"ಏನ್.. ಶೆಟ್ರೆ ಹೊಂಬಾಳೆ ಅನ್‌ಫಾಲೋ ಮಾಡಿದ್ದೀರಲ್ಲ ಅಂತ ಕೇಳಿದೆ"; ಪ್ರಮೋದ್‌ ಶೆಟ್ಟಿ ರಿಷಬ್ ಕೊಟ್ಟ ಉತ್ತರ ಹೀಗಿತ್ತು

ಕಳೆದ ಕೆಲವು ದಿನಗಳಿಂದ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ ಬಗ್ಗೆ ಚರ್ಚೆಯಾಗುತ್ತಿದೆ. ಇದ್ದಕ್ಕಿದ್ದ ಹಾಗೇ ರಿಷಬ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ ಅನ್ನು ಅನ್‌ಫಾಲೋ ಮಾಡಿದ್ದು ಅವರ ಅಭಿಮಾನಿಗಳನ್ನು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. 'ಕಾಂತಾರ ಚಾಪ್ಟರ್ 1' ಬಳಿಕ 2ನೇ ಅಧ್ಯಾಯವನ್ನು ರಿಷಬ್ ಶೆಟ್ಟಿ ಕೈಗೆತ್ತಿಕೊಳ್ಳಬೇಕಿತ್ತು. ಅಷ್ಟರಲ್ಲೇ ಇಬ್ಬರೂ ಬೇರೆಯಾಗಿದ್ದಾರೆ,

ಅಷ್ಟಕ್ಕೂ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ ಮಧ್ಯೆ ಮೈಮನಸ್ಸು ಮೂಡಿದ್ದು ಯಾಕೆ? 'ಕಾಂತಾರ ಚಾಪ್ಟರ್ 1' ಬಳಿಕ ಅಂತಹದ್ದೇನಾಯ್ತು? ಅನ್ನೋದನ್ನು ಇಬ್ಬರೂ ಬಹಿರಂಗ ಪಡಿಸಿಲ್ಲ. ಅಷ್ಟೇ ಅಲ್ಲದೆ, ಇತ್ತೀಚೆಗೆ ರುಕ್ಮಿಣಿ ವಸಂರ್, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವರನ್ನು ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದರು. ಹೀಗಾಗಿ ವಿಷಯ ಗಂಭೀರ ಇರಬಹುದೇನೋ ಎಂಬ ಮಾತುಗಳು ಸಿನಿಮಾ ಮಂದಿಯ ಬಾಯಿಯಲ್ಲಿ ಕೇಳಿ ಬಂದಿದ್ದವು.

Pramod Shetty reacted to Rishab Shetty and Hombale Films split and unfollowing each other

ಆದರೆ, ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಮಧ್ಯೆ ಏನಾಗಿದೆ ಅನ್ನೋ ವಿಷಯ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ಇತ್ತೀಚೆಗೆ ರಿಷಬ್ ಶೆಟ್ಟಿಯ ಆಪ್ತ ಪ್ರಮೋದ್ ಶೆಟ್ಟಿ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 2ನೇ ಅಧ್ಯಾಯ ಹಾಗೂ ರಿಷಬ್ ಹಾಗೀ ಹೊಂಬಾಳೆ ಫಿಲ್ಮ್ ನಡುವಿನ ವೈಮನಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದೇನು ಅಂತ ನೋಡುವುದಾರೇ.

ಯುಗಾದಿ ಹಬ್ಬದ ದಿನ ರಿಷಬ್ ಶೆಟ್ಟಿ ತಮ್ಮ ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್‌ನಿಂದ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದರು. ಇಲ್ಲಿಂದ 2ನೇ ಅಧ್ಯಾಯ ಆರಂಭ ಎಂದು ಘೋಷಿಸಿದ್ದರು. ಇದು ಸಿನಿಮಾ ಮಂದಿ ಸೇರಿದಂತೆ ಅವರ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿತ್ತು. ಈ ವಿಷಯ ಪ್ರಮೋದ್ ಶೆಟ್ಟಿ ಕಿವಿಗೆ ಬೀಳುತ್ತಿದ್ದಂತೆ ರಿಷಬ್ ಶೆಟ್ಟಿ ಜೊತೆ ಮಾತಾಡಿದ್ದರು. ಆಗ ಅವರಿಗೆ ಸಿಕ್ಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Also Read
ಯಶ್ ಹಾದಿಯಲ್ಲಿ ರಿಷಬ್ ಶೆಟ್ಟಿ; 'ಜೈ ಹನುಮಾನ್' ಚಿತ್ರಕ್ಕೆ ನಿರ್ಮಾಪಕನಾಗಿ ಭಾರೀ ಡೀಲ್
ಯಶ್ ಹಾದಿಯಲ್ಲಿ ರಿಷಬ್ ಶೆಟ್ಟಿ; 'ಜೈ ಹನುಮಾನ್' ಚಿತ್ರಕ್ಕೆ ನಿರ್ಮಾಪಕನಾಗಿ ಭಾರೀ ಡೀಲ್

"ಅದು ಅನೌನ್ಸ್ ಆಗಿದ್ದು ಹಬ್ಬದ ದಿನ. ಅವತ್ತೇ ನಾನು ರಿಷಬ್‌ಗೆ ಫೋನ್ ಮಾಡುವುದಕ್ಕೆ ಟ್ರೈ ಮಾಡಿದೆ. ಆಗ ನನಗೆ ಗೊತ್ತಾಗಿದ್ದು, ಏನೋ ಮನಸ್ತಾಪ ಆಗಿದೆ. ಹೊಂಬಾಳೆಯನ್ನು ಅನ್‌ಫಾಲೋ ಮಾಡಿದ್ದಾನೆ ಅಂತ ಮೀಡಿಯಾದಲ್ಲಿ ಬರುತ್ತಿತ್ತು. ಆ ವೇಳೆ ನಾನು ಯಲ್ಲಾಪುರದಲ್ಲಿ ಶೂಟಿಂಗ್‌ನಲ್ಲಿ ಇದ್ದೆ. ಫಾರೆಸ್ಟ್ ಒಳಗೆ ಬೇರೆ ಇದ್ವಿ ನೆಟ್‌ವರ್ಕ್ ಇಲ್ಲ. ಹೊರಗಡೆ ಇಷ್ಟೆಲ್ಲ ನಡೆದಿದ್ದು ನನಗೆ ಗೊತ್ತಿರಲಿಲ್ಲ" ಎಂದು ಹೇಳಿದ್ದಾರೆ.

Pramod Shetty reacted to Rishab Shetty and Hombale Films split and unfollowing each other

ಹಾಗೇ, "ನನಗೆ ಯಾರೋ ಫೋನ್ ಮಾಡಿ ಇದು ಹೊಸ ಅಧ್ಯಾಯ ಅಂತ ಹಾಕಿದ್ದಾರೆ ಏನು ಅಂತ ಕೇಳಿದರು. ನಾನು ರಿಷಬ್‌ಗೆ ಫೋನ್ ಮಾಡಿದೆ. ಏನಿದು ಅಧ್ಯಾಯ ಅಂತ ಹಾಕಿದ್ದೀಯಲ್ಲ ಅಂತ ಕೇಳಿದೆ. ಅದಕ್ಕೆ ಏನಿಲ್ಲ ಶೆಟ್ರೆ, ನಿಮಗೆ ರಿಷಬ್ ಶೆಟ್ಟಿ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮಾಡೋದು ಬೇಡ ಅಂತ ಹೇಳಿದ್ನಲ. ಅದನ್ನು ಮತ್ತೆ ಮಾಡೋಣ ಅಂತ ಹೇಳಿದ. ಕಾಂತಾರ ಆದಾಗ ರಿಷಬ್ ಶೆಟ್ಟಿ ಬ್ಯಾನರ್‌ನಲ್ಲಿ ಸಿನಿಮಾ ಮಾಡೋದು ಬೇಡ ಮಗಾ, ನನಗೆ ಎರಡೂ ಕಡೆ ತಲೆ ಕೊಡುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದ. ಈಗ ಮತ್ತೆ ಒಟ್ಟಿಗೆ ಮಾಡಿಕೊಂಡು ಹೋಗೋಣ. ಪ್ರೊಡಕ್ಷನ್ ನಮ್ಮಲ್ಲೇ ಮಾಡೋಣ ಅಂತ ಹೇಳಿದ." ಎಂದು ಪ್ರಮೋದ್ ಶೆಟ್ಟಿ ರಿವೀಲ್ ಮಾಡಿದ್ದಾರೆ.

ಇದೇ ಸಂಭಾಷಣೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಅನ್ನು ಅನ್‌ಫಾಲೋ ಮಾಡಿದ್ದರ ಬಗ್ಗೆನೂ ಕೇಳಿದ್ದಾರೆ. ಅದಕ್ಕೆ ರಿಷಬ್ ಶೆಟ್ಟಿ ರಿಯಾಕ್ಷನ್ ಹೀಗಿತ್ತು. "ಏನ್ ಶೆಟ್ರೆ ಹೊಂಬಾಳೆ ಅನ್‌ಫಾಲೋ ಮಾಡಿದ್ದೀರಲ್ಲ ಅಂತ ಕೇಳಿದೆ. ಇರಲಿ, ಶೆಟ್ರೆ ಟೈಮ್ ಬಂದಾಗ ಹೇಳ್ತೀನಿ ಅಂತ ಹೇಳಿದ. ನನಗೂ ಅಷ್ಟೇ ಗೊತ್ತಿದ್ದರಿಂದ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ." ಎಂದು ಪ್ರಮೋದ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಇದರ ಜೊತೆ ರಕ್ಷಿತ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಬಗ್ಗೆ ಹಬ್ಬಿರುವ ಸುದ್ದಿ ಬಗ್ಗೆನೂ ಪ್ರತಿಕ್ರಿಯಿಸಿದ್ದಾರೆ. "ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಒಟ್ಟಿಗೆ ರೆಗ್ಯೂಲರ್ ಆಗಿ ಸಿಗುವುದಕ್ಕೆ ಆಗುತ್ತಿಲ್ಲ ಅಂತ ಒಂದು ವರ್ಷದ ಮುಂಚೆನೇ ಹೇಳಿದ್ದೆ. ಮುಂಚೆ ಅಷ್ಟು ರೆಗ್ಯೂಲರ್ ಆಗಿ ಸಿಗುವುದಕ್ಕೆ ಆಗುತ್ತಿಲ್ಲ. ಮೊದಲು ವಾರಕ್ಕೆ ನಾಲ್ಕು ದಿನ ಸಿಗುತ್ತಿದ್ವಿ. ಆಮೇಲೆ ವಾರಕ್ಕೆ ಒಂದು ದಿನ ಆಯ್ತು. ಆಮೇಲೆ ತಿಂಗಳಿಗೆ ಒಂದು ದಿನ ಆಯ್ತು. ಈಗ ವರ್ಷಕ್ಕೆ ಒಂದು ದಿನ ಆಗಿದೆ. ಅದರಿಂದ ಊಹಾ-ಪೋಹಗಳು ಹುಟ್ಟಿಕೊಳ್ಳುತ್ತಿದೆಯೋ ಏನೋ ಗೊತ್ತಿಲ್ಲ. ಮನಸ್ತಾಪಗಳು ಅಂತ ಬಂದಾಗ ಅದು ಬೇರೆ ಬೇರೆ ರೀತಿ ಇರುತ್ತೆ. ಹಾಗಂತ ಅದು ಸಿಟ್ಟಲ್ಲ. ಅದು ಒಬ್ಬನ ಕರಿಯರ್ ಹಾಳಾಗುತ್ತೆ ಅನ್ನೋ ಸಿಟ್ಟಲ್ಲ. ಇಲ್ಲ ಒಬ್ಬನ ಕರಿಯರ್ ಹಾಳು ಮಾಡುತ್ತಾನೆ ಅನ್ನೋ ಸಿಟ್ಟಲ್ಲ. ಮಾತಾಡ್ತಾ ಮಾತಾಡ್ತಾ ಅವನಿಗೆ ಸಿನಿಮಾ ಮೇಲಿರುವ ರೀತಿ, ಇವನಿಗೆ ಸಿನಿಮಾ ಮೇಲಿರುವ ರೀತಿ ವ್ಯತ್ಯಾಸ ಆಗುತ್ತಾ ಬರುತ್ತೆ. ಅದರಿಂದ ಅವರಿಗೆ ಹಾಗೆ ಅನಿಸಿರಬಹುದೇನೋ. ನನಗೆ ಗೊತ್ತಿರೋ ಹಾಗೇ ಎಲ್ಲರೂ ಪರಸ್ಪರ ಫೋನ್ ಕಾಲ್‌ಗಳನ್ನು ಮಾಡುತ್ತಾರೆ. ಅವರು ಪರಸ್ಪರ ಸಿನಿಮಾ ವಿಶ್ಲೇಷಣೆಗಳನ್ನು ಮಾಡಿಕೊಳ್ಳುತ್ತಲೇ ಇದ್ದಾರೆ." ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.

More from Filmibeat

English summary
Pramod Shetty reacted to Rishab Shetty and Hombale Films split and unfollowing each other.
Read more about: rishab shetty controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X