ಕರಾವಳಿಯಲ್ಲಿ ಪ್ರಜ್ವಲ್ ದೇವರಾಜ್ ಯಕ್ಷಗಾನ ; ಡೈನಾಮಿಕ್ ಪ್ರಿನ್ಸ್ ಶ್ರದ್ದೆ-ಶ್ರಮಕ್ಕೆ ಇಲ್ಲಿದೆ ಸಾಕ್ಷಿ..!
ವರ್ಷವಿಡೀ ಬ್ಯುಸಿ ಇರೋ ಹೀರೋಗಳಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡಾ ಒಬ್ಬರು. ಸಿಕ್ಸರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಜ್ವಲ್ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೀರೋ ಕೂಡ ಹೌದು. ಕಳೆದ ಒಂದೂವರೆ ದಶಕಗಳಲ್ಲಿ ಪ್ರಜ್ವಲ್ ದೇವರಾಜ್ ಸುಮ್ಮನೇ ಕೂತೇ ಇಲ್ಲ. ಒಂದರ ಹಿಂದೊಂದು ಸಿನಿಮಾಗಲ್ಲಿ ನಟಿಸುತ್ತಲೇ ಬಂದಿರುವ ಪ್ರಜ್ವಲ್ ದೇವರಾಜ್ ಬದುಕಿಗೆ ಕರಾವಳಿ ಸಿನಿಮಾ ಮಹತ್ತರವಾದ ತಿರುವು ಕೊಡುವ ಎಲ್ಲ ಸಾಧ್ಯತೆಗಳಿವೆ. ಆ ಲಕ್ಷಣ ಸದ್ಯಕ್ಕೆ ದಟ್ಟವಾಗಿ ಕಂಡು ಬರುತ್ತಿದೆ.
ಹೌದು..ಕರಾವಳಿ.. ಕಾಲ..ಕಾಲಕ್ಕೆ.. ಎಲ್ಲರ ಕಣ್ಣರಳಿಸುತ್ತಿರುವ ಸಿನಿಮಾ. ಹಿಂದೆ ಫಸ್ಟ್ ಲುಕ್ ಮೂಲಕ ನಿಬ್ಬೇರಗಾಗಿಸಿದ್ದ ಈ ಚಿತ್ರ ಈಗ ಇನ್ನೊಮ್ಮೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಯುಗಾದಿ ಪ್ರಯುಕ್ತ ಬಿಡುಗಡೆ ಮಾಡಲಾದ ಹೊಸ ಪೋಸ್ಟರ್

ಕಂಬಳದ ಜೊತೆ ಜೊತೆಯಲ್ಲಿ ಯಕ್ಷಗಾನ ಈ ಚಿತ್ರದ ಹೈಲೆಟ್. ಯುಗಾದಿಯಂದು ಬಿಡುಗಡೆಯಾದ ಪ್ರಜ್ವಲ್ ದೇವರಾಜ್ ಯಕ್ಷಗಾನದ ಲುಕ್ ಇದಕ್ಕೆ ಸಾಕ್ಷಿ. ಇನ್ನೂ.. ಚಿತ್ರದ ಸೋಲು-ಗೆಲುವು.. ಏನೇ ಇರಲಿ.. ಚಿತ್ರಕ್ಕೆ ಹಾಗೂ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನ ಪ್ರಜ್ವಲ್ ದೇವರಾಜ್ ಮೊದಲಿಂದ ಮಾಡುತ್ತಾನೇ ಬಂದಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಕರಾವಳಿ ಚಿತ್ರದ ಯಕ್ಷಗಾನದ ಈ ಲುಕ್ ಹಿಂದೆ ಇರುವ ಶ್ರದ್ಧೆ ಹಾಗೂ ಶ್ರಮ.
ಯಕ್ಷಗಾನದ ಈ ರೂಪಕ್ಕೆ ಪ್ರಜ್ವಲ್ ದೇವರಾಜ್ ಹೆಚ್ಚು ಕಡಿಮೆ ತಮ್ಮ ಅರ್ಧ ದಿನವನ್ನೇ ಮುಡಿಪಾಗಿ ಇಟ್ಟಿದ್ದಾರೆ. ಇನ್ನು ಯಕ್ಷಗಾನ ಭಾಗವತರೇ ಆಗಿರುವ ಪಲ್ಲವ ಗಾಣಿಗ ಎನ್ನುವರು ಈ ಲುಕ್ ಡಿಸೈನ್ ಮಾಡಿದ್ದು ವಿಶೇಷ.
ಗುರುದತ್ ಗಾಣಿಗ ಈ ಚಿತ್ರದ ಕ್ಯಾಪ್ಟನ್. ಈ ಹಿಂದೆ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಮೂಲಕ ನಿರ್ದೇಶನದ ಪ್ರಯಾಣ ಆರಂಭ ಮಾಡಿದ ಗುರುದತ್ ಗಾಣಿಗ, ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆಯನ್ನ ಹೇಳಲು ಹೊರಟಿದ್ದಾರೆ. ಕರಾವಳಿ ಸಂಸ್ಕ್ರತಿ.. ಆಚಾರ.. ವಿಚಾರ.. ಕಂಬಳ.. ಹಾಗೂ ಯಕ್ಷಗಾನದ ಎಳೆಗಳನ್ನೂ ಸೇರಿಸಿದ್ದಾರೆ.
ಇನ್ನೂ ಕರಾವಳಿ ಚಿತ್ರದ ಮೂಲಕ ನೀವು ಹಿಂದೆಂದೂ ನೋಡದ ಪ್ರಜ್ವಲ್ ದೇವರಾಜ್ ಅವರನ್ನ ಇಲ್ಲಿ ಪರಿಚಯ ಮಾಡಿಸುವ ಪ್ರಯತ್ನವನ್ನೂ ಕೂಡ ಗುರುದತ್ ಗಾಣಿಗ ಮಾಡುತ್ತಿದ್ದಾರೆ. ಈಗಾಗಲೇ ಕರಾವಳಿ ಚಿತ್ರದ ಶೇಕಡಾ ನಲವತ್ತರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಮಂಗಳೂರಿನಲ್ಲಿ ಚಿತ್ರತಂಡ ಬಿಡಾರ ಹೂಡಿದೆ.
ಬೆಂಕಿ ಹಾಗೂ ರೈಡರ್ ಸಿನಿಮಾಗಳಲ್ಲಿ ಕಾಣಿಸೊಂಡಿದ್ದ ಸಂಪದಾ, ಪ್ರಜ್ವಲ್ ದೇವರಾಜ್ ಗೆ ಇಲ್ಲಿ ನಾಯಕಿ. ಉಳಿದಂತೆ ಕರಾವಳಿ ಸಿನಿಮಾಗೆ ಅಭಿಮನ್ಯು ಸದಾನಂದ್ ಛಾಯಾಗ್ರಹಣ ಇದೆ. ಹಾಡುಗಳಿಗೆ ಸಚಿನ್ ಬಸ್ರೂರು ಸಂಗೀತ ಇದೆ. ಮಿತ್ರ.. ಟಿವಿ ಶ್ರೀಧರ್.. ಜಿ ಜಿ, ನಿರಂಜನ್.. ಸೇರಿದಂತೆ ಹಲವು ಪ್ರಖ್ಯಾತ ಕಲಾವಿದರು ಚಿತ್ರದಲ್ಲಿದ್ದಾರೆ. ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಒಟ್ನಲ್ಲಿ ಸದ್ಯಕ್ಕೆ ಕರಾವಳಿ ಚಿತ್ರದ ಹೊಸ ಪೋಸ್ಟರ್, ಅನೇಕರನ್ನ ನಿಬ್ಬೇರಗಾಗಿಸಿದೆ. ಚಿತ್ರದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಯಕ್ಷಗಾನ ವೇಷಧಾರಿಯಾಗಲು ಪ್ರಜ್ವಲ್ ದೇವರಾಜ್ ತಾಳ್ಮೆ ಹಾಗೂ ಸಂಯಮದಿಂದ ಕುಳಿತಿರುವ ವಿಡಿಯೋ ವೈರಲ್ ಆಗಿದೆ.


Click it and Unblock the Notifications













