"ಶ್ರೀರಾಮಚಂದ್ರ-ಲಕ್ಷ್ಮಣ ಕದ್ದು ಹಣ್ಣು ತಿಂದ್ರು"; ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ಪ್ರಕಾಶ್ ರಾಜ್
ಪ್ರಕಾಶ್ ರಾಜ್ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದು ಹೊಸದೇನು ಅಲ್ಲ. ಇದಕ್ಕೆ ಕೆಲವೊಮ್ಮೆ ಜನರು ಆಕ್ರೋಶಕ್ಕೆ ತೋರಿಸಿದ್ದೂ ಇದೆ. ಈಗ ಪ್ರಕಾಶ್ ರಾಜ್ 'ರಾಮಾಯಣ', ಶ್ರೀರಾಮಚಂದ್ರ, ಲಕ್ಷ್ಮಣರ ಕುರಿತು ನೀಡಿರುವ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಪ್ರಕಾಶ್ ರಾಜ್ ವಿರುದ್ಧ ದೂರ ಕೂಡ ದಾಖಲಿಸಲಾಗುತ್ತಿದೆ ಎನ್ನಲಾಗಿದೆ.
ಪ್ರಕಾಶ್ ರಾಜ್ ಇತ್ತೀಚೆಗೆ ಕೇರಳದ ಸಾಹಿತ್ಯ ಉತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟ ರಾಮಾಯಣದ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ರಾಮಾಯಣ, ಶ್ರೀರಾಮ, ಲಕ್ಷ್ಮಣ, ರಾವಣನ ಕುರಿತು ಪ್ರಕಾಶ್ ರಾಜ್ ನೀಡಿದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡು ವಿವಾದವನ್ನು ಸೃಷ್ಟಿಸಿದೆ.

ಕೇರಳದ ಸಾಹಿತ್ಯ ಉತ್ಸವದಲ್ಲಿ ಪ್ರಕಾಶ್ ರಾಜ್ ವಿವಾದಾತ್ಮಕ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾರೇ, "ಶ್ರೀರಾಮ ಚಂದ್ರ ಹಾಗೂ ಲಕ್ಷ್ಮಣರು ದಕ್ಷಿಣ ಭಾರತದ ಜಮೀನಿನಲ್ಲಿ ಹಣ್ಣನ್ನು ಕದ್ದು ತಿಂದರು" ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ಬೇರೆ ಬೇರೆ ರೂಪ ಪಡೆದುಕೊಂಡು ವಿವಾದ ಸೃಷ್ಟಿಸಿದೆ. ಅಷ್ಟಕ್ಕೂ ಪ್ರಕಾಶ್ ರಾಜ್ ಹೇಳಿದ್ದೇನು? ರಾಮಾಯಣದ ಬಗ್ಗೆ ಹೇಳಿಕೆ ಕೊಟ್ಟು ಸಂಕಷ್ಟಕ್ಕೆ ಸಿಲುಕಿದರೇ..
ಕೇರಳ ಸಾಹಿತ್ಯ ಉತ್ಸವ (KLF) ಇದೇ ವರ್ಷ ಜನವರಿ ತಿಂಗಳ ಅಂತ್ಯದಲ್ಲಿ ನಡೆದಿತ್ತು. ಏಷ್ಯಾ ಅತೀ ದೊಡ್ಡ ಸಾಹಿತ್ಯ ಉತ್ಸವಗಳಲ್ಲಿ ಒಂದು. ಇದಕ್ಕೆ ಪ್ರಕಾಶ್ ರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಪ್ರಕಾಶ್ ರಾಜ್ ತಮ್ಮ ಭಾಷಣದಲ್ಲಿ ಶ್ರೀರಾಮನ ಬಗ್ಗೆ ಮಾತಾಡಿದ್ದಾರೆ. ಇದೇ ಹೇಳಿಕೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ದಿಢೀರನೇ ವೈರಲ್ ಆಗಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ವಿಡಿಯೋದಲ್ಲಿ ಪ್ರಕಾಶ್ ರಾಜ್ ಭಾಷೆ, ಒಂದು ರಾಷ್ಟ್ರ ಒಂದು ಭಾಷೆ, ಹಿಂದಿ ಹೇರಿಕೆ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ರಾಮಾಯಣವನ್ನು ತಮ್ಮದೇ ರೀತಿಯಲ್ಲಿ ಉದಾಹರಣೆಯಾಗಿ ಕೊಟ್ಟಿದ್ದಾರೆ. "ಇಂದಿನ ಮಕ್ಕಳಿಗೆ ರಾಮಾಯಣ ಗೊತ್ತಿಲ್ಲ. ಅವರಿಗೆ ಓದುತ್ತಿರುವ ನಾಟಕದಲ್ಲಿ ದಿಢೀರನೇ ರಾಮ, ಲಕ್ಷ್ಮಣ, ಸೀತೆ ಬಂದು ಬಿಡುತ್ತಾರೆ. ಅವರು ದಕ್ಷಿಣ ಭಾರತಕ್ಕೆ ಬಂದಾಗ ಅವರಿಗೆ ಒಂದು ತೋಟ ಕಾಣಿಸುತ್ತದೆ. ಅದರಲ್ಲಿ ಅವರಿಗೆ ಹಣ್ಣುಗಳು ಕಾಣಿಸುತ್ತವೆ. ಲಕ್ಷ್ಮಣ ಆ ಹಣ್ಣುಗಳನ್ನು ತಿನ್ನಬಹುದೇ ಎಂದು ಕೇಳುತ್ತಾರೆ. ಇಲ್ಲ, ಹಸಿವಾಗಿದ್ದರೆ, ಮಾತ್ರ ತಿನ್ನಬಹುದು ಎಂದು ರಾಮ ಹೇಳುತ್ತಾನೆ. ಅವರು ಕಣ್ಣುಗಳನ್ನು ತಿನ್ನುವಾಗ ಶೂರ್ಪನಕಿ ಹಾಗೂ ರಾವಣ ಬಂದರು. ಅದನ್ನು ನೋಡಿ ಶೂರ್ಪನಕಗೆ ಕೋಪ ಬಂತು. ಆಗ ಆಕೆ ಅಣ್ಣ ನಮ್ಮ ಹಣ್ಣುಗಳನ್ನು ಯಾರೋ ತಿನ್ನುತ್ತಿದ್ದಾರೆ. ಆಗ ರಾವಣ ಅವರಿಗೆ ಹಸಿವಾಗಿದೆ. ಅವರು ತಿನ್ನಲಿ. ಆ ಮೇಲೆ ಮಾತಾಡೋಣ ಎಂದು ಹೇಳುತ್ತಾನೆ. ಅವರು ತಿಂದು ಮುಗಿದಾಗ ರಾವಣ, ಶೂರ್ಪನಕಿ ಎದುರಿಗೆ ಬಂದಾಗ ಯಾರೋ ಬುಡಕಟ್ಟ ಜನಾಂಗದವರು ಬಂದರು ಎಂದು ರಾಮ ಹೇಳುತ್ತಾನೆ. ಆಗ ರಾವಣ ನಾವು ಈ ಜಮೀನ ಮಾಲೀಕರು ಎನ್ನುತ್ತಾನೆ. ಹಣ್ಣುಗಳನ್ನು ತಿಂದಿದ್ದಕ್ಕೆ ಬೆಲೆ ಕಟ್ಟಬೇಕು ಎಂದು ಹೇಳುತ್ತಾರೆ. ಆಗ ಶೂರ್ಪನಕಿ ಲೆಕ್ಕ ಹಾಕಿ 2000 ಸಾವಿರ ಡಾಲರ್ ಜೊತೆ ಜಿಎಸ್‌ಟಿ ಕಟ್ಟಬೇಕು ಎನ್ನುತ್ತಾಳೆ. ಆಗ ರಾಮ ನಮ್ಮ ಬಳಿ ಹಣವಿಲ್ಲ ಎನ್ನುತ್ತಾನೆ. ಈ ವೇಳೆ ರಾವಣ ರಿಯಾಯ್ತಿ ನೀಡುವಂತೆ ಹೇಳುತ್ತಾನೆ. ಇದಾಗಿಯೂ ರಾಮ ಹಣ ಇಲ್ಲ ಎಂದು ಹೇಳುತ್ತಾನೆ. ಆಗ ರಾವಣ ಹಣ್ಣುಗಳನ್ನು ತಿಂದ ಬಳಿಕ ಉಳಿದ ಬೀಜವನ್ನು ನೆಟ್ಟು ಅದನ್ನು ಗಿಡವನ್ನಾಗಿ ಮಾಡಿ ಹೋಗಿ. ನಿನ್ನ ಹೆಸರೇನು? ನಾನು ರಾಮ.. ಉತ್ತರ ಭಾರತದವನು. ನಾನು ರಾವಣ ದಕ್ಷಿಣ ಭಾರತದವನು" ಹೀಗೆ ತಮ್ಮದೇ ಶೈಲಿಯಲ್ಲಿ ರಾಮಾಯಣವನ್ನು ವರ್ಣಿಸಿದ್ದರು. ಇದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಹೇಳಿಕೆಯಲ್ಲಿ ಶ್ರೀರಾಮ, ಲಕ್ಷಣ ಹಾಗೂ ಸೀತೆ ಹಣ್ಣುಗಳನ್ನು ಕದ್ದು ತಿಂದರು ಅನ್ನೋದು ಕೆಲವರಿಗೆ ಹಿಡಿಸಿಲ್ಲ. ಅಲ್ಲದೇ ಪ್ರಕಾಶ್ ರಾಜ್ ಉತ್ತರ ಭಾರತ, ದಕ್ಷಿಣ ಭಾರತ ಎಂದು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳನ್ನು ಅಪಹಾಸ್ಯ ಮಾಡಲು ರಾಮಾಯಣವನ್ನು ಬಳಸಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಉತ್ತರ ಭಾರತದಿಂದ ಬರುವವರು ದಕ್ಷಿಣ ಭಾರತದ ಭಾಷೆಗಳನ್ನು ಕಲಿಯಿರಿ. ಅದು ಬಿಟ್ಟು ಒಂದ ರಾಷ್ಟ್ರ, ಒಂದು ಭಾಷೆ ಅನ್ನಬೇಡಿ. ಹಿಂದಿಯನ್ನು ಹೇರುವ ಕೆಲಸ ಮಾಡಬೇಕು ಎಂದೂ ಹೇಳಿದ್ದಾರೆ.
ಶ್ರೀರಾಮ, ಲಕ್ಷ್ಮಣ ಬಗ್ಗೆ ಪ್ರಕಾಶ್ ರಾಜ್ ಹೇಳಿಕೆಗಳ ವಿರುದ್ದ ರೊಚ್ಚಿಗೆದ್ದಿದ್ದು, ಗುಲ್ಟೇ ವರದಿಯಂತೆ ಪ್ರಕಾಶ್ ರಾಜ್ ವಿರುದ್ಧ ಬೇರೆ ಬೇರೆ ಕಡೆಗಳಲ್ಲಿ ಕ್ರಿಮಿನಲ್ ಕೇಸ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ವರದಿ ಮಾಡಿದೆ. ಒಂದು ವೇಳೆ ಕೇಸ್ ದಾಖಲಾಗಿದ್ದರೆ, ಪ್ರಕಾಶ್ ರಾಜ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂದು ನೋಡಬೇಕಿದೆ.


Click it and Unblock the Notifications
