Karnataka Rajyothsava Award 2025; ಪ್ರಕಾಶ್ ರಾಜ್- ವಿಜಯಲಕ್ಷ್ಮಿ ಸಿಂಗ್ ಸೇರಿ 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುಮಾರು 70 ಮಂದಿ ಸಾಧಕರಿಗೆ ಈ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ನವೆಂಬರ್ ಒಂದರನ್ನು ಕನ್ನಡ ರಾಜ್ಯೋತ್ಸವದಂದು ಸಾಧಕರನ್ನು ಗೌರವಿಸಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ 70 ಮಂದಿ ಸಾಧಕರಲ್ಲಿ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದಿಂದ ಬಹುಭಾಷಾ ನಟ ಹಾಗೂ ಕನ್ನಡಿಗ ಪ್ರಕಾಶ್ ರಾಜ್ ಹಾಗೂ ನಟಿ, ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರು ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ, ಪ್ರತಿವರ್ಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. 2025ನೇ ಸಾಲಿನಲ್ಲಿ ಸಿನಿಮಾ ಕ್ಷೇತ್ರದಿಂದ ಇಬ್ಬರನ್ನು ಆಯ್ಕೆ ಮಾಡಲಾಗಿದೆ.

2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ ಸಾಧಕರನ್ನೇ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪಟ್ಟಿಯನ್ನು ಅಂತಿಮ ಗೊಳಿಸುವುದಕ್ಕೆ ನಾಲ್ಕೈದು ಬಾರಿ ಸಭೆ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 70 ಮಂದಿ ಸಾಧಕರ ಪಟ್ಟಿ ಹೀಗಿದೆ.
ಯಾರಿಗೆಲ್ಲ ಪ್ರಶಸ್ತಿ?
ಸಿನಿಮಾ-ಕಿರುತೆರೆ
ಪ್ರಕಾಶ್ ರಾಜ್ - ದಕ್ಷಿಣ ಕನ್ನಡ
ವಿಜಯಲಕ್ಷ್ಮೀ ಸಿಂಗ್ - ಕೊಡಗು
ಸಾಹಿತ್ಯ ಕ್ಷೇತ್ರ
ಪ್ರೊ. ರಾಜೇಂದ್ರ ಚೆನ್ನಿ - ಶಿವಮೊಗ್ಗ
ತುಂಬಾಡಿ ರಾಮಯ್ಯ - ತುಮಕೂರು
ಪ್ರೊ. ಆರ್. ಸುನಂದಮ್ಮ - ಚಿಕ್ಕಬಳ್ಳಾಪುರ
ಡಾ. ಎಚ್.ಎಲ್. ಪುಷ್ಪ - ತುಮಕೂರು
ರಹಮತ್ ತರೀಕೆರೆ - ಚಿಕ್ಕಮಗಳೂರು
ಹ.ಮ. ಪೂಜಾರ - ವಿಜಯಪುರ
ಜಾನಪದ ಕ್ಷೇತ್ರ
ಬಸಪ್ಪ ಭರಮಪ್ಪ - ಚೌಡ್ಕಿ - ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು - ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ - ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ - ಚಿತ್ರದುರ್ಗ
ಎಂ. ತೋಪಣ್ಣ - ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ - ವಿಜಯಪುರ
ಶ್ರೀಮತಿ ಸಿಂಧು ಗುಜರನ್ - ದಕ್ಷಿಣ ಕನ್ನಡ
ಎಲ್. ಮಹದೇವಪ್ಪ - ಉಡಿಗಾಲ, ಮೈಸೂರು
ಸಂಗೀತ
ದೇವೆಂದ್ರಕುಮಾರ ಪತ್ತಾರ್ - ಕೊಪ್ಪಳ
ಮಡಿವಾಳಯ್ಯ ಸಾಲಿ - ಬೀದರ್
ನೃತ್ಯ ಕ್ಷೇತ್ರ
ಪ್ರೊ. ಕೆ. ರಾಮಮೂರ್ತಿ ರಾವ್ - ಮೈಸೂರು
ಆಡಳಿತ
ಹೆಚ್. ಸಿದ್ದಯ್ಯ - ಭಾ.ಆ.ಸೇ. (ನಿ), ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ ಕ್ಷೇತ್ರ
ಡಾ. ಆಲಮ್ಮ ಮಾರಣ್ಣ, ತುಮಕೂರು
ಡಾ. ಜಯರಂಗನಾಥ್, ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ
ಸೂಲಗಿತ್ತಿ ಈರಮ್ಮ, ವಿಜಯನಗರ
ಫಕ್ಕೀರಿ - ಬೆಂಗಳೂರು ಗ್ರಾಮಾಂತರ
ಕೋರಿನ್ ಆಂಟೊನಿಯಟ್ ರಸ್ಕೀನಾ - ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ - ಉಡುಪಿ
ಕೋಣಂದೂರು ಲಿಂಗಪ್ಪ - ಶಿವಮೊಗ್ಗ
ಉಮೇಶ ಪಂಬ - ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್ - ಧಾರವಾಡ
ಕೆ. ದಿನೇಶ್ - ಬೆಂಗಳೂರು
ಶಾಂತರಾಜು - ತುಮಕೂರು
ಜಾಫರ್ ಮೊಹಿಯುದ್ದೀನ್ - ರಾಯಚೂರು
ಪೆನ್ನ ಓಬಳಯ್ಯ - ಬೆಂಗಳೂರು ಗ್ರಾಮಾಂತರ
ಶಾಂತಿ ಬಾಯಿ- ಬಳ್ಳಾರಿ
ಪುಂಡಲೀಕ ಶಾಸ್ತ್ರೀ (ಬುಡಬುಡಕೆ) - ಬೆಳಗಾವಿ
ಹೊರನಾಡು-ಹೊರದೇಶ
ಜಕರಿಯ ಬಜಪೆ (ಸೌದಿ)
ಪಿವಿ ಶೆಟ್ಟಿ (ಮುಂಬೈ)
ಪರಿಸರ
ರಾಮೇಗೌಡ - ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ - ಯಾದಗಿರಿ
ಕೃಷಿ
ಡಾ. ಎಸ್.ವಿ. ಹಿತ್ತಲಮನಿ, ಹಾವೇರಿ
ಎಂ ಸಿ ರಂಗಸ್ವಾಮಿ - ಹಾಸನ
ಮಾಧ್ಯಮ
ಕೆ.ಸುಬ್ರಮಣ್ಯ, ಬೆಂಗಳೂರು
ಅಂಶಿ ಪ್ರಸನ್ನಕುಮಾರ್, ಮೈಸೂರು
ಬಿ.ಎಂ. ಹನೀಫ್, ದಕ್ಷಿಣ ಕನ್ನಡ
ಎಂ ಸಿದ್ಧರಾಜು - ಮಂಡ್ಯ
ರಾಮಯ್ಯ - ಚಿಕ್ಕಬಳ್ಳಾಪುರ
ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್, ದಾವಣಗೆರೆ
ಡಾ. ಆರ್.ವಿ. ನಾಡಗೌಡ - ಗದಗ
ಈ 70 ಮಂದಿ ಸಾಧಕರಿಗೆ ಕನ್ನಡ ರಾಜ್ಯೋತ್ಸವದ ದಿನದಂದು (ನವೆಂಬರ್ 1) ರವೀಂದ್ರ ಕಲಾಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.


Click it and Unblock the Notifications











