ಠೇವಣಿ ಮಾತ್ರವಲ್ಲ, ಪ್ರಕಾಶ್ ರಾಜ್ ತಮ್ಮ ಮಿದುಳನ್ನೂ ಕಳೆದುಕೊಂಡಿದ್ದಾರೆ - ಶಿಲ್ಪಾ ಗಣೇಶ್
Recommended Video
ನಟ, ನಿರ್ದೇಶಕ ಪ್ರಕಾಶ್ ರಾಜ್ ತಮ್ಮ ರಾಜಕೀಯ ಪ್ರಯಾಣದ ಮೊದಲ ಹೆಜ್ಜೆಯಲ್ಲಿಯೇ ಅವಮಾನ ಅನುಭವಿಸಿದ್ದಾರೆ. ಅವರೇ ಹೇಳಿದಂತೆ ಚುನಾವಣಾ ಫಲಿತಾಂಶ ಅವರಿಗೆ ಕಪಾಳಮೋಕ್ಷ ಮಾಡಿದಂತೆ ಆಗಿದೆ.
ಇದೀಗ ಪ್ರಕಾಶ್ ರಾಜ್ ಬಗ್ಗೆ ನಿರ್ಮಾಪಕಿ ಹಾಗೂ ಬಿಜೆಪಿ ಪಕ್ಷದ ನಾಯಕಿ ಶಿಲ್ಪಾ ಗಣೇಶ್ ಟ್ವೀಟ್ ಮಾಡಿದ್ದಾರೆ. ''ಪ್ರಕಾಶ್ ರಾಜ್ ಜನವರಿಯಲ್ಲಿ ಹೇಳಿದ್ದು, 6 ತಿಂಗಳ ನಂತರ ಮೋದಿ ಕೇವಲ ಒಬ್ಬ MP (ಮೆಂಬರ್ ಆಫ್ ಪಾರ್ಲಿಮೆಂಟ್) ಅಂತ. ಆದರೆ, ಇವತ್ತು ಪ್ರಕಾಶ್ ರಾಜ್ ತಮ್ಮ ಠೇವಣಿ ಮಾತ್ರವಲ್ಲ ಮಿದುಳನ್ನು ಕಳೆದುಕೊಂಡಿದ್ದಾರೆ.'' ಎಂದಿದ್ದಾರೆ.

ಬೆಂಗಳೂರು ಸೆಂಟ್ರಲ್ : ಪ್ರಕಾಶ್ ರಾಜ್‌ಗೆ ಭಾರಿ ಹಿನ್ನಡೆ
ಆರು ತಿಂಗಳ ಹಿಂದೆ ಮೋದಿ ಬಗ್ಗೆ ಪ್ರಕಾಶ್ ರಾಜ್ ಟೀಕೆ ಮಾಡಿದ್ದರು. ಮೋದಿ ಮುಂದಿನ ಬಾರಿ ಬರೀ ಎಪಿ ಅಷ್ಟೇ ಎಂದಿದ್ದರು. ಆದರೆ, ಈಗ ಅವರ ಪರಿಸ್ಥಿತಿ ಕಂಡು ಶಿಲ್ಪಾ ಗಣೇಶ್ ಟಾಂಗ್ ನೀಡಿದ್ದಾರೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ್ ರಾಜ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೆ, 28906 ಮತಗಳನ್ನು ಪಡೆದು ರೇವಣಿ ಕಳೆದುಕೊಂಡಿದ್ದರು.
ಸೋತ ನೋವಿನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಪ್ರಕಾಶ್ ರಾಜ್ ''ಇದು ನನ್ನ ಮುಖಕ್ಕೆ ದೊಡ್ಡ ಕಪಾಳಮೋಕ್ಷ. ಆದರೂ ನನ್ನ ಹೋರಾಟ, ಅನ್ಯಾಯದ ವಿರುದ್ಧದ ಕೂಗುಗಳು ಮುಂದುವರೆಯುತ್ತದೆ''. ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











