Prakash Raj: "ಭಾರತದ ವೈಫಲ್ಯ ಗೆಲುವು ಆಗಬಾರದು".. 'ಚಂದ್ರಯಾನ್-3' ಅಣಕಿಸಿದ ಪ್ರಕಾಶ್ ರಾಜ್‌ಗೆ ನೆಟ್ಟಿಗರ ತರಾಟೆ!
ಭಾರತದ ಪಾಲಿಗೆ 'ಚಂದ್ರಯಾನ್ 3' ಹೆಮ್ಮೆ. ಇದೇ ಬುಧವಾರ (ಆಗಸ್ಟ್ 23) 'ಚಂದ್ರಯಾನ್ 3' ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ ಆಗುತ್ತಿದೆ. ಒಂದು ವೇಳೆ ಚಂದ್ರನಲ್ಲಿಗೆ ಉಳಿಯುವಲ್ಲಿ ಯಶಸ್ವಿಯಾದರೆ, ಭಾರತದ ಗೆದ್ದಂತೆ. ಈ ಕ್ಷಣಕ್ಕಾಗಿ ಇಡೀವ ವಿಶ್ವವೇ ಎದುರು ನೋಡಿತ್ತಿದೆ.
ಈ ಸಂದರ್ಭದಲ್ಲಿ ನಟ ಪ್ರಕಾಶ್ ರಾಜ್ ಮಾಡಿದ ಟ್ವೀಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನಿನ್ನೆ (ಆಗಸ್ಟ್ 20) ಪ್ರಕಾಶ್ ರಾಜ್ ಒಂದು ಫೋಟೊವನ್ನು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಈಗ ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

ಪ್ರಕಾಶ್ ರಾಜ್ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಟ್ವಿಟರ್‌ನಲ್ಲೇ ಪ್ರಕಾಶ್ ರಾಜ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಪ್ರಕಾಶ್ ರಾಜ್ ಮಾಡಿದ ಟ್ವೀಟ್ ಏನು? ಅದಕ್ಕೆ ನೆಟ್ಟಿಗರು ಕೊಟ್ಟ ತಿರುಗೇಟು ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಪ್ರಕಾಶ್ ರಾಜ್ ಮಾಡಿದ ಟ್ವೀಟ್ ಏನು?
ಪ್ರಕಾಶ್ ರಾಜ್ ಮೊದಲಿನಿಂದಲೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಆಡಳಿತ ವೈಖರಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈಗ 'ಚಂದ್ರಯಾನ್ 3' ವಿಚಾರವನ್ನು ಮುಂದಿಟ್ಟುಕೊಂಡು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು. "ಬ್ರೇಕಿಂಗ್ ನ್ಯೂಸ್: ಚಂದ್ರನಿಂದ ವಿಕ್ರಂ ಲ್ಯಾಂಡರ್ ಕಳುಹಿಸಿದ ಮೊದಲ ಫೋಟೊ.. ವಾವ್ಹ್.." ಎಂದು ಟೀ ಸುರಿಯುತ್ತಿರುವ ಕಾರ್ಟೂನ್ ಫೋಟೊವನ್ನು ಪೋಸ್ಟ್ ಮಾಡಿದ್ದರು. ಇದೇ ಫೋಟೊ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ನೆಟ್ಟಿಗರು ಕಿಡಿಕಾರುತ್ತಿರೋದ್ಯಾಕೆ?
ಪ್ರಕಾಶ್ ರಾಜ್ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ದ್ವೇಷಿಸುವ ಭರಾಟೆಯಲ್ಲಿ ದೇಶದ ಹೆಮ್ಮೆ 'ಚಂದ್ರಯಾನ್ 3' ಯನ್ನು ಅಣಕಿಸಿದ್ದು ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಹುತೇಕ ನೆಟ್ಟಿಗರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಏನಂತಿದ್ದಾರೆ ನೆಟ್ಟಿಗರು?
"ಪ್ರಕಾಶ್ ಅವರೇ, ಚಂದ್ರಯಾನ್ ಮಿಷನ್ ಇಸ್ರೋ ಪ್ರಾಜೆಕ್ಟ್.. ಬಿಜೆಪಿಯದ್ದಲ್ಲ. ಒಂದು ವೇಳೆ ಇದು ಗೆದ್ದರೆ ಅದು ಭಾರತದ ಗೆಲುವು. ಯಾವುದೇ ಪಕ್ಷದಲ್ಲ. ಈ ಮಿಷನ್ ವಿಫಲ ಆಗಬೇಕು ಅಂತ ಯಾಕೆ ಬಯಸುತ್ತಿದ್ದೀರಾ? ಬಿಜೆಪಿ ಕೇವಲ ರೂಲಿಂಗ್ ಪಾರ್ಟಿ ಅಷ್ಟೇ. ಒಂದು ದಿನ ಅದು ಹೋಗುತ್ತೆ. ಆದರೆ, ಇಸ್ರೋ ಹಲವು ವರ್ಷಗಳ ವರೆಗೂ ಇರುತ್ತೆ. ಸತ್ಯ ಹುಡುಕುವ ಭರಾಟೆಯಲ್ಲಿ ದೇಶ ಪ್ರೇಮವನ್ನು ಮರೆಯುತ್ತಿದ್ದೀರ. ಭಾರತದ ವೈಫಲ್ ಗೆಲುವ ಆಗಬಾರದು" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಉಗೀರಿ ಮುಖಕ್ಕೆ.. ದೇಶದ್ರೋಹಿ.. ಎನ್ ಟ್ವೀಟ್ ಮಾಡೋದು ಅಂತ ಗೊತ್ತಿಲ್ಲ.." ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.
ಪ್ರಕಾಶ್ ರಾಜ್‌ಗೂ ಸಿಕ್ಕಿದೆ ಬೆಂಬಲ
ಪ್ರಕಾಶ್ ರಾಜ್ ಟ್ವೀಟ್ ಅನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಿದೆ. ಹಾಗೇ ಪ್ರಕಾಶ್ ರಾಜ್ ಬೆಂಬಲ ನೀಡುವವರು ಕೂಡ ಇದ್ದಾರೆ. ಒಬ್ಬರು "ಇದು ಇಸ್ರೋ ಸಾಧನೆ.. ಬಿಜೆಪಿ ಅದರ ಲಾಭ ಪಡೆದುಕೊಳ್ಳುತ್ತಿದೆ" ಎಂದಿದ್ದಾರೆ. ಇನ್ನೊಬ್ಬರು " ಬ್ರೋ.. ಈ ಟ್ವೀಟ್ ಮಾಡಿದ್ದು ಏನಕ್ಕೆ ಅಂದ್ರೆ, ಮೋದಿ ಬಂದು ಈ ಸಾಧನೆಯನ್ನು ಎಲ್ಲರಿಂದ ಕಿತ್ತುಕೊಳ್ಳುತ್ತಾರೆ. ಅವರು ಇಸ್ರೋ ಕಡಿಮೆ ಹಣ ನೀಡಿ, ಗೆದ್ದಾಗ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ" ಎಂದು ಕಮೆಂಟ್ ಮಾಡಿದ್ದಾರೆ.


Click it and Unblock the Notifications











