ಕರಿಕಾನು ಗುಡ್ಡದ ಮೇಲೊಂದು ಪ್ರಮೋದ್ ಶೆಟ್ರ ಅಧಿಕಪ್ರಸಂಗ; ಶೀಘ್ರದಲ್ಲೇ ಬರುತ್ತೆ ಟೀಸರ್
ಶೆಟ್ರು ಗ್ಯಾಂಗ್‌ನಲ್ಲಿ ಗುರುತಿಸಿಕೊಂಡವರಲ್ಲಿ ಪ್ರಮೋದ್ ಶೆಟ್ಟಿ ಕೂಡ ಒಬ್ಬರು. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಸಿನಿಮಾಗಳಲ್ಲಿ ಪ್ರಮೋದ್ ಶೆಟ್ಟಿಗೆ ಒಂದಲ್ಲ ಒಂದು ಪಾತ್ರ ಫಿಕ್ಸ್ ಆಗಿರುತ್ತಿತ್ತು. ಆದ್ರೀಗ ರಿಷಬ್ ಶೆಟ್ಟಿ ಅವರಿಗಾಗಿ ಒಂದು ಸಿನಿಮಾ ನಿರ್ಮಾಣವನ್ನೇ ಮಾಡಿದ್ದಾರೆ. ಅದುವೇ 'ಲಾಫಿಂಗ್ ಬುದ್ಧ'. ಈ ಸಿನಿಮಾ ಈ ವಾರವಷ್ಟೇ ರಿಲೀಸ್ ಆಗಿದೆ.
ಅತ್ತ ಥಿಯೇಟರ್‌ನಲ್ಲಿ 'ಲಾಫಿಂಗ್ ಬುದ್ಧ' ಪ್ರದರ್ಶನವನ್ನು ಕಾಣುತ್ತಿದೆ. ಇದೇ ಸಂಭ್ರಮದಲ್ಲಿ ಇನ್ನೊಂದು ಕಡೆ ಪ್ರಮೋದ್ ಶೆಟ್ಟಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಎರಡೆರಡು ಖುಷಿಯ ಜೊತೆಗೆ ಪ್ರಮೋದ್ ಶೆಟ್ಟಿಗೆ ಅವರ ಹೊಸ ಸಿನಿಮಾದ ತಂಡ ಮತ್ತೊಂದು ಸಂತೋಷ ಖುಷಿಯನ್ನು ಕೊಟ್ಟಿದೆ.

ಹೌದು ಪ್ರಮೋದ್ ಶೆಟ್ಟಿ 'ಲಾಫಿಂಗ್ ಬುದ್ಧ' ರಿಲೀಸ್ ಆಗಿರುವ ಖುಷಿಯಲ್ಲಿ ಇದ್ದಾರೆ. ಈ ಸಿನಿಮಾ ಬಳಿಕ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಸಿನಿಮಾ ರೆಡಿಯಾಗಿದೆ. ಅದುವೇ 'ಕರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ'. ಪ್ರಮೋದ್ ಶೆಟ್ಟಿ ಹುಟ್ಟುಹಬ್ಬದ ಚಿತ್ರತಂಡ ಖುಷಿ ವಿಷಯವನ್ನು ಹಂಚಿಕೊಂಡಿದೆ. ಅದೇನಂದ್ರೆ, ಶೀಘ್ರವೇ ಈ ಸಿನಿಮಾ ಟೀಸರ್ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.
ಪ್ರಮೋದ್ ಶೆಟ್ಟಿಯ ಹುಟ್ಟುಹಬ್ಬದ ಅಂಗವಾಗಿ 'ಕರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ' ಸಿನಿಮಾ ತಂಡ ತಮ್ಮ ನಾಯಕ ನಟನಿಗೆ ಶುಭ ಕೋರಿದೆ. ಇದರ ಜೊತೆಗೇ ಪೋಸ್ಟರ್ ಒಂದನ್ನು ಕೂಡ ರಿಲೀಸ್ ಮಾಡಿದ್ದು, ಶೀಘ್ರದಲ್ಲಿಯೇ ಟೀಸರ್ ಬರುತ್ತೆ ಎಂದು ಅನೌನ್ಸ್ ಕೂಡ ಮಾಡಿದೆ. ಈ ಪೋಸ್ಟರ್ ಕೂಡ ಗಮನ ಸೆಳೆಯುತ್ತಿದೆ.

ಅಂದ್ಹಾಗೆ, 'ಕರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ' ಸಿನಿಮಾವನ್ನು ಅನೀಶ್ ಎಸ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಇವರು 'ವಡ್ಡಾರಾಧಕ', 'ಶಬರಿ'ಯಂತಹ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರಿಗೆ ತಮ್ಮೂರಿನ ಕಥೆಗಳು ಎಲ್ಲಾ ಕಡೆಗೂ ತಲುಪಬೇಕು ಅನ್ನುವುದೇ ಆಸೆ. ಹಾಗಾಗಿ ಇಂತಹದ್ದೇ ಇನ್ನೊಂದು ಕಥೆಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ.
ಈ ವಿಶಿಷ್ಠ ಕಥೆಯನ್ನು ಚಿತ್ತರಂಜನ್ ಕಶ್ಯಪ್, ವಲ್ಲಭ ಸೂರಿ ಮತ್ತು ಸುನೀತ್ ಹಲಗೇರಿ ತಮ್ಮದೇ Gunnybag Studios ಸಂಸ್ಥೆ ಮೂಲಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಈ ಯುವ ಸಂಸ್ಥೆ ಈಗ ಪ್ರಮೋದ್ ಶೆಟ್ಟಿಯನ್ನು ನಾಯಕರನ್ನಾಗಿ ಮಾಡುವ ಮೂಲಕ 'ಕರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ' ಹೇಳುವುದಕ್ಕೆ ಹೊರಟಿದೆ.
ಪ್ರಮೋದ್ ಶೆಟ್ಟಿ ಜೊತೆಗೆ ಈ ಸಿನಿಮಾದಲ್ಲಿ ರಾಘು ಶಿವಮೊಗ್ಗ, ಕಿರಣ್ ನಾಯ್ಕ್, ಮಂಜುನಾಥ್ ಹೆಗ್ಡೆ, ಚಂದ್ರಕಲಾ, ಕೆ ಜಿ ಕೃಷ್ಣಮೂರ್ತಿ ಮತ್ತು ಸೇರಿದಂತೆ ಹಲವು ಪ್ರಮುಖ ನಟರು ಕಾಣಿಸಿಕೊಂಡಿದ್ದಾರೆ. ಸುಮಂತ್ ಶರ್ಮಾ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ಚೇತನ್ ಕುಮಾರ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಂಜೀವ್ ಜಾಗಿರ್ದರ್ ಎಡಿಟಿಂಗ್ ಮಾಡುತ್ತಿದ್ದಾರೆ. ಖುಷಿ ವಿಷಯ ಅಂದರೆ, ಈಗಾಗಲೇ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಮುಗಿದಿದ್ದು, ಮೊದಲ ಟೀಸರ್ ರಿಲೀಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.


Click it and Unblock the Notifications











