಗಾಗಲೇ 'ಮಾಫಿಯಾ' ಸಿನಿಮಾ ಅವರ ಮೇಕಿಂಗ್ ಶೈಲಿ ಪ್ರಜ್ವಲ್‌ಗೆ ತುಂಬಾನೇ ಇಷ್ಟ ಆಗಿದೆ. ಈ ಕಾರಣಕ್ಕಾಗಿಯೇ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಅಂದ್ಹಾಗೆ ಈ ಸಿನಿಮಾ ಟೈಂ ಲೂಪ್ ಹಿನ್ನೆಲೆಯುಳ್ಳ ಕಥೆಯನ್ನು ಹೊಂದಿದೆ. ಡಿಸೆಂಬರ್‌ನಲ್ಲಿ ಈ ಸಿನಿಮಾದ ಕೆಲಸ ಆರಂಭ ಆಗಲಿದೆ. ಸಿನಿಮಾ ಟೈಟಲ್, ಸ್ಟಾರ್ ಕಾಸ್ಟ್ ಎಲ್ಲವೂ ಸದ್ಯ ರಹಸ್ಯವಾಗಿಯೇ ಇದ್ದು, ಮುಂದಿನ ಸಿನಿಮಾಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.


Click it and Unblock the Notifications











